ಕೆಲ ಬಿಜೆಪಿ ಕಾರ್ಯಕರ್ತರು ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದು, ನನ್ನ ಜೀವಕ್ಕೂ ಸಂಚಕಾರ ಇದೆ: ಎಚ್‌ಡಿ ರೇವಣ್ಣ

ಕೆಲ ಬಿಜೆಪಿ ಕಾರ್ಯಕರ್ತರು ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದು, ನನ್ನ ಜೀವಕ್ಕೂ ಸಂಚಕಾರ ಇದೆ ಶಾಸಕ ಎಚ್‌.ಡಿ.ರೇವಣ್ಣ ಅವರು ಆರೋಪಿಸಿದ್ದಾರೆ.
ಎಚ್‌ಡಿ ರೇವಣ್ಣ
ಎಚ್‌ಡಿ ರೇವಣ್ಣ

ಬೆಂಗಳೂರು: ಕೆಲ ಬಿಜೆಪಿ ಕಾರ್ಯಕರ್ತರು ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದು, ನನ್ನ ಜೀವಕ್ಕೂ ಸಂಚಕಾರ ಇದೆ ಶಾಸಕ ಎಚ್‌.ಡಿ.ರೇವಣ್ಣ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ತಿಂಗಳ ಹಿಂದೆ ನಾನು ಸಿಗಲಿಲ್ಲ ಎಂದು ಗುತ್ತಿಗೆದಾರ ಅಶ್ವಥ್‌ ಅವರ ಕಾರು ಹಿಂಬಾಲಿಸಿ ಹತ್ಯೆಗೆ ಯತ್ನಿಸಿದ್ದರು. ಇಂತಹ ದುಷ್ಕೃತ್ಯಕ್ಕೆಲ್ಲ ನಾನು ಹೆದರಿ ಓಡುವುದಿಲ್ಲ, ಜಿಲ್ಲೆಯಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಹೇಳಿದರು.

ದೇವೇಗೌಡರು ಯಾವ್ಯಾವ ರಾಜಕೀಯ ಪಕ್ಷಗಳ ಮುಖಂಡರನ್ನು ಬೆಳೆಸಿದ್ದಾರೆ ಎಂಬುದು ನನಗೆ ಗೊತ್ತು. ನಾನು ಬೇನಾಮಿ ಆಸ್ತಿ ಅಥವಾ ಯಾರ ಮೇಲಾದರೂ ದೌರ್ಜನ್ಯ ಮಾಡಿದ್ದರೆ ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ,''ಎಂದು ಸವಾಲು ಹಾಕಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವರು ನಮ್ಮ ಕುಟುಂಬವನ್ನು ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದಾರೆ. ಇದರ ಹಿಂದೆ ರಾಜ್ಯ ಮತ್ತು ಸ್ಥಳೀಯ ಕೆಲವು ರಾಜಕಾರಣಿಗಳ ಕೈವಾಡ ಇದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.

ವಕೀಲ ಹಾಗೂ ಬಿಜೆಪಿ ಮುಖಂಡ ಜಿ.ದೇವರಾಜೇಗೌಡರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ''ನನ್ನ ಜೀವನದಲ್ಲಿ ಬ್ಲ್ಯಾಕ್‌ಮೇಲ್‌ ರಾಜಕಾರಣ ಮಾಡಿಲ್ಲ, ಆತನ ಬಳಿಗೆ ರಾಜಿ ಸಂಧಾನಕ್ಕಾಗಿ ಯಾರನ್ನೂ ಕಳುಹಿಸಿಲ್ಲ, ಅಂತಹ ಅನಿವಾರ್ಯತೆ ನನಗೆ ಬಂದಿಲ್ಲ ಎಂದರು.

'ಕಳೆದ ನಾಲ್ಕು ವರ್ಷದಿಂದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನೂ ಕೂಡ ಕೆಲವರು ಬ್ಲ್ಯಾಕ್‌ಮೇಲ್‌ ಮಾಡಿದ ಉದಾಹರಣೆ ಇವೆ. ಆ ಹುಡುಗ ಆ ನೋವನ್ನು ನುಂಗಿಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದಾನೆ ಎಂದರು.

ಹಾಸನ ಲೋಕಸಭೆ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಥವಾ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಸ್ವಾಗತ. ನನ್ನ ಮಗನೇ ನಿಲ್ಲಬೇಕು ಎಂಬ ಆಸೆ ನನಗೆ ಇಲ್ಲ. ಪ್ರಜ್ವಲ್‌ ರೇವಣ್ಣ ಎಂಪಿ ಆದ ನಂತರ ಏನೇನು ಮಾಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com