ಬೆಂಗಳೂರು: ಸಾಂಬಾರ್'ನಲ್ಲಿ ಇಲಿ ಬಿದ್ದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

ಸಾಂಬಾರ್ ನಲ್ಲಿ ಇಲಿ ಬಿದ್ದಿದ್ದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾಂಬಾರ್ ನಲ್ಲಿ ಇಲಿ ಬಿದ್ದಿದ್ದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದಿದೆ.

ಬುಧವಾರ ಸಂಜೆ ಪಾಠ ಪ್ರವಚನ ಮುಗಿಸಿದ ವಿದ್ಯಾರ್ಥಿಗಳು ಎಂದಿನಂತೆ ರಾತ್ರಿ ಊಟಕ್ಕೆ ಹಾಜರಾಗಿ ಅನ್ನ, ಸಾಂಬಾರ್ ಬಡಿಸಿಕೊಂಡು ಊಟ ಮಾಡುತ್ತಿದ್ದರು. ಈ ವೇಳೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಕೆಟ್ಟ ವಾಸನೆ ಬರುವುದು ತಿಳಿದುಬಂದಿದೆ. ಇದೇ ವೇಳೆ ಊಟ ಮಾಡಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಹಾಗೂ ವಾಂತಿಯಾಗಿದೆ.

ಈ ನಡುವೆ ವಿಷಯ ತಿಳಿದ ವಾರ್ಡ್, ಫುಡ್ ಸೂಪರ್ ವೈಸರ್ ಸ್ಥಳಕ್ಕೆ ಧಾವಿಸಿ ಸಾಂಬಾರ್ ಇದ್ದ ಪಾತ್ರೆಯನ್ನು ತೆರವುಗೊಳಿಸಿದ್ದಾರೆ. ನಂತರ ಅಸ್ವಸ್ಥ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ಹರಡುತ್ತಿದ್ದಂತೆ ಇತರೆ ವಿದ್ಯಾರ್ಥಿಗಳು ಊಟ ಮಾಡಬಾರದೆಂದೂ ತಿಳಿಸಿ, ರಿಜಿಸ್ಟ್ರಾರ್ ಸಾಯಿರಾಮ್ ಹಾಗೂ ವಿಸಿ.ಮಂಜುನಾಥ್ ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಕಾರಣ ಪತ್ತೆಹಚ್ಚಿ ನಿರ್ಲಕ್ಷ್ಯದ ಕಾರಣಕ್ಕೆ ಇಬ್ಬರು ಅಡುಗೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಮೈಸೂರು: ಗೃಹಪ್ರವೇಶ ಸಮಾರಂಭದಲ್ಲಿ ಆಹಾರ ಸೇವಿಸಿ ಮಹಿಳೆ ಸಾವು, 39 ಮಂದಿ ಅಸ್ವಸ್ಥ

ಈ ನಡುವೆ ಘಟನೆ ಸಂಬಂದ ಗುರುವಾರ ಬೆಳಿಗ್ಗೆ ಕ್ಯಾಂಪರ್ ನಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಲವು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ರಿಜಿಸ್ಟ್ರಾರ್ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.

ಬಳಿಕ ಹಾಸ್ಟೆಲ್ ಅಧಿಕಾರಿಗಳು ನಂತರ ಅಡುಗೆ ಸಿಬ್ಬಂದಿಗಳನ್ನು ಬದಲಾಯಿಸಿದರು. ಅಲ್ಲದೆ, ಆಹಾರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದರು. ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದು, ವರದಿಗಳಿಗಾಗಿ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com