
ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಮುಖ ಗುರುತಿಸುವ ತಂತ್ರಜ್ಞಾನದೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದು ಶಾಸಕರ ಆಗಮನ ಮತ್ತು ನಿರ್ಗಮನ ಸಮಯ ಹಾಗೂ ಸದನದಲ್ಲಿ ಎಷ್ಟು ಹೊತ್ತು ಇದ್ದರು ಎನ್ನುವುದನ್ನು ದಾಖಲಿಸುತ್ತದೆ.
ವಿಧಾನಸಭಾ ಸಭಾಂಗಣದ ಪ್ರವೇಶದ್ವಾರವನ್ನು ಹೊಸದಾಗಿ ವಿನ್ಯಾಸಗೊಳಿಸಿರುವುದಲ್ಲದೇ ಸಭಾಂಗಣದ ಒಳಗಿನ ಗೋಡೆಗಳಲ್ಲಿ ಗಂಡಭೇರುಂಡ ಚಿತ್ರವಿರುವ ಗಡಿಯಾರಗಳನ್ನು ಅಳವಡಿಸಲಾಗಿದೆ. ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ AI ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಆಡಳಿತ ಹಾಗೂ ಪ್ರತಿಪಕ್ಷಗಳ ಶಾಸಕರು ಪ್ರವೇಶಿಸುವ ದ್ವಾರಗಳಲ್ಲಿ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿದ್ದು, ಶಾಸಕರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ಕ್ಯಾಮೆರಾ ಮುಂದೆ ನಿಂತು ಪೋಸ್ ಕೊಟ್ಟು ತಮ್ಮ ಸ್ಥಾನಗಳಿಗೆ ತೆರಳಿದರು. ವಿಧಾನಸಭೆಯ ಎಲ್ಲಾ ಶಾಸಕರ ಕುರ್ಚಿಗಳ ಮುಂದಿರುವ ಮೇಜುಗಳಿಗೆ ಸುವರ್ಣ ಬಣ್ಣದ ಲೋಹದ ಕಟ್ಟುಗಳನ್ನು ಅಳವಡಿಸಿರುವುದು ಆಕರ್ಷಣೀಯವಾಗಿದೆ.
ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಇಂದು ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ಆಗಮಿಸಿದ ಮೊದಲ ಶಾಸಕಿಯಾಗಿ ಕಾಂಗ್ರೆಸ್ ನ ರೂಪಕಲಾ ಶಶಿಧರ್ ಅವರು ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ತಿಪಟೂರಿನ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರು ಮೊದಲು ನಿರ್ಗಮಿಸಿದ ಸದಸ್ಯರಾಗಿ ದಾಖಲಾಗಿದ್ದಾರೆ.
ಸಭಾಧ್ಯಕ್ಷ ಯು ಟಿ ಖಾದರ್ ಅವರು, ಕೋರಂ ಗಂಟೆ ಬಾರಿಸುವ ಮುನ್ನವೇ ವಿಧಾನಸಭೆಗೆ ಬರುವ ಶಾಸಕರನ್ನು ಗುರುತಿಸಿ, ಅವರ ಹೆಸರನ್ನು ಸಭಾಪತಿಯವರು ಶ್ಲಾಘಿಸುವ ಪರಿಪಾಠವಿದೆ.
ಕೆಲವು ಹಿರಿಯ ಶಾಸಕರಾದ ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್(ಬಿಜೆಪಿ) ಮತ್ತು ಕೆಲವು ಹಿರಿಯ ಸಚಿವರು, ಕೆಲವು ಶಾಸಕರು ಸ್ವಲ್ಪ ತಡವಾಗಿ ಬಂದರೂ ಸಂಜೆ ಆರು ಅಥವಾ ಎಂಟರವರೆಗೆ ಕಲಾಪದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರೂ ಯಾರೂ ಕೇಳುತ್ತಿರಲಿಲ್ಲ.
"ಆದ್ದರಿಂದ, ನಾವು ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ, ಅದು ನಿಮ್ಮನ್ನು ಗಮನಿಸುತ್ತದೆ ಎಂದು ಸ್ಪೀಕರ್ ಯುಟಿ ಖಾದರ್ ಅವರು ಹೇಳಿದರು.
ಶಾಸಕರು ಎಷ್ಟೊತ್ತಿಗೆ ಬರುತ್ತಾರೆ ಮತ್ತು ಎಷ್ಟೊತ್ತಿಗೆ ಹೋಗುತ್ತಾರೆ ಹಾಗೂ ಎಷ್ಟು ಹೊತ್ತು ವಿಧಾನಸಭೆಯಲ್ಲಿ ಇರುತ್ತಾರೆ ಎಂಬ ಬಗ್ಗೆಎಐ ಕ್ಯಾಮೆರಾ ಮಾಹಿತಿ ದಾಖಲಿಸುತ್ತದೆ. ದಿನದ ಅಂತ್ಯದ ವೇಳೆಗೆ ಅಸೆಂಬ್ಲಿ ಕಾರ್ಯದರ್ಶಿಯ ಬಳ ಇದರ ಡೇಟಾ ಇರುತ್ತದೆ. ಅಧಿಕಾರಿಗಳ ಪ್ರಕಾರ, ಈ ಉಪಕ್ರಮವು ಶಾಸಕರ ಹಾಜರಾತಿ ಮತ್ತು ಅಧಿವೇಶನದಲ್ಲಿ ಅವರ ಭಾಗವಹಿಸುವಿಕೆಯನ್ನು ಸುಧಾರಿಸಬಹುದು ಎಂದು ಸ್ಪೀಕರ್ ತಿಳಿಸಿದ್ದಾರೆ.
‘‘ನಮ್ಮ ವಿಧಾನಸೌಧ ಕಟ್ಟಡಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು, ಪ್ರವಾಸಿಗರು ವಿಧಾನಸೌಧಕ್ಕೆ ಬರುತ್ತಾರೆ. ಒಳಗೆ ಮತ್ತು ಹೊರಗೆ ಗೌರವಯುತವಾಗಿ ಕಾಣುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಖಾದರ್ ಹೇಳಿದರು.
Advertisement