
ಬೆಂಗಳೂರು: ಚಿತ್ರದುರ್ಗದ 33 ವರ್ಷದ ಎಸ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಬೆಂಗಳೂರು ಮಾಜಿ ಉಪಮೇಯರ್ ಸಿಎಸ್ ರಾಮಮೋಹನ್ ರಾಜು ಸೇರಿದಂತೆ ಮೂವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜೈಲಿನಲ್ಲಿರುವ ನಟ ದರ್ಶನ್ ನೀಡಿರುವ ಹೇಳಿಕೆ ಆಧರಿಸಿ ರಾಜು ಅವರಿಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ದರ್ಶನ್ ಅವರ ಆರ್‌ಆರ್‌ನಗರದ ಮನೆಯಲ್ಲಿ ನಡೆದ ಮಹಜರ್ ವೇಳೆ ಬೊಮ್ಮನಹಳ್ಳಿ ವಾರ್ಡ್‌ನ ಬಿಜೆಪಿ ಮಾಜಿ ಕಾರ್ಪೊರೇಟರ್ ರಾಜು ನೀಡಿದ್ದ ಸುಮಾರು 40 ಲಕ್ಷ ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ನಂಬರ್ 1 ಪವಿತ್ರಾ ಗೌಡ ಅವರ ಸ್ನೇಹಿತೆ ಹಾಗೂ ಮತ್ತೋರ್ವ ಆರೋಪಿ ಪ್ರದೋಶ್ ಅವರ ಸ್ನೇಹಿತನಿಗೆ ಇನ್ನೆರಡು ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಿದ ರಾಜು ಹಾಜರಾಗಿ ಹೇಳಿಕೆ ನೀಡಿದ್ದಾರೆ. ದರ್ಶನ್‌ಗೆ ಹಣ ಏಕೆ ನೀಡಲಾಗಿದೆ ಮತ್ತು ಅದರ ಮೂಲದ ಬಗ್ಗೆ ಕೇಳಲು ಪೊಲೀಸರು ಅವರನ್ನು ಕರೆಸಿದ್ದರು. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಗಳನ್ನು ಭೇಟಿ ಮಾಡಿದ ರಾಜು ಅವರು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಾನು ದರ್ಶನ್ ಅವರಿಂದ ಹಣ ಪಡೆದು ಹಿಂದಿರುಗಿಸಿದ್ದೆ.ಇದು ಆತನ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಹಣವಾಗಿರಬೇಕು. ಘಟನೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಜೂನ್ 10 ರಂದು ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ಶರಣಾದ ಆರೋಪಿಗಳಲ್ಲಿ ಒಬ್ಬನಿಗೆ ಹಣದ ಸಹಾಯ ಮಾಡಿದ್ದಾಳೆ ಎನ್ನಲಾದ ಪವಿತ್ರಾ ಸ್ನೇಹಿತೆ ಸಮತಾ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಪ್ರದೋಶ್ ಸ್ನೇಹಿತ ಕಾರ್ತಿಕ್ ಪುರೋಹಿತ್ ಎಂದು ಗುರುತಿಸಲಾದ ವ್ಯಕ್ತಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ಘಟನೆ ವೇಳೆ ಕಾರ್ತಿಕ್ ಪ್ರದೋಶ್ ಜೊತೆಗಿದ್ದರು ಎನ್ನಲಾಗಿದೆ. ಶಾಸಕರ ಚಾಲಕನಾಗಿರುವ ಕಾರ್ತಿಕ್ ತಲೆಮರೆಸಿಕೊಂಡಿದ್ದಾನೆ. ಮೂವರಿಗೂ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿದೆ.
ಬಾಬುಲ್ ಖಾನ್, ಅಮೀರ್ ಖಾನ್ ಮತ್ತು ಸುಶೀಲಮ್ಮ ನಟ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದು. ಪಬ್‌ನ ಸಿಬ್ಬಂದಿಯನ್ನು ಸಹ ಸಾಕ್ಷಿಗಳನ್ನಾಗಿ ಮಾಡಲಾಗುವುದು. ಘಟನೆಯ ದಿನ ದರ್ಶನ್ ಆರ್‌ಆರ್‌ನಗರದಲ್ಲಿರುವ ಪಬ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
Advertisement