ಗಣರಾಜ್ಯೋತ್ಸವ: ರಾಜ್ಯದ 21 ಪೋಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಶುಕ್ರವಾರ 75ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್​ಪಿ ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

ಗಮನಾರ್ಹ ಸೇವೆ ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್​​ಪಿ ಅನಿಲ್​​ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್​​ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್​​ಪಿ ಶ್ರೀನಿವಾಸ್ ರಾಜ್ ಬೆಟೋಲಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಪೊಲೀಸ್​ ಇನ್ಸ್​​ಪೆಕ್ಟರ್​ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್​​ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್​ ಇನ್ಸ್​​ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್​ಐ​ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ, ಎಸ್​​ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ, ಹೆಡ್​ ಕಾನ್ಸ್​ಟೇಬಲ್ ಸಿ.ವಿ.ಗೋವಿಂದರಾಜು, ಹೆಡ್​ ಕಾನ್ಸ್​ಟೇಬಲ್ ಮಣಿಕಂಠ ಮಂದರ್ ಬೈಲ್, ಎಎಸ್​ಐ​ ಸಮಂತ್.ಎಸ್, ಹೆಡ್​ ಕಾನ್ಸ್​ಟೇಬಲ್ ನರಸಿಂಹರಾಜು ಎಸ್.ಎನ್, ಎಸ್​ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್​ಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

ವಿಶಿಷ್ಟ ಸೇವಾ ಪದಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೀಡುವ ಒಂದು ಪ್ರಶಸ್ತಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com