ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ 'ಹಕ್ಕಿ ಹಬ್ಬ' ಆಯೋಜನೆಗೆ ಕೆಇಡಿಬಿ ನಿರ್ಧಾರ!
ಬೆಂಗಳೂರು: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು (ಕೆಇಡಿಬಿ) ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಹಕ್ಕಿ ಹಬ್ಬ ಆಯೋಜಿಸಲು ನಿರ್ಧರಿಸಿದೆ. ಹಿನ್ನೀರು ಪ್ರದೇಶದಲ್ಲಿ ಹಕ್ಕಿಗಳ ಹಬ್ಬ ನಡೆಯಲಿದ್ದು, ಸಂಶೋಧಕರು, ವನ್ಯಜೀವಿ ಛಾಯಾಗ್ರಾಹಕರು, ಪಕ್ಷಿವೀಕ್ಷಕರು ಈ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ವರ್ಷ ಬಾಗಲಕೋಟೆಯ ಆಲಮಟ್ಟಿ ಹಿನ್ನೀರಿನಲ್ಲಿ ಜನವರಿ 26-28 ರವರೆಗೆ ನಡೆಯಲಿದೆ. ಈ ಬಾರಿ ಫ್ಲೆಮಿಂಗೊಗಳು ವಿಶೇಷ ಆಕರ್ಷಣೆಯಾಗಿವೆ. ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆಯ ನಂತರ ಹಕ್ಕಿ ಹಬ್ಬದ ಮುಂದಿನ ಆವೃತ್ತಿ ನಡೆಯಲಿದೆ. ಪ್ರವಾಸಿಗರಿಗೆ ವಿವಿಧ ಜಾತಿಯ ಪಕ್ಷಿಗಳ ಬಗ್ಗೆ ಮತ್ತು ಪಕ್ಷಿಗಳ ಪ್ರಾಮುಖ್ಯತೆ ಮತ್ತು ಪ್ರಕೃತಿ ಸಂರಕ್ಷಣೆಯ ಬಗ್ಗೆ ಕಲ್ಪನೆಯನ್ನು ನೀಡುವುದು ಹಬ್ಬದ ಕಲ್ಪನೆಯಾಗಿದೆ.
ಕರ್ನಾಟಕ ಅರಣ್ಯ ಇಲಾಖೆ, ಜಂಗಲ್ ಲಾಡ್ಜ್, ರೆಸಾರ್ಟ್‌ಗಳು ಮತ್ತು ಕೆಇಡಿಬಿ ಈ ಉತ್ಸವವನ್ನು ಆಯೋಜಿಸಿದೆ. ಮಾಸಾಂತ್ಯಕ್ಕೆ ನಿರೀಕ್ಷಿತ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಸೇರುವ ಕಾರಣ ಮಾಮೂಲಿ ಪದ್ಧತಿಯಂತೆ ಈ ತಿಂಗಳ ಆರಂಭದ ಬದಲು ಈ ತಿಂಗಳಾಂತ್ಯಕ್ಕೆ ಉತ್ಸವ ನಡೆಸಲಾಗುತ್ತಿದೆ. ಆಲಮಟ್ಟಿ ಹಿನ್ನೀರು ಮತ್ತು ಅಣೆಕಟ್ಟು ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಸೂಕ್ತ ಸ್ಥಳವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಸ್ಥಳವು ಕೊಕ್ಕೆರೆ ಬೆಳ್ಳೂರು, ರಂಗತಿಟ್ಟು ಅಥವಾ ಇತರ ಸ್ಥಳಗಳಂತೆಯೇ ವಲಸೆ ಹಕ್ಕಿಗಳ ಪ್ರಮುಖ ತಾಣವಾಗಿದೆ.ಆದರೆ ಇಲ್ಲಿಯವರೆಗೆ ಇಲ್ಲಿ ಉತ್ಸವ ನಡೆಯದ ಕಾರಣ ಈ ಬಾರಿ ಬಾಗಲಕೋಟೆಯನ್ನು ಆಯ್ಕೆ ಮಾಡಲಾಗಿದೆ’ ಎಂದು ಕೆಇಡಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪೆಲಿಕನ್, ಕೊಕ್ಕರೆಗಳು ಮತ್ತು ವೈವಿಧ್ಯಮಯ ಜಲಪಕ್ಷಿಗಳನ್ನು ಇಲ್ಲಿ ನೋಡಬಹುದು ಈ ಬಾರಿ ಪಕ್ಷಿ ಉತ್ಸವಕ್ಕೆ ಗ್ರೇಟರ್ ಫ್ಲೆಮಿಂಗೊವನ್ನು ಲಾಂಛನವಾಗಿ ಆಯ್ಕೆ ಮಾಡಲಾಗಿದೆ ಎಂದು ಅರಣ್ಯ, ವನ್ಯಜೀವಿಗಳ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಇಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಪುಷ್ಕರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು:
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ