ಕರ್ನಾಟಕದ ನಾಲ್ಕು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಶೇ.3 ರಿಂದ 25 ರಷ್ಟು ಹೆಚ್ಚಳ!

ವಾಹನ ಬಳಕೆದಾರರು ಇಂದಿನಿಂದ ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸಲು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು NHAI ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಾಹನ ಬಳಕೆದಾರರು ಇಂದಿನಿಂದ ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸಲು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು NHAI ಹೇಳಿದೆ.

ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು ಆದರೆ ಲೋಕಸಭೆ ಚುನಾವಣೆಯ ಕಾರಣ ಮುಂದೂಡಲಾಗಿತ್ತು. ಹೊಸ ಶುಲ್ಕಗಳು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತವೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಶೇ. 3ರಷ್ಟನ್ನು ಹೆಚ್ಚಿಸಿದರೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸುವ ವಾಹನಗಳು ಶೇ. 14 ರಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂದು NHAI ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಬಿಪಿ ಬ್ರಹ್ಮಂಕರ್ ತಿಳಿಸಿದ್ದಾರೆ.

39. 6 ಕಿ. ಮೀ ಉದ್ದದ ಸ್ಟಾಟಲೈಟ್ ಟೌನ್ ರಿಂಗ್ ರಸ್ತೆಯ ದೊಡ್ಡಬಳ್ಳಾಪುರ- ಹೊಸಕೋಟೆ ವಿಭಾಗದಲ್ಲಿ 2023, ನವೆಂಬರ್ 17 ರಂದು ಟೋಲ್ ಸಂಗ್ರಹವನ್ನು ಆರಂಭಿಸಲಾಗಿತ್ತು. ದಾಬಸ್ ಪೇಟೆ- ದೊಡ್ಡಬಳ್ಳಾಪುರ ಸೆಕ್ಷನ್ ನಲ್ಲಿ (42 ಕಿ.ಮೀ) ಜೂನ್ 15ರ ನಂತರ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆಯಿದೆ ಎಂದು NHAI ಪ್ರಾಜೆಕ್ಟ್ ಡೈರೆಕ್ಟರ್ ಕೆ.ಬಿ. ಜಯಕುಮಾರ್ ತಿಳಿಸಿದ್ದಾರೆ. ಟೋಲ್ ಸಂಗ್ರಹಕ್ಕಾಗಿ ಏಜೆನ್ಸಿಯನ್ನು ಆಯ್ಕೆ ಮಾಡಲಾಗಿದ್ದು, ಶುಲ್ಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು, ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ರಾಜ್ಯದ 53 ಟೋಲ್ ಸಂಗ್ರಹ ಎಜೆನ್ಸಿಗಳಿಂದ ಕರ್ನಾಟಕ ಸರ್ಕಾರಕ್ಕೆ 500 ಕೋಟಿ ರು. ಮುದ್ರಾಂಕ ಶುಲ್ಕ ಪಾವತಿ ಬಾಕಿ!

ಬೆಂಗಳೂರು-ಮೈಸೂರು ಹೆದ್ದಾರಿ: ಈ ಹೆದ್ದಾರಿ ಬಳಸುವ ಕಾರು, ವ್ಯಾನ್ ಮತ್ತು ಜೀಪ್ ಗಳು ಒಂದು ಬಾರಿಗೆ ರೂ. 330 ಪಾವತಿಸಬೇಕಾಗುತ್ತದೆ. ಬೆಂಗಳೂರು-ನಿಡಘಟ್ಟ ಸೆಕ್ಷನ್ ವರೆಗೂ ರೂ. 170 ಮತ್ತು ನಿಡಘಟ್ಟ-ಮೈಸೂರು ನಡುವಣ ರೂ.160 ರೂ. ನಿಗದಿಪಡಿಸಲಾಗಿದೆ. ಕಣಿಮಿಣಿಕೆ (ಬೆಂಗಳೂರು ನಗರ) ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಂಗನೂರು (ಮಂಡ್ಯ) ಬಳಿ ಟೋಲ್ ಸಂಗ್ರಹಿಸಲಾಗುವುದು.

ದೊಡ್ಡಬಳ್ಳಾಪುರ-ಹೊಸಕೋಟೆ: ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ನಡುವೆ ರೂ. 80 (ಸಿಂಗಲ್ ಜರ್ನಿ) ರೂ.120 ( ರಿಟರ್ನ್ ಜರ್ನಿ, ರೂ 2,720 (ಕಾರು, ವ್ಯಾನ್ ಮತ್ತು ಜೀಪ್ ಗಳಿಗೆ ತಿಂಗಳಲ್ಲಿ 50 ಭಾರಿ ಪ್ರಯಾಣ) ಪಾವತಿಸಬೇಕಾಗುತ್ತದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಕ್ರಮವಾಗಿ ರೂ. 135 (ಸಿಂಗಲ್ ಜರ್ನಿ) ರೂ. 200 (ರಿಟರ್ನ್ ಜರ್ನಿ) ರೂ. 4,395 (50 ಜರ್ನಿ) ಪಾವತಿಸಬೇಕಾಗುತ್ತದೆ. ಟ್ರಕ್‌ಗಳು ಮತ್ತು ಬಸ್‌ಗಳು (ಎರಡು ಆಕ್ಸಲ್‌ಗಳು) ರೂ 275 (ಒಮ್ಮೆ ಪ್ರಯಾಣ) ರೂ 415 (ರಿಟರ್ನ್ ಜರ್ನಿ) ರೂ 9,205 (50 ಭಾರಿ ಜರ್ನಿ) ಪಾವತಿಸಬೇಕಾಗುತ್ತದೆ. ಟೋಲ್ ಪ್ಲಾಜಾದಿಂದ 20 ಕಿ.ಮೀ ಒಳಗಡೆ ವಾಣಿಜ್ಯೇತರ ವಾಹನಗಳು ತಿಂಗಳ ಪಾಸಿಗೆ ರೂ. 340 ಭರಿಸಬೇಕಾಗುತ್ತದೆ. ದೇವನಬಳ್ಳಿ ಬಳಿಯ ನಲ್ಲೂರು ಬಳಿ ಟೋಲ್ ಸಂಗ್ರಹಿಸಲಾಗುತ್ತದೆ.

ಬೆಂಗಳೂರು- ಹೈದರಾಬಾದ್ ಹೆದ್ದಾರಿ: ತುಮಕೂರು- ಹೊನ್ನಾವರ ಸಂಪರ್ಕಿಸುವ ಈ ಹೆದ್ದಾರಿ ಬಳಸುವ ಕಾರು, ಜೀಪ್, ವ್ಯಾನ್, ಲಘು ಸಾರಿಗೆಗಳು ರೂ. 115 (ಒಮ್ಮೆ ಪ್ರಯಾಣ) ರೂ. 175 (ರಿಟರ್ನ್ ಜರ್ನಿ) ಪಾವತಿಸಬೇಕಾಗುತ್ತದೆ. ಬಾಗೇಪಲ್ಲಿಯಲ್ಲಿ ಟೋಲ್ ಕೇಂದ್ರ ತೆರೆಯಲಾಗಿದೆ. ಇನ್ನೂ ರಾಷ್ಟ್ರೀಯ ಹೆದ್ದಾರಿ 206 ಬಳಸುವ ಕಾರು, ಜೀಪ್, ವ್ಯಾನ್, ಲಘು ವಾಹನಗಳು ರೂ. 60( ಸಿಂಗಲ್ ಜರ್ನಿ) ರೂ. 90 ( ರಿಟರ್ನ್ ಜರ್ನಿ) ಪಾವತಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com