ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI

ಕರ್ನಾಟಕದ ಹಲವು ಭಾಗಗಳಲ್ಲಿ ಜುಲೈ 12ರವರೆಗೆ ವ್ಯಾಪಕ ಮಳೆ: ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ

ಶೃಂಗೇರಿಯಿಂದ ಶಿವಮೊಗ್ಗದವರೆಗಿನ ಹವಾಮಾನವನ್ನು ಪತ್ತೆಹಚ್ಚುವ @ByTheRiverTunga ಪ್ರಕಾರ, ತುಂಗಾ ನದಿಯು ಈ ವರ್ಷ ಇಲ್ಲಿಯವರೆಗೆ ಅತಿ ಹೆಚ್ಚು ನೀರು ಸೇರಿದೆ.
Published on

ಬೆಂಗಳೂರು: ರಾಜ್ಯದಲ್ಲಿ ಜುಲೈ 12ರವರೆಗೆ ಅತಿ ಹೆಚ್ಚು ಮಳೆಯಾಗಲಿದೆ. ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾದರೆ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ಬೆಂಗಳೂರಿನ ಭಾರತೀಯ ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಜುಲೈನಲ್ಲಿ ಇದುವರೆಗೆ ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ವಿಶೇಷವಾಗಿ ಆಗುಂಬೆಯಲ್ಲಿ ಜುಲೈ 3ರಂದು 34 ಮಿಮೀ ಮಳೆ ದಾಖಲಾಗಿದೆ ಎಂದರು. ಏತನ್ಮಧ್ಯೆ, ಈ ಬಾರಿ ಮಲೆನಾಡು ಜಿಲ್ಲೆ ಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಶೃಂಗೇರಿಯಿಂದ ಶಿವಮೊಗ್ಗದವರೆಗಿನ ಹವಾಮಾನವನ್ನು ಪತ್ತೆಹಚ್ಚುವ @ByTheRiverTunga ಪ್ರಕಾರ, ತುಂಗಾ ನದಿಯು ಈ ವರ್ಷ ಇಲ್ಲಿಯವರೆಗೆ ಅತಿ ಹೆಚ್ಚು ನೀರು ಸೇರಿದೆ.

ಶೃಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಋತುವಿನಲ್ಲಿ ಅತಿ ಹೆಚ್ಚು ಮಳೆ ಜುಲೈ 3ರಂದು ಆಗಿದೆ. ಮತ್ತೊಬ್ಬ 'ಎಕ್ಸ್' ಬಳಕೆದಾರ @ravikeerthi22 ಗುರುವಾರ ಸಂಜೆ 5 ಗಂಟೆಗೆ ಪೋಸ್ಟ್ ಮಾಡಿದ್ದು, ಶಿವಮೊಗ್ಗದ ಮಹಿಷಿಯಲ್ಲಿ ಕಳೆದ 24 ಗಂಟೆಗಳಲ್ಲಿ ನೀರಿನ ಮಟ್ಟ ಸುಮಾರು 3 ಮೀ ಹೆಚ್ಚಾಗಿದೆ, ಅಪಾಯದ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಹರಿಯುತ್ತಿದೆ, ಆದರೆ ಆಗುಂಬೆ-ಶೃಂಗೇರಿ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ ಎಂದು ಹೇಳಿದರು.

ಸಂಗ್ರಹ ಚಿತ್ರ
ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ

ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಗ್ರಾಮಗಳು ತತ್ತರಿಸಿದ್ದು, ತಗ್ಗು ಪ್ರದೇಶದ ಜನರನ್ನು ದೋಣಿಗಳಲ್ಲಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com