
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳಿಂದ 17 ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ ನ 2 ಸ್ಥಾನಗಳು ಸೇರಿ ರಾಜ್ಯದಲ್ಲಿ ಎನ್ ಡಿಎ ಮೈತ್ರಿಕೂಟ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ಗಳಿಸಿವೆ.
ಈ ಬಾರಿ ಬಿಜೆಪಿ ಶೇ.46.06 ರಷ್ಟು ಮತ ಪಡೆದಿದ್ದರೆ ಕಾಂಗ್ರೆಸ್ ಶೇ.45.43 ರಷ್ಟು ಮತ ಪಡೆದಿದೆ. ಜೆಡಿಎಸ್ ಶೇ.5.60 ರಷ್ಟು ಮತಗಳನ್ನು ಪಡೆದಿದೆ. ಇನ್ನು ನೋಟಾಗೆ 0.56 ರಷ್ಟು ಜನ ಮತ ಹಾಕಿದ್ದರೆ, ಬಿಎಸ್ ಪಿಗೆ ಶೇ.0.33 ರಷ್ಟು, ಸಿಪಿಐ(ಎಂ) ಗೆ ಶೇ.0.01, ಇತರರಿಗೆ ಶೇ.2.02 ರಷ್ಟು ಮತಗಳು ದೊರೆತಿವೆ.
ಈ ಮತ ಪ್ರಮಾಣ 2019 ರಲ್ಲಿ ಬಿಜೆಪಿಗೆ ಶೇ.51.75 ರಷ್ಟಿತ್ತು. ಕಾಂಗ್ರೆಸ್ ಕಳೆದ ಬಾರಿ ಕೇವಲ ಶೇ.32.11 ರಷ್ಟು ಮತಗಳನ್ನು ಪಡೆದರೆ ಜೆಡಿಎಸ್ ಶೇ.9.74 ರಷ್ಟು ಮತಗಳನ್ನು ಪಡೆದಿತ್ತು. ನಂತರ ಸ್ಥಾನದಲ್ಲಿ ಶೇ.1.18 ರಷ್ಟು ಮತಗಳನ್ನು ಪಡೆದಿದ್ದ ಬಿಎಸ್ ಪಿ ಇತ್ತು. ಪಕ್ಷೇತರರು ಶೇ.3.92 ರಷ್ಟು ಮತ ಪಡೆದರೆ, ಕಳೆದ ಚುನಾವಣೆಯಲ್ಲಿ ಶೇ.0.72 ರಷ್ಟು ಮಂದಿ ನೋಟಾವನ್ನು ಆಯ್ಕೆ ಮಾಡಿದ್ದರು.
2014 ರಲ್ಲಿ ಪಕ್ಷಗಳ ನಡುವಿನ ಮತ ಪ್ರಮಾಣ
ಬಿಜೆಪಿ-ಶೇ.43
ಐಎನ್ ಸಿ- ಶೇ.40.80
ಜೆಡಿಎಸ್-ಶೇ.11
ಇತರರು-ಶೇ.5.25
Advertisement