ಇಲ್ಲಿನ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮನಸ್ಥಿತಿಯಿಂದ ಹೊರಬರಬೇಕು: ಬಿಜೆಪಿ ಮುಖಂಡ ಸಿಟಿ ರವಿ

ಘಜ್ನಿ, ಘೋರಿ ಮತ್ತು ಬಾಬರ್‌ನ ಮನಸ್ಥಿತಿ ಅಪಾಯಕಾರಿಯಾಗಿದ್ದು, 'ಇಲ್ಲಿನ ಮುಸ್ಲಿಮರು ಆ ಮನಸ್ಥಿತಿಯಿಂದ ಹೊರಬರಬೇಕು' ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಟಿ ರವಿ ಮಂಗಳವಾರ ಹೇಳಿದ್ದಾರೆ.
ಸಿಟಿ ರವಿ
ಸಿಟಿ ರವಿ

ಚಿಕ್ಕಮಗಳೂರು: ಘಜ್ನಿ, ಘೋರಿ ಮತ್ತು ಬಾಬರ್‌ನ ಮನಸ್ಥಿತಿ ಅಪಾಯಕಾರಿಯಾಗಿದ್ದು, 'ಇಲ್ಲಿನ ಮುಸ್ಲಿಮರು ಆ ಮನಸ್ಥಿತಿಯಿಂದ ಹೊರಬರಬೇಕು' ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿಟಿ ರವಿ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಘಜ್ನಿ, ಘೋರಿ, ಖಿಲ್ಜಿ, ಔರಂಗಜೇಬ್, ಇತರ ಮೊಘಲರು ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ 42,000 ದೇವಾಲಯಗಳನ್ನು ನೆಲಸಮಗೊಳಿಸಲಾಯಿತು. ಭಾರತೀಯ ಮುಸ್ಲಿಮರು ಈ ಆಕ್ರಮಣಕಾರರೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದಿಲ್ಲ. ನಾವು ಎಲ್ಲಾ ಮುಸ್ಲಿಮರನ್ನು ಒಂದೇ ಎಂದು ಊಹಿಸುವುದಿಲ್ಲ. ಮುಸ್ಲಿಮರು ಶಿಶುನಾಳ ಷರೀಫ್, ಎಪಿಜೆ ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಹೊಂದಬೇಕು. ಆಗ ಭ್ರಾತೃತ್ವ ಭಾವನೆ ಬಲಗೊಳ್ಳುತ್ತದೆ' ಎಂದಿದ್ದಾರೆ.

'ಆಕ್ರಮಣಕಾರರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ಭಾರತೀಯ ಮುಸ್ಲಿಮರು, ಸನಾತನ ಧರ್ಮದಲ್ಲಿ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತಾ ದೇಶದಲ್ಲಿಯೇ ಉಳಿದಿದ್ದರು. ಅವರ ಆಲೋಚನೆಯೂ ಬದಲಾಯಿತು. ದೇವಾಲಯಗಳನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು 'ಹರಾಮ್' ಎಂದು ಕೆಲವರು ಭಾವಿಸಬಹುದು. ಅವರಿಗೆ ಹೀಗೆ ಅನ್ನಿಸಿದಾಗ, ಮುಸ್ಲಿಮರು ವಿಶಾಲ ಮನೋಭಾವವನ್ನು ತೋರಿಸಬಹುದು' ಎಂದು ಸಿಟಿ ರವಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ಹೇಳಿಕೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರವಿ, ‘ಹಿರಿಯರಿಗೆ, ಹುದ್ದೆಗೆ ಗೌರವ ನೀಡಬೇಕು. ಸಂಸದ ಹೆಗಡೆ ಅವರದ್ದು ವಿಭಿನ್ನ ಶೈಲಿ. ಆದರೆ, ಇತರರು ಅಪಮಾನ ಮಾಡಬಹುದು ಎಂದರ್ಥವಲ್ಲ. ನಾನು ಅವರ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ಭಗವಾನ್ ರಾಮನು ಎಲ್ಲರನ್ನೂ ಒಳಗೊಳ್ಳುತ್ತಾನೆ. ಸಿಎಂ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಸಂಭೋದಿಸುವುದು ಅಗೌರವಕ್ಕೆ ಸಮಾನವಾಗಿದೆ' ಎಂದು ಅವರು ಹೇಳಿದರು.

ರಾಮಮಂದಿರ ಉದ್ಘಾಟನೆಗೆ ('ಪ್ರಾಣ ಪ್ರತಿಷ್ಠಾಪನೆ') ಹಾಜರಾಗುವುದಿಲ್ಲ. ನಂತರ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ತೀವ್ರವಾಗಿ ಪ್ರತಿಕ್ರಿಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com