ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಹಿನ್ನಡೆ: ಜೆಡಿಎಸ್ ಶಾಸಕ ವೆಂಕಟಶಿವ ರೆಡ್ಡಿ ವಿರುದ್ಧದ ಮಾನನಷ್ಟ ಮೊಕದ್ದಮೆ ಖುಲಾಸೆ

ಮಾಜಿ ವಿಧಾನಸಭಾ ಸ್ಪೀಕರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಕೆಆರ್ ರಮೇಶ್ ಕುಮಾರ್ ಜೆಡಿಎಸ್ ಶಾಸಕ ಜಿಕೆ ವೆಂಕಟಶಿವ ರೆಡ್ಡಿ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಿಂದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ವೆಂಕಟ ಶಿವರೆಡ್ಡಿ
ವೆಂಕಟ ಶಿವರೆಡ್ಡಿ

ಬೆಂಗಳೂರು: ಮಾಜಿ ವಿಧಾನಸಭಾ ಸ್ಪೀಕರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಕೆಆರ್ ರಮೇಶ್ ಕುಮಾರ್ ಜೆಡಿಎಸ್ ಶಾಸಕ ಜಿಕೆ ವೆಂಕಟಶಿವ ರೆಡ್ಡಿ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಿಂದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಯಾರಾದರೂ ಅರಣ್ಯ ಅಥವಾ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದರೆ, ಆ ಭೂಮಿಯನ್ನು ರಕ್ಷಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಉತ್ತಮ, ಅಂತೆಯೇ, ಯಾರಾದರೂ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡರೆ, ಅದು ಕೂಡ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುತ್ತದೆ ಎಂದು ಕೋರ್ಟ್ ತಿಳಿಸಿದೆ.

ನ್ಯಾಯಯುತ ತನಿಖೆಯನ್ನು ಕೋರುವುದನ್ನು ಮಾನನಷ್ಟ ಎಂದು ಕರೆಯಲಾಗುವುದಿಲ್ಲ. ಈ ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳ ಅಡಿಯಲ್ಲಿ, ಪ್ರಕಟಣೆಯು ಸಾರ್ವಜನಿಕ ಒಳಿತಿಗಾಗಿತ್ತು. , ಆರೋಪಿಯ ಹೇಳಿಕೆಯನ್ನು ಸೆಕ್ಷನ್ 499 ಐಪಿಸಿ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಮಾನನಷ್ಟ ಎಂದು ಕರೆಯಲಾಗುವುದಿಲ್ಲ, ಇದು ಐಪಿಸಿಯ ಸೆಕ್ಷನ್ 499 ರ ಎಕ್ಸೆಪ್ಶನ್ ನಂ 1 ಮತ್ತು 9 ರ ಅಡಿಯಲ್ಲಿ ಒಳಗೊಂಡಿದೆ ಎಂದು ಹೆಚ್ಚುವರಿ CMM ನ್ಯಾಯಾಲಯದ ಜಡ್ಜ್ ಪ್ರೀತ್ ಜೆ, ಹೇಳಿದ್ದಾರೆ.

ಡಿಸೆಂಬರ್ 20, 2019 ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಜೆಡಿಎಸ್ ಶಾಸಕ ವೆಂಕಟ ರೆಡ್ಡಿ, ರಮೇಶ್ ಕುಮಾರ್ ಅವರು 120 ಎಕರೆ ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆರೋಗ್ಯ ಸಚಿವರಾಗಿದ್ದಾಗ 535.22 ಕೋಟಿ ರೂಪಾಯಿ ಅಕ್ರಮವಾಗಿದೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ ಹೀಗಿರುವಾಗ ರೆಡ್ಡಿ ಪ್ರಕರಣ ಸಂಬಂಧ್ಮುಖ್ಯಮಂತ್ರಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com