
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಂಜನಾಪುರ ಲೇಔಟ್ ಒಂದು ಭಾಗವು ತನ್ನ ಕುಟುಂಬಕ್ಕೆ ಸೇರಿದ್ದು ಎಂದು ಸ್ವಾಧೀನ ಮಾಡಿಕೊಂಡು ಕಲ್ಲು ಪುಡಿ ಮಾಡುವ ಘಟಕ ಸ್ಥಾಪಿಸಿರುವುದರಿಂದ 100 ಕ್ಕೂ ಹೆಚ್ಚು ಕುಟುಂಬಗಳ ಜೀವನ ದುಸ್ತರವಾಗಿದೆ.
ಒಂದು ಎಕರೆಗೂ ಅಧಿಕ ವಿಸ್ತೀರ್ಣದ ಜಾಗವಿದ್ದು, ಬಿಡಿಎ ಹಾಗೂ ವ್ಯಕ್ತಿ ನಡುವೆ ಕಾನೂನು ಸಮರ ನಡೆಯುತ್ತಿದೆ. ನೂರ್ ಪಾಷಾ ಎಂಬಾತ ಶೆಡ್ ನಿರ್ಮಿಸಿಕೊಂಡು ಕೆಲ ನೌಕರರೊಂದಿಗೆ ಕಲ್ಲು ಪುಡಿ ಮಾಡುವ ಘಟಕ ಮಾಡಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ನಿವಾಸಿಗಳ ಸ್ಯಾನಿಟರಿ ಪೈಪ್‌ಲೈನ್ ನ್ನು ನಿರ್ಬಂಧಿಸಿದ್ದಾರೆ.
ಈ ಸಮಸ್ಯೆ ಹೇಗೆ ಬಗೆಹರಿಸುವುದು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಅಂಜನಾಪುರ ಎರಡನೇ ಬ್ಲಾಕ್‌ನಲ್ಲಿ ಗೋಶಾಲೆ ನಿವೇಶನಕ್ಕಾಗಿ ಮೀಸಲಿಟ್ಟಿರುವ ಸಾಮಾನ್ಯ ಜಾಗ ದುರ್ಬಳಕೆಯಾಗುತ್ತಿರುವ ಬಗ್ಗೆ ನಿವಾಸಿಗಳು ಬಿಡಿಎಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಬಿಡಿಎ ಅಧಿಕಾರಿಗಳು ಸಹ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ನೂರ್ ಪಾಷಾ ಅದರ ಗೋಜಿಗೇ ಹೋಗುತ್ತಿಲ್ಲ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಬಿಡಿಎ ಇಂಜಿನಿಯರ್, “ಆಸ್ತಿ ತನ್ನದೆಂದು ಹೇಳಿಕೊಂಡು, ಪಾಷಾ ವರ್ಷಗಳ ಹಿಂದೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ದಾಖಲೆಗಳಲ್ಲಿ ಮಾಲೀಕರು ಯಾರೆಂದು ತೋರಿಸಲು ಸಾಧ್ಯವಾಗದ ಕಾರಣ ಬಿಡಿಎ ಅದನ್ನು ವಿರೋಧಿಸಿತು. ನ್ಯಾಯಾಲಯವು ಆಸ್ತಿಗೆ ತಡೆಯಾಜ್ಞೆ ನೀಡಿದೆ, ಆದ್ದರಿಂದ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ.
ಇಂಜಿನಿಯರ್ ಮತ್ತು ಇಲ್ಲಿನ ನಿವಾಸಿ ಅರ್ಚನಾ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿ, “ಕಾನೂನುಬದ್ಧವಾಗಿ ಮಂಜೂರು ಮಾಡಿದ ಭೂಮಿ ಬಿಡಿಎ ಆಸ್ತಿಯಾಗಿರುವುದರಿಂದ ಯಾರಾದರೂ ಏನು ಮಾಡುತ್ತಾರೆ ಎಂಬುದರ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಹಿಂದೆ ಒಂದು ಸಣ್ಣ ಶೆಡ್ ಇತ್ತು, ಅದನ್ನು ಅವರು ಇತ್ತೀಚೆಗೆ ಸ್ಲೈಡಿಂಗ್ ಗಾಜಿನ ಕಿಟಕಿ ನಿರ್ಮಿಸಿದ್ದಾರೆ. ಸುತ್ತಲೂ ಸಣ್ಣ ಕಾಂಪೌಂಡ್ ಗೋಡೆಯನ್ನೂ ರಾತ್ರೋರಾತ್ರಿ ನಿರ್ಮಿಸಿದ್ದಾರೆ. ಈ ಭೂಮಿಯನ್ನು ಗೋಶಾಲೆಗಾಗಿ ಮೀಸಲಿಡಲಾಗಿದ್ದು, ಸರ್ಕಾರದ ಆಸ್ತಿಯಾಗಿದೆ ಎನ್ನುತ್ತಾರೆ.
ಇಲ್ಲಿನ ನಿವಾಸಿ ಶ್ವೇತಾರಾಣಿ, ನಾವು ಸಮಸ್ಯೆಯ ಕುರಿತು ಬಿಡಿಎ ಕಚೇರಿಯನ್ನು ಹಲವು ಬಾರಿ ಸಂಪರ್ಕಿಸಿದ್ದೇವೆ. ನೂರ್ ಪಾಷಾ 2015 ರಲ್ಲಿ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡರು. ದಾಖಲೆಗಳ ಪ್ರಕಾರ, ಇದು ಬಿಡಿಎ ಆಸ್ತಿಯಾಗಿದೆ. ಆದಾಗ್ಯೂ, ಅವರು ತಮ್ಮ ಕುಟುಂಬದ ಆಸ್ತಿಯನ್ನು ತನಗೆ ತಿಳಿಯದೆ ತನ್ನ ಸೋದರಸಂಬಂಧಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ, ನಂತರ ಅವರು ಅದನ್ನು ಲೇಔಟ್‌ಗಾಗಿ ಬಿಡಿಎಗೆ ಹಸ್ತಾಂತರಿಸಿದರು, ಅವರಿಗೆ ಪರಿಹಾರವನ್ನು ನೀಡಲಾಯಿತು.
ಲೇಔಟ್ ಮತ್ತು ಸುತ್ತಮುತ್ತಲಿನ ಕನಿಷ್ಠ 100 ಕುಟುಂಬಗಳಿಗೆ ಪೂರೈಸುವ ನೈರ್ಮಲ್ಯ ಪೈಪ್‌ಲೈನ್ ಈ ಜಮೀನಿನ ಮೂಲಕ ಹಾದುಹೋಗುವುದರಿಂದ ನಿರ್ಬಂಧಿಸಲಾಗಿದೆ. BWSSB ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದೆ, ಇದರಿಂದ ತ್ಯಾಜ್ಯ ಹೊರಗೆ ಹರಿಯುತ್ತದೆ ಎಂದರು.
ಬಿಡಿಎ ಇಂಜಿನಿಯರ್, ನ್ಯಾಯಾಲಯದ ಆದೇಶದಿಂದಾಗಿ ನಾವು ಅಸಹಾಯಕರಾಗಿದ್ದೇವೆ, ಶೆಡ್ ನ್ನು ಕೆಡವಲು ಸಾಧ್ಯವಿಲ್ಲ. ನಾವು ಸ್ಯಾನಿಟರಿ ಪೈಪ್‌ಲೈನ್ ಸಮಸ್ಯೆಯನ್ನು ತೆರವುಗೊಳಿಸಿದ್ದೇವೆ ಎಂದರು. ಮುಂದಿನ ಕೋರ್ಟ್ ವಿಚಾರಣೆಯಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ ಎಂದರು.
ನೂರ್ ಪಾಷಾ ವಿರುದ್ಧ ಭೂಕಬಳಿಕೆ ಪ್ರಕರಣ ದಾಖಲಿಸಲು ಬಿಡಿಎ ಮುಂದಾಗಿದೆ.
Advertisement