ಕೇರಳ ಭೂಕುಸಿತ: ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಖಾಸಗಿ ಕಂಪನಿಗಳಿಗೆ ರಾಜ್ಯ ಸರ್ಕಾರ ಮನವಿ

ಇಂತಹ ವಿಪತ್ತಿನ ಸಂದರ್ಭದಲ್ಲಿ ಸಮಾಜದ ಎಲ್ಲಾ ವಲಯಗಳಿಂದ, ವಿಶೇಷವಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಸಂಘಟಿತ ಮತ್ತು ಉದಾರ ನೆರವಿನ ಅಗತ್ಯವಿದೆ.
ಶಾಲಿನಿ ರಜನೀಶ್
ಶಾಲಿನಿ ರಜನೀಶ್
Updated on

ಬೆಂಗಳೂರು: ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ(CSR) ಮೂಲಕ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದ ಪರಿಹಾರ ಕಾರ್ಯಗಳಿಗೆ ಕೈಜೋಡಿಸುವಂತೆ ಕಾರ್ಪೊರೇಟ್ ಕಂಪನಿಗಳಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

"ಕೇರಳವು ಭೂಕುಸಿತದ ಸಂತ್ರಸ್ಥರ ತಕ್ಷಣದ ಅಗತ್ಯಗಳನ್ನು ಪರಿಹರಿಸಲು ಹಣಕಾಸಿನ ನೆರವು, ಆಹಾರ ಸರಬರಾಜು, ಬಟ್ಟೆ ಮತ್ತು ಮೂಲಭೂತ ಪಡಿತರ ವಿತರಣೆಯ ಅವಶ್ಯಕತೆಯಿದೆ. ಇಂತಹ ವಿಪತ್ತಿನ ಸಂದರ್ಭದಲ್ಲಿ ಸಮಾಜದ ಎಲ್ಲಾ ವಲಯಗಳಿಂದ, ವಿಶೇಷವಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಸಂಘಟಿತ ಮತ್ತು ಉದಾರ ನೆರವಿನ ಅಗತ್ಯವಿದೆ. ಅಗತ್ಯದ ಸಮಯದಲ್ಲಿ ಖಾಸಗಿ ಕಂಪನಿಗಳು ಯಾವಾಗಲೂ ಆಧಾರ ಸ್ತಂಭಗಳಾಗಿವೆ" ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪರಿಹಾರ ಕಾರ್ಯಾಚರಣೆಗಳು ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗೆ ಸಹಾಯ ಮಾಡಲು ಸರ್ಕಾರವು ನಿರ್ದಿಷ್ಟವಾಗಿ ವಿತ್ತೀಯ ದೇಣಿಗೆಗಳನ್ನು ಹುಡುಕುತ್ತಿದೆ ಎಂದು ಅವರು ಹೇಳಿದ್ದಾರೆ.

ಶಾಲಿನಿ ರಜನೀಶ್
Wayanad landslides: ಕರ್ನಾಟಕ ಮೂಲದ ಇಬ್ಬರ ಸಾವು, ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಕೊಚ್ಚಿ ಹೋದ ಪಟ್ಟಣ!

ಸಂತ್ರಸ್ಥರಿಗೆ ಸುಲಭವಾಗಿ ವಿತರಿಸಬಹುದಾದ ಹಾಳಾಗದ ಆಹಾರ ಪದಾರ್ಥಗಳು; ಮೂಲಭೂತ ನೈರ್ಮಲ್ಯ ಉತ್ಪನ್ನಗಳ ಜೊತೆಗೆ ಅಗತ್ಯ ಉಡುಪುಗಳು ಮತ್ತು ಸ್ಥಳದಲ್ಲಿ ಸಹಾಯ ಮಾಡಲು ಸ್ವಯಂಸೇವಕರ ನಿಯೋಜನೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಕಂಪನಿಗಳು ನೀಡುವ ನೆರವು ಮತ್ತು ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಅವರೊಂದಿಗೆ ಸಮನ್ವಯ ಸಾಧಿಸುತ್ತಾರೆ ಎಂದು ಶಾಲಿನಿ ರಜನೀಶ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com