ಕಲಬುರಗಿ: ಟಾಯ್ಲೆಟ್ ಕ್ಲೀನಿಂಗ್ ಆಯ್ತು, ಮನೆಗೆಲಸಕ್ಕೂ ವಿದ್ಯಾರ್ಥಿಗಳ ಬಳಕೆ ಆರೋಪ; ಪೋಷಕರಿಂದ ದೂರು ದಾಖಲು

ಶಾಲೆಯ ಮಕ್ಕಳಿಂದ‌ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯ ಹಾಗೂ ತಮ್ಮ‌ ಮನೆಯ ಶೌಚಾಲಯ ಸ್ವಚ್ಚಗೊಳಿಸಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಶಾಲೆಯ ಮಕ್ಕಳಿಂದ‌ ಮುಖ್ಯ ಶಿಕ್ಷಕಿಯೊಬ್ಬರು ಶಾಲೆಯ ಹಾಗೂ ತಮ್ಮ‌ ಮನೆಯ ಶೌಚಾಲಯ ಸ್ವಚ್ಚಗೊಳಿಸಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ.

ಕಲಬುರಗಿ ನಗರದ ಮಾಲಗತ್ತಿ ಗ್ರಾಮದ ರಸ್ತೆಯಲ್ಲಿರೋ ಮೌಲಾನಾ ಆಜಾದ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಹಾಗೂ ಪೋಷಕರು ಇಂತಹದ್ದೊಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಾಂಶುಪಾಲೆ ವಿರುದ್ದ ದೂರು ದಾಖಲಾಗಿದೆ.

ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದೂ ಅಲ್ಲದೆ ತಮ್ಮ ಮನೆಯ ಗಾರ್ಡನ್​ಗೆ ನೀರು ಹಾಕುವ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲೆ ವಿರುದ್ಧ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.

ಕಲಬುರಗಿಯ ಮಾಲಗತ್ತಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಜೋಹ್ರಾ ಜಬೀನ್‌ ವಿರುದ್ದ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಶಾಲೆಯ ಪ್ರಾಂಶುಪಾಲೆ ಜೋಹ್ರಾ ಜಬೀನ್ ಕೆಲವು ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಬಳಸಿದ್ದರೆ, ಇನ್ನು ಕೆಲವರನ್ನು ಅವರ ನಿವಾಸದಲ್ಲಿರುವ ಉದ್ಯಾನವನ್ನು ಸ್ವಚ್ಛಗೊಳಿಸಲು ಸಹ ಕರೆದೊಯ್ಯುತ್ತಿದ್ದರು. ಈ ಕುರಿತು ಕೇಳಿದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಪ್ರಾಂಶುಪಾಲೆ ಸಮರ್ಥಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಲಾಗಿದೆ.

ಜೋಹ್ರಾ ಜುಬೀನ್ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಶೌಚಾಲಯ ಸ್ವಚ್ಚಪಡಿಸಿ, ಕೆಲ ವಿದ್ಯಾರ್ಥಿಗಳನ್ನ ಮನೆಗೆ ಕರೆದುಕೊಂಡು ಹೋಗಿ ಶೌಚಾಲಯ ಸ್ವಚ್ಚ ಮಾಡಿಸುತ್ತಿದ್ದರು. ಒಂದು ವೇಳೆ ವಿದ್ಯಾರ್ಥಿಗಳು ಕೆಲಸಕ್ಕೆ ನಿರಾಕರಿಸಿದರೆ ಎಚ್‌ಎಮ್ ಜೋಹ್ರಾ ಜುಬೀನ್ ಅವರು ಥಳಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಎಚ್ಚರಿಕೆಯ ಹೊರತಾಗಿಯೂ, ಜೋಹ್ರಾ ಅವರು ಶನಿವಾರ ತನ್ನ ತೋಟವನ್ನು ಸ್ವಚ್ಛಗೊಳಿಸಲು ತಮ್ಮ ಮಗನಿಗೆ ಕೇಳಿದ್ದಾರೆ ಎಂದು ಜಮೀರ್ ಗೆ ಕೇಳಿದ್ದಾರೆ. ಮಧ್ಯಾಹ್ನ 2 ಗಂಟೆಯಾದರೂ ಬಾಲಕ ಶಾಲೆಯಿಂದ ಹಿಂತಿರುಗದ ಕಾರಣ, ಜಮೀರ್ ಶಾಲಾ ಶಿಕ್ಷಕರನ್ನು ಸಂಪರ್ಕಿಸಿದಾಗ ಪ್ರಾಂಶುಪಾಲರು ತನ್ನ ಮಗನನ್ನು ಆಕೆಯ ನಿವಾಸಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಂಶುಪಾಲರ ಮೊಬೈಲ್‌ಗೆ ಕರೆ ಮಾಡಿದಾಗ ಆಕೆಯ ಪತಿ ಮಾತನಾಡಿದ ಹೆದರಿಸಿದ್ದಾರೆ. ಕೊನೆಗೆ ತನ್ನ ಮಗನನ್ನು ಮರಳಿ ಪಡೆಯಲು ಪೊಲೀಸ್ ಸಹಾಯವಾಣಿ ‘112’ಗೆ  ಕರೆ ಮಾಡಿದ್ದಾರೆ ಎಂದು ಜಮೀರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಲಸ ಮಾಡಲು ನಿರಾಕರಿಸಿದರೆ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಥಳಿಸುವುದಾಗಿ ಪ್ರಾಂಶುಪಾಲರು ಬೆದರಿಸುತ್ತಿದ್ದರು ಎಂದು ಆರೋಪಿಸಿರುವ ಜಮೀರ್, ಹಾಲ್ ಟಿಕೆಟ್ ಮತ್ತು ಶಾಲಾ ಪುಸ್ತಕಗಳನ್ನು ನೀಡಲು ಜೋಹ್ರಾ ಪ್ರತಿ ವಿದ್ಯಾರ್ಥಿಯಿಂದ 100 ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಜೋಹ್ರಾ, ತಾನು ಕಟ್ಟುನಿಟ್ಟಾದ ಶಿಕ್ಷಕಿಯಾಗಿದ್ದು, ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾಗಿ ಪಾಠಗಳನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಅದರಂತೆ, ಕೆಲವು ವಿದ್ಯಾರ್ಥಿಗಳು, ತಮ್ಮ ಪಾಠದಿಂದ ತಪ್ಪಿಸಿಕೊಳ್ಳಲು ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಅಲ್ಲದೆ, ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮೌಲಾನಾ ಆಜಾದ್ ಮಾಡೆಲ್ ಹೈಸ್ಕೂಲ್‌ನ ಶೇ. 93  ವಿದ್ಯಾರ್ಥಿಗಳು ಉತ್ತೀರ್ಣರಾದ ನಂತರ, ಮೌಲಾನಾ ಆಜಾದ್ ಮಾದರಿ ಪ್ರೌಢಶಾಲೆಯ ಸುತ್ತಮುತ್ತಲಿನ ಕೆಲವು ಖಾಸಗಿ ಶಾಲೆಗಳು ತಮ್ಮ ಹೆಸರನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿದೆ. ಆ ಶಾಲೆಗಳು ಪೋಷಕರನ್ನು ದೂರು ನೀಡಲು ಪ್ರಚೋದಿಸಿರಬಹುದು ಎಂದು ಜೋಹ್ರಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಪ್ರಾಂಶುಪಾಲರ ವಿರುದ್ಧ ನೀಡಿರುವ ದೂರಿನ ಸ್ವೀಕೃತಿಯನ್ನು ಖಚಿತಪಡಿಸಿದ ಕಲಬುರಗಿ ಪೊಲೀಸ್ ಆಯುಕ್ತ ಚೇತನ್ ಆರ್, ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ಮಾತನಾಡಿ, ಸಮಿತಿಯು ಸಂಸ್ಥೆಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com