ಸೈಬರ್ ವಂಚನೆ; ಅಧಿಕ ಲಾಭದ ಆಮಿಷಕ್ಕೆ ಸಿಲುಕಿ 1.8 ಕೋಟಿ ರೂ. ಕಳೆದುಕೊಂಡ ಧಾರವಾಡದ ವೈದ್ಯ

ಧಾರವಾಡದ 45 ವರ್ಷದ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ವೈದ್ಯರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ವಂಚನೆ ನಡೆದಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಹುಬ್ಬಳ್ಳಿ: ಧಾರವಾಡದ 45 ವರ್ಷದ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ವೈದ್ಯರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ವಂಚನೆ ನಡೆದಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಂಚಕ, ಹಣಕಾಸು ಸಲಹೆಗಾರನಂತೆ ನಟಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮೇಲೆ ಲಾಭ ನೀಡುವ ಭರವಸೆ ನೀಡುವ ಮೂಲಕ ವೈದ್ಯರನ್ನು ವಂಚಿಸಿದ್ದಾನೆ. ಗಣನೀಯ ಲಾಭ ಪಡೆಯಲು ಪ್ಲಾನೆಟ್ ಇಮೇಜ್ ಇಂಟರ್‌ನ್ಯಾಷನಲ್ ಕಂಪನಿಯ ಐಪಿಒನಲ್ಲಿ ಹೂಡಿಕೆ ಮಾಡಲು ಕರೆ ಮಾಡಿದವ ಸಲಹೆ ನೀಡಿದ್ದಾನೆ. ಕರೆ ಮಾಡಿದವರ ಆಜ್ಞೆಯ ಮೇರೆಗೆ ವೈದ್ಯರು ಸಾಮಾಜಿಕ ಮಾಧ್ಯಮ ಸೈಟ್‌ಗೆ ಸೇರಿಕೊಂಡಿದ್ದಾರೆ.

ನಂತರ ಸೈಬರ್ ವಂಚಕ ವೈದ್ಯರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಅವರಿಂದಲೇ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ನಂತರ ವೈದ್ಯರಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 1.79 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾನೆ.

ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಹಣಕಾಸಿನ ವ್ಯವಹಾರದ ವೇಳೆ ಜಾಗೃತಿಯಿಂದ ಇರಲು ಕರೆ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com