ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ರಾಮರಾಜ್ಯಕ್ಕೆ ಅಯೋಧ್ಯೆ ರಾಮಮಂದಿರ ಅಡಿಪಾಯ: ಮಾಜಿ ಸಿಎಂ ಬೊಮ್ಮಾಯಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮ ರಾಜ್ಯಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದರು.
Published on

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮ ರಾಜ್ಯಕ್ಕೆ ಅಡಿಗಲ್ಲು ಹಾಕಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದರು.

ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ ಅವರು ಶ್ರೀರಾಮನ ಕುರಿತ ಹಾಡುಗಳಿಗೆ ಸಂಗಿತ ಸಂಯೋಜನೆ ಮಾಡಿರುವ ಧ್ವನಿ ಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಮ ರಾಜ್ಯ ಎಂದರೆ ಎಲ್ಲರಿಗೂ ಸಮಾನ ಅವಕಾಶ, ಸಮೃದ್ಧಿ, ಬಡತನ ಎಲ್ಲಿಯೂ ಕಾಣದಂತಾಗುವುದು, ಅನ್ಯಾಯ ತಡೆಯುವುದು, ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡುವುದೇ ಮೋದಿ ಅವರ ರಾಮರಾಜ್ಯದ ಕನಸು ಎಂದು ಹೇಳಿದರು.

500 ವರ್ಷಗಳಿಗೂ ಹೆಚ್ಚು ಕಾಲ ಅಯೋಧ್ಯೆಯ ಜನ್ಮ ಸ್ಥಳದಿಂದ ರಾಮನನ್ನು ದೂರ ಇಡಲಾಗಿತ್ತು. ರಾಮನ ಜನ್ಮಸ್ಥಳದಲ್ಲಿ ಬಾಬ್ರಿ ಮಸೀದಿ ಇದ್ದ ಕಾರಣ ಅಲ್ಲಿ ಪೂಜೆ ಸಲ್ಲಿಸಲು ಆಗಿರಲಿಲ್ಲ. ಜ.22ಕ್ಕೆ ಮತ್ತೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತದೆ. ನರೇಂದ್ರ ಮೋದಿಯವರಿಂದಲೇ ತ್ರೇತಾಯುಗದ ರಾಮನ ಪ್ರತಿಷ್ಠಾಪನೆ ಆಗಬೇಕು ಎಂದು ಮೊದಲೇ ತೀರ್ಮಾನ ಆಗಿತ್ತು ಎನಿಸುತ್ತದೆ. ನಾವೆಲ್ಲರೂ ಅದೃಷ್ಟವಂತರು, ರಾಮರಾಜ್ಯ ಸ್ಥಾಪನೆಯಿಂದಾಗಿ ಎಲ್ಲರೂ ಸಂತೋಷದಿಂದ ಬದುಕಲಿ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com