
ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪತ್ನಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ನೀಡಿದ್ದ ಪರಿಹಾರ ಮೊತ್ತ 1 ಲಕ್ಷ ರೂಪಾಯಿ ಚೆಕ್ ಮೂರು ವರ್ಷಗಳಾದರೂ ಇನ್ನೂ ಮಹಿಳೆಯ ಖಾತೆಗೆ ಹಣ ಬಂದಿಲ್ಲ.
ಖಾಸಗಿ ಸಾರಿಗೆ ಗುತ್ತಿಗೆದಾರ ಸಂತೋಷ್ ಈಶ್ವರ್ ಸೌಂದಟ್ಟೆ (40ವ) ಅವರು ಏಪ್ರಿಲ್-ಮೇ 2021 ರಲ್ಲಿ ಕೋವಿಡ್-ಪಾಸಿಟಿವ್ ಸೋಂಕು ತಗುಲಿ 30ಕ್ಕೂ ಹೆಚ್ಚು ದಿನಗಳ ಕಾಲ ನಾಲ್ಕು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಬೆಂಗಳೂರಿನ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿಧನರಾಗುವ ಮೊದಲು ಹತ್ತು ದಿನಗಳ ಕಾಲ ಒಳರೋಗಿಯಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆಘಾತಕ್ಕೊಳಗಾದ ಅವರ ಪತ್ನಿ ಅಶ್ವಿನಿ ಸೌಂದತ್ತೆಗೆ ಡಿಸೆಂಬರ್ 2022 ರಲ್ಲಿ ಸರ್ಕಾರದಿಂದ 590773 ಸಂಖ್ಯೆಯನ್ನು ಹೊಂದಿರುವ ಪರಿಹಾರದ ಚೆಕ್ ನ್ನು ನೀಡಲಾಗಿತ್ತು. ಆಗಿನ ಬಿಜೆಪಿ ಸರ್ಕಾರವು ನಿಧನರಾದ ಕೋವಿಡ್ ರೋಗಿಗಳ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತ್ತು.
ಅಶ್ವಿನಿ ತನ್ನ ಬ್ಯಾಂಕ್‌ನಲ್ಲಿ ಚೆಕ್ ನ್ನು ಸಲ್ಲಿಸಿ ತನ್ನ ಖಾತೆಗೆ ಹಣ ಜಮಾ ಆಗುವವರೆಗೆ ಕಾಯುತ್ತಿದ್ದರು. ತಿಂಗಳುಗಳೇ ಕಳೆದರೂ ಹಣ ಸಿಕ್ಕಿರಲಿಲ್ಲ. ಚೆಕ್ ನಲ್ಲಿ ಅಶ್ವಿನಿ ಬದಲಿಗೆ ಅಶ್ವಿನ್ ಎಂದು ಬರೆಯಲಾಗಿತ್ತು, ಜೊತೆಗೆ 'ಐ' ಅದರಲ್ಲಿ ಸ್ಪಷ್ಟವಾಗಿ ಕಾಣೆಯಾಗಿದೆ. ಇದುವೇ ಇದುವರೆಗೆ ಹಣ ಸಿಗದಿರಲು ಕಾರಣ ಎನ್ನಲಾಗುತ್ತಿದೆ.
ಚೆಕ್ ನಲ್ಲಿ ಅಶ್ವಿನ್ ಬದಲಿಗೆ ಐ ಸೇರಿಸಲು ಅವರು ಸರ್ಕಾರಿ ಕಚೇರಿಗೆ ಅಧಿಕಾರಿಗಳನ್ನು ಸಾಕಷ್ಟು ಬಾರಿ ಸರ್ಕಾರಿ ಕಚೇರಿ ಬಾಗಿಲು ತಟ್ಟಿ ಬಳಲಿ ಹೋಗಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಾನು 2022 ಮತ್ತು 2024 ರ ನಡುವೆ ಆನೇಕಲ್‌ನಲ್ಲಿರುವ ತಹಶೀಲ್ದಾರ್ ಕಚೇರಿಗೆ ಎರಡು ಬಾರಿ ಮತ್ತು ಬೆಂಗಳೂರಿನ ಡಿಸಿ ಕಚೇರಿಗೆ ನಾಲ್ಕು ಬಾರಿ ಭೇಟಿ ನೀಡಿದ್ದೇನೆ. ಹಲವಾರು ಬಾರಿ ಕರೆ ಮಾಡಿದ್ದೇನೆ. ಪ್ರತಿ ಬಾರಿ ಅಧಿಕಾರಿಗಳು ನನ್ನ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರೂ ಇದುವರೆಗೆ ಏನೂ ಆಗಿಲ್ಲ ಎನ್ನುತ್ತಾರೆ.
ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ. ತಹಶೀಲ್ದಾರ್ ಅವರ ವೈಯಕ್ತಿಕ ಸಂಖ್ಯೆಗೆ ಕರೆ ಮಾಡಲು ನನ್ನನ್ನು ಕೇಳಿದರು, ಆದರೆ ಅನೇಕರು ನನಗೆ ಹಾಗೆ ಮಾಡಬೇಡ ಎನ್ನುತ್ತಾರೆ ಎಂದರು.
ಅಶ್ವಿನಿ ಅವರ ಮಾವ ಈಶ್ವರ್ ಸೌಂದಟ್ಟೆ ಅವರು ಸಹ ಅನೇಕ ಬಾರಿ ಸರ್ಕಾರಿ ಕಚೇರಿಗೆ ಭೇಟಿ ಮಾಡಿದರೂ ಇದುವರೆಗೆ ಏನೂ ಪ್ರಯೋಜನವಾಗಿಲ್ಲ. ಅಶ್ವಿನಿ ಮಾತ್ರವಲ್ಲದೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಪರಿಹಾರದ ಚೆಕ್ ಪಡೆದ 12 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೆಂದರೆ, ಎಂ ನಾಗರಾಜು, ಶಾಂತಮ್ಮ, ಮಾಳಮ್ಮ, ಮುನಿಯಮ್ಮ, ಜಯಮ್ಮ, ಜಗದೀಶ್ ಎನ್ ಎಸ್, ಸುಧಾ, ಶರತ್, ಕ್ಲಾರಾ ಮೇರಿ, ರತ್ನಮ್ಮ, ಜಯಮ್ಮ ಮತ್ತು ಸುಮಿತ್ರಾ ಆಗಿದ್ದಾರೆ.
ತಹಶೀಲ್ದಾರ್ ಮತ್ತು ಡಿಸಿ ಕಚೇರಿಗೆ ಟಿಎನ್‌ಐಇ ಪ್ರತಿನಿಧಿ ಸಂಪರ್ಕಿಸಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಎಚ್ಚೆತ್ತ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ನಾವು ತಕ್ಷಣ ಸಹಾಯ ಮಾಡಲು ಮುಂದಾಗುತ್ತೇವೆ ಎಂದರು.
ಸಂತೋಷ್ ಅವರ ಆಸ್ಪತ್ರೆ ವೆಚ್ಚಕ್ಕಾಗಿ ಸೌಂದಟ್ಟೆ ಕುಟುಂಬ ಸುಮಾರು 23 ಲಕ್ಷ ರೂಪಾಯಿ ಖರ್ಚು ಮಾಡಿತ್ತು.
Advertisement