ನಾಮಫಲಕ ಕಂಬ ತೆರವು ವಿಚಾರ: ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು, ಸಹಜ ಸ್ಥಿತಿಗೆ ಮರಳಿದ ಭಟ್ಕಳ

ನಾಮಫಲಕ ಕಂಬ ತೆರವು ವಿಚಾರ ಸಂಬಂಧ ಉದ್ವಿಗ್ನ ಸ್ಥಿತಿಯಲ್ಲಿದ್ದ ಭಟ್ಕಳದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರಕನ್ನಡ: ನಾಮಫಲಕ ಕಂಬ ತೆರವು ವಿಚಾರ ಸಂಬಂಧ ಉದ್ವಿಗ್ನ ಸ್ಥಿತಿಯಲ್ಲಿದ್ದ ಭಟ್ಕಳದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.

ಸ್ಥಳೀಯ ಹಿಂದೂ ಕಾರ್ಯಕರ್ತ ಕೃಷ್ಣಾ ನಾಯ್ಕ ಅವರು ಮಾತನಾಡಿ, ಪ್ರತಿ ವರ್ಷ ಸಂಕ್ರಾಂತಿ ನಂತರ ಕಂಬರ್ರೆ ಬಣ್ಣ ಬಳಿಯಲಾಗುತ್ತದೆ. ಬಣ್ಣ ಬಳಿಯುವ ಸಲುವಾಗಿ ನಾವು ಕಂಬವನ್ನು ಅಳವಡಿಸಿದ್ದೆವು, ಆದರೆ, ಅನ್ಯ ಕೋಮಿನವರ ದೂರಿನ ಮೇಲೆಗೆ ಸ್ಥಳೀಯ ಅಧಿಕಾರಿಗಳು ಕಂಬವನ್ನು ತೆರವುಗೊಳಿಸಿದ್ದಾರೆಂದು ಹೇಳಿದ್ದಾರೆ.

ಇದೀಗ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆಗಳಾಗಬಾರದು ಎಂಬ ಉದ್ದೇಶದಿಂದ ಪ್ರತಿಭಟನೆ ಹಿಂಪಡೆಯಲಾಗಿದೆ. ಅಧಿಕಾರಿಗಳಿಗೆ ಜನವರಿ 22ರವರೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಹಶೀಲ್ದಾರ್ ಮತ್ತು ಪೊಲೀಸರು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಹೀಗಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದಿದ್ದಾರೆ.

ಸ್ಥಳದಲ್ಲಿ ಮಸೀದಿ ಇದೆ. ಆದರೆ, ಇಲ್ಲಿ ಮದರಸಾ ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ಮಸೀದಿ ನಿರ್ಮಾಣ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com