
ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ರಾತ್ರಿ ಶೆಡ್ ನ ಗೋಡೆ ಕುಸಿದು ಧಾರವಾಡದ ವೆಂಕಟಾಪುರ ಗ್ರಾಮದಲ್ಲಿ ಯಲ್ಲಪ್ಪ ರಾಮಣ್ಣ ಹಿಪ್ಪಿಯವರ(48ವ) ಎಂಬುವವರು ಮೃತಪಟ್ಟಿದ್ದಾರೆ.
ವೆಂಕಟಾಪುರ ಗ್ರಾಮದ ಗುಡಿಸಲಿನ ಮೇಲೆ ಶೆಡ್ ರೀತಿಯ ಮನೆಯ ಗೋಡೆ ಮಳೆಗೆ ಕುಸಿದುಬಿದ್ದಿದೆ. ಇದರಿಂದ ಗುಡಿಸಲಿನಲ್ಲಿದ್ದ ಯಲ್ಲಪ್ಪ ಅವರ ಪತ್ನಿ ಹನುಮವ್ವ ಹಾಗೂ ಪುತ್ರಿ ಯಲ್ಲವ್ವ ಗೋಡೆಯ ತಳಭಾಗದಲ್ಲಿ ಸಿಲುಕಿಕೊಂಡಿದ್ದರು.
ತಕ್ಷಣವೇ ಸ್ಥಳಕ್ಕೆ ಸುತ್ತಮುತ್ತಲ ನಿವಾಸಿಗಳು ದೌಡಾಯಿಸಿ ಮೂವರನ್ನು ಹೊರತೆಗೆದು ಗಾಯಗೊಂಡವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಯಲ್ಲಪ್ಪ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.
ಇನ್ನುಳಿದ ಇಬ್ಬರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾುಗುತ್ತಿದೆ.
Advertisement