ಮೇಲುಕೋಟೆ: ಶಿಕ್ಷಕಿ ದೀಪಿಕ ಶವವಾಗಿ ಪತ್ತೆ ಪ್ರಕರಣ; ಯುವಕನ ಮೇಲೆ ಅನುಮಾನ!

ಮೇಲುಕೊಟೆಯ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣದಿಂದ ಇಡೀ ಮಂಡ್ಯ ಜಿಲ್ಲೆ ಬೆಚ್ಚಿ ಬಿದ್ದಿದೆ. ಣಿಕ್ಯಹಳ್ಳಿಯ 28 ವರ್ಷದ ಅತಿಥಿ ಶಿಕ್ಷಕಿ ದೀಪಿಕಾ ಶವ ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು...
ಹತ್ಯೆಯಾದ ಶಿಕ್ಷಕಿ ದೀಪಿಕಾ.
ಹತ್ಯೆಯಾದ ಶಿಕ್ಷಕಿ ದೀಪಿಕಾ.

ಮಂಡ್ಯ: ಮೇಲುಕೊಟೆಯ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣದಿಂದ ಇಡೀ ಮಂಡ್ಯ ಜಿಲ್ಲೆ ಬೆಚ್ಚಿ ಬಿದ್ದಿದೆ. ಣಿಕ್ಯಹಳ್ಳಿಯ 28 ವರ್ಷದ ಅತಿಥಿ ಶಿಕ್ಷಕಿ ದೀಪಿಕಾ ಶವ ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಇದೀಗ ಯುವಕನೋರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಯುವಕ ದೀಪಿಕಾ ಅವರನ್ನು ಅಕ್ಕಾ ಅಕ್ಕಾ ಎಂದುಕೊಂಡು ದೀಪಿಕಾಗೆ ಹತ್ತಿರವಾಗಿದ್ದ. ಆತನ ಮೇಲೆ ದೀಪಿಕಾ ಪತಿ ಅನುಮಾನ ವ್ಯಕ್ತಪಡಿಸಿದ್ದು, ಇದೀಗ ನಾಪತ್ತೆಯಾಗಿರುವ ಈ ಯುವಕನ ಮೇಲೆ ಪೊಲೀಸರಿಗೂ ಅನುಮಾನ ತೀವ್ರಗೊಂಡಿದೆ.

ದೀಪಿಕಾ ಕುಟುಂಬಸ್ಥರು ಯುವಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಆತ ಕೂಡ ನಾಪತ್ತೆಯಾಗಿರುವುದು ಅನುಮಾನ ತೀವ್ರವಾಗುವಂತೆ ಮಾಡಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ದಿನ ದೀಪಿಕಾ ಮತ್ತು ಯುವಕನ ನಡುವೆ ಜಗಳ ನಡೆದಿದೆ. ಈ ಜಗಳದ ದೃಶ್ಯವನ್ನು ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಬಳಿಕ ಪ್ರವಾಸಿಗರು ಪೊಲೀಸರಿಗೆ ವಿಡಿಯೋವನ್ನು ನೀಡಿದ್ದಾರೆ. ಇದೇ ಸ್ಥಳದಲ್ಲಿಯೇ ದೀಪಿಕಾ ಅವರ ಮೃತದೇಹ ಪತ್ತೆಯಾಗಿತ್ತು.

ಇದಲ್ಲದೆ ಯುವಕ ತನ್ನ ತಂದೆಗೆ ಸಂದೇಶವೊಂದನ್ನು ರವಾನಿಸಿದ್ದು, ನನ್ನ ಹುಡುಕಬೇಡಿ, ಅಕ್ಕಗೆ ಒಳ್ಳೆ ಕಡೆ ಮದುವೆ ಮಾಡಿ ಎಂದು ತಿಳಿಸಿರುವ ವಿಚಾರ ಕೂಡ ಇದೀಗ ಬೆಳಕಿಗೆ ಬಂದಿದೆ. ಈ ಎಲ್ಲಾ ಅಂಶಗಳು ಯುವಕ ಮೇಲೆ ಅನುಮಾನ ತೀವ್ರಗೊಳ್ಳುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com