
ಯಳವಳ್ಳಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಳವಳ್ಳಿಯಲ್ಲಿ 12 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊರಡ್ಡೆ ಸಮೀಪದ ಯಳವಳ್ಳಿ ಗ್ರಾಮದ ಗಣೇಶ್ ಭಟ್ ಎಂಬುವವರು ಚಹಾ ತಯಾರಿಸಲು ಅಡುಗೆ ಮನೆಗೆ ಹೋಗಿದ್ದರು. ಈ ವೇಳೆ ಒಲೆಯ ಸುತ್ತಲೂ ಏನೋ ಸುತ್ತಿಕೊಂಡಿರುವುದು ಕಂಡು ಬಂದಿದೆ.
ಅರಣ್ಯ ಪ್ರದೇಶದಲ್ಲಿ ಮನೆ ಇರುವುದರಿಂದ ವನ್ಯಜೀವಿಗಳು ಮನೆಗಳಿಗೆ ನುಗ್ಗುವುದು ಸಾಮಾನ್ಯ ಸಾಮಾನ್ಯವಾಗಿತ್ತು. ಆರಂಭದಲ್ಲಿ ಗಣೇಶ್ ಅವರು ರ್ಯಾಟ್ ಸ್ನೇಕ್ ಎಂದು ಶಂಕಿಸಿದ್ದರು. ಇದರಂತೆ ಅಲ್ಲಾಡಿಸಿ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಕಾಳಿಂಗ ಸರ್ಪ ಹೆಡೆ ಎತ್ತಿ ದೊಡ್ಡ ರೀತಿಯಲ್ಲಿ ಬುಸ್ ಗುಡಲು ಆರಂಭಿಸಿದೆ. ಬಳಿಕ ಗಣೇಶ್ ಅವರಿಗೆ ಇದು ಸಾಮಾನ್ಯ ಹಾವಲ್ಲ ಎಂದು ತಿಳಿದು, ಕೂಡಲೇ ಉರಗ ರಕ್ಷಕ ಪವನ್ ನಾಯ್ಕ್ ಅವರಿಗೆ ಕರೆ ಮಾಡಿದ್ದಾರೆ.
ಪವನ್ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯಲ್ಲಿ ಹಾವನ್ನು ರಕ್ಷಣೆ ಮಾಡಿದ್ದಾರೆ. ನಂತರ ಸಮೀಪದ ಅರಣ್ಯಕ್ಕೆ ಅದನ್ನು ಬಿಟ್ಟಿದ್ದಾರೆ.
Advertisement