
ಬೆಂಗಳೂರು: ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಮಾರ್ಗಗಳಿಂದ ಆಂತರಿಕ ಆದಾಯವನ್ನು ಹೆಚ್ಚಿಸುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಸಕ್ತಿ ಇಲ್ಲದ ಪ್ರಯತ್ನ ಕಳಪೆ ಹಣಕಾಸು ನಿರ್ವಹಣೆಯನ್ನು ಸೂಚಿಸುತ್ತದೆ. ಸರಿಯಾಗಿ ತೆರಿಗೆ ಸಂಗ್ರಹಿಸದೆ ಇರುವುದರಿಂದ 3,500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಹೇಳಿದ್ದಾರೆ.
ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷಕ್ಕೆ ಇಲಾಖೆ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ಸಿಎಜಿ ಆಡಿಟ್ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಅರ್ಕಾವತಿ ಬಡಾವಣೆಯಿಂದ ಸರಿಯಾಗಿ ತೆರಿಗೆ ಸಂಗ್ರಹಿಸಿದ್ದರೆ ಅಂದಾಜು ರೂ. 3, 307.55 ಕೋಟಿ ರೂ. ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ರೂ.195. 72 ಕೋಟಿ ಸಂಗ್ರಹಿಸಬಹುದಾಗಿತ್ತು. ಆದರೆ, ಬಿಡಿಎ ಏಪ್ರಿಲ್ 2019 ರಿಂದ ಮಾರ್ಚ್ 2022ರವರೆಗೆ ಕೇವಲ ರೂ. 3. 22 ಕೋಟಿ ಸಂಗ್ರಹಿಸಿದೆ. ಬಿಡಿಎ ಕಾಯ್ದೆಯಡಿ ಸೂಚಿಸಲಾದ ಕಾರ್ಯವಿಧಾನಗಳನ್ನು ಅನುಸರಿಸಿದೆ ಸರಿಯಾಗಿ ತೆರಿಗೆ ಸಂಗ್ರಹಿಸಿಲ್ಲ ಎಂದು ವರದಿ ಹೇಳಿದೆ.
ಸರ್ಕಾರದಿಂದ ಕಾನೂನು ಅಧಿಕಾರ ಮತ್ತು ಅಗತ್ಯ ಅನುಮೋದನೆಯ ಹೊರತಾಗಿಯೂ ಬಿಡಿಎ ಮಾರ್ಚ್ 2022ರವರೆಗೆ ಅರ್ಕಾವತಿ ಬಡಾವಣೆ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಸಂಗ್ರಹಿಸಹುದಾದ ಅಂದಾಜು ರೂ. 3,503.63 ಕೋಟಿ ಪೈಕಿ ಕೇವಲ ರೂ. 3.22 ಕೋಟಿ ಸಂಗ್ರಹಿಸಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. 2019-20 ಮತ್ತು 2020-21ರಲ್ಲಿ ಬಿಡಿಎ 34.66 ಕೋಟಿ ರೂ.ಗಳನ್ನು ಬಾಕಿ ಇರುವ ಸಾಲಗಳ ಮೇಲೆ ಬಡ್ಡಿಯಾಗಿ ಪಾವತಿಸಿದೆ ಎಂದು ವರದಿ ಹೇಳಿದೆ.
Advertisement