ನಾವೆಲ್ಲ ಆರಾಧಿಸುವ ರಾಮ ಬೇರೆ, ಬಿಜೆಪಿಯವರ ರಾಮನೇ ಬೇರೆ: ಸಿಎಂ ಸಿದ್ದರಾಮಯ್ಯ

ಮಹಾತ್ಮಾ ಗಾಂಧಿಯವರ 76 ನೇ ಪುಣ್ಯಸ್ಮರಣೆ ಇಂದು ಜನವರಿ 30ರಂದು ಆಗಿರುವುದರಿಂದ ಬೆಂಗಳೂರಿನ ವಿಧಾನ ಸೌಧದ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಸಿಎಂ ಸಿದ್ದರಾಮಯಯ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ನಮನ
ವಿಧಾನಸೌಧ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ನಮನ

ಬೆಂಗಳೂರು: ಮಹಾತ್ಮಾ ಗಾಂಧಿಯವರ 76 ನೇ ಪುಣ್ಯಸ್ಮರಣೆ ಇಂದು ಜನವರಿ 30ರಂದು ಆಗಿರುವುದರಿಂದ ಬೆಂಗಳೂರಿನ ವಿಧಾನ ಸೌಧದ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಸಿಎಂ ಸಿದ್ದರಾಮಯಯ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಗಾಂಧೀಜಿಯವರು ಪಾಲಿಸಿದ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಅಸಮಾನತೆ ಮತ್ತು ಅಸ್ವೃಶ್ಯತೆಯನ್ನು ಹೋಗಲಾಡಿಸಲು ಒಟ್ಟಾಗಿ ಹೋರಾಡಿದರೆ ಅದು ಮಹಾತ್ಮನಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿಯಾಗಿದೆ ಎಂದು ಹೇಳಿದರು. 

ಗಾಂಧೀಜಿಯವರು ಸಾಯುವಾಗಲೂ ಹೇ ರಾಮ್ ಅನ್ನುತ್ತಾ ಪ್ರಾಣಬಿಟ್ಟರು, ಅವರು ಮತ್ತು ನಾವೆಲ್ಲ ಆರಾಧಿಸುವ ರಾಮನೇ ಬೇರೆ, ಬಿಜೆಪಿಯವರ ರಾಮನೇ ಬೇರೆ. ಸಾಯುವಾಗಲೂ ಹೇ ರಾಮ್ ಅಂದ ಗಾಂಧೀಜಿಯನ್ನು ಕೊಂದವರೂ ರಾಮನ ಜಪ ಮಾಡುತ್ತಿದ್ದಾರೆ, ಅವರು ಶ್ರೀರಾಮನನ್ನು ಕೇವಲ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com