'ಮೈಸೂರು ಸಾಹಿತ್ಯ ಸಂಭ್ರಮ'ಕ್ಕೆ ಚಾಲನೆ

ಮೈಸೂರು ಲಿಟ್ರರಿ ಫೋರಂ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಆಯೋಜಿಸಿದ್ದ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು.
ಎಂಟನೇ ಆವೃತ್ತಿಯ ಮೈಸೂರು ಸಾಹಿತ್ಯೋತ್ಸವದಲ್ಲಿ  ನಟ ರಮೇಶ್ ಅರವಿಂದ್, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್, ಪರಿಸರವಾದಿ, ನಟ ಸುರೇಶ್ ಹುಬ್ಳಿಕರ್ ಮತ್ತು ಇತರರು ಹಾಜರಿರುವುದು.
ಎಂಟನೇ ಆವೃತ್ತಿಯ ಮೈಸೂರು ಸಾಹಿತ್ಯೋತ್ಸವದಲ್ಲಿ ನಟ ರಮೇಶ್ ಅರವಿಂದ್, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್, ಪರಿಸರವಾದಿ, ನಟ ಸುರೇಶ್ ಹುಬ್ಳಿಕರ್ ಮತ್ತು ಇತರರು ಹಾಜರಿರುವುದು.
Updated on

ಮೈಸೂರು: 8ನೇ ಆವೃತ್ತಿಯ 'ಮೈಸೂರು ಸಾಹಿತ್ಯ ಸಂಭ್ರಮ'ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಶನಿವಾರ ಚಾಲನೆ ನೀಡಿದರು.

ಮೈಸೂರು ಲಿಟ್ರರಿ ಫೋರಂ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಆಯೋಜಿಸಿದ್ದ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು.

ಉತ್ಸವದ ಆರಂಭದಲ್ಲೇ ಕಾನ್ ಚಲನಚಿತ್ರೋತ್ಸವದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕ ಮೈಸೂರಿನ ಚಿದಾನಂದ ಎಸ್.ನಾಯಕ ಅವರನ್ನು ಸನ್ಮಾನಿಸಲಾಯಿತು. ಈವೇಳೆ ಸಾಹಿತ್ಯ- ಸಿನಿಮಾ ಪ್ರೇಮಿಗಳ ಕರತಾಡನ ಮುಗಿಲುಮುಟ್ಟಿತ್ತು.

ಎಂಟನೇ ಆವೃತ್ತಿಯ ಮೈಸೂರು ಸಾಹಿತ್ಯೋತ್ಸವದಲ್ಲಿ  ನಟ ರಮೇಶ್ ಅರವಿಂದ್, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್, ಪರಿಸರವಾದಿ, ನಟ ಸುರೇಶ್ ಹುಬ್ಳಿಕರ್ ಮತ್ತು ಇತರರು ಹಾಜರಿರುವುದು.
ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಸಜ್ಜು: ಸರ್ವಜ್ಞನ ನಾಡಿನಲ್ಲಿ 3 ದಿನ ಕನ್ನಡ ಹಬ್ಬದ ಸಂಭ್ರಮ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಮೇಶ್ ಅರವಿಂದ ಅವರು, ಓದುಗರಲ್ಲಿ ಆಸಕ್ತಿ ಮೂಡಿಸುವ ಪುಸ್ತಕ ಶ್ರೇಷ್ಠ ಗ್ರಂಥವಾಗಿದೆ. ಬಹಳಷ್ಟು ಆಲೋಚನೆಗಳು ಮತ್ತು ಪ್ರಯತ್ನಗಳನ್ನು ತರುವ ಮೂಲಕ ಪುಸ್ತಕವನ್ನು ಬರೆಯುವುದು ಕಷ್ಟದ ಕೆಲಸ. ಒಬ್ಬ ಬರಹಗಾರನು ಕಥೆಯಲ್ಲಿ ಪ್ರತಿ ವಾಕ್ಯವನ್ನು ಬರೆಯಲು ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಾನೆ. ಬರಹಗಾರ ಮತ್ತು ಓದುಗನ ನಡುವಿನ ಸಂಪರ್ಕವು ಪ್ರತಿ ಪುಸ್ತಕದ ಸೌಂದರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ 2024 ರಲ್ಲಿ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಸನ್ ಫ್ಲವರ್ಸ್ ವರ್ ದಿ ಫರ್ಸ್ಟ್ ಒನ್ಸ್ ಟು ನೋ ಚಿತ್ರವನ್ನು ಪ್ರದರ್ಶಿಸಲಾಯಿತು.

ಇದೇ ವೇಳೆ ಸುಚೇತಾ ಸಂಜಯ್ ಅವರ ‘ಮಿರಾಕಲ್ ಟ್ರೇಸ್ ಫಾರ್ಮೇಷನ್’, ಬಿ.ಎ.ಶಾರದ ಮತ್ತು ಕುಸುಮಾ ಅವರ ‘ಹರಿದಾಸ ಕೀರ್ತನೆಗಳಲ್ಲಿ ಉಪಚಾರ ಸಾಹಿತ್ಯ’ ಮತ್ತು ಅಶ್ವಿನಿ ರಂಜನ್ ಅವರ ‘ಇನ್ ಟ್ರೂ ಕಲರ್ಸ್: ಎ ಕಾಂಪಿಲೇಷನ್ ಆಫ್ ಬ್ಲಾಯ್ ಆ್ಯಂಡ್ ವೈಟ್ ಫೋಟೋಗ್ರಾಫ್ ಆ್ಯಂಡ್ ಅಶ್ವಿನ್ಸ್ ಲೈಫ್ಟ್ ಫೇವರೈಟ್ ಮೆಮೆರೀಸ್ ಆ್ಯಂಡ್ ಸ್ಟೋರೀಸ್' ಎಂಬ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com