ಕರ್ನಾಟಕದಿಂದ ತರಬೇತಿ ಪಡೆದ 9 ಆನೆ ಕೇಳಿದ ಆಂಧ್ರ ಪ್ರದೇಶ!

ಆಂಧ್ರಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಒಂಬತ್ತು ತರಬೇತಿ ಪಡೆದ ಆನೆಗಳನ್ನು ನೀಡುವಂತೆ ಕರ್ನಾಟಕದಲ್ಲಿರುವ ತಮ್ಮ ಸಹವರ್ತಿಗಳ ಮುಂದೆ ಮನವಿ ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆಂಧ್ರಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಒಂಬತ್ತು ತರಬೇತಿ ಪಡೆದ ಆನೆಗಳನ್ನು ನೀಡುವಂತೆ ಕರ್ನಾಟಕದಲ್ಲಿರುವ ತಮ್ಮ ಸಹವರ್ತಿಗಳ ಮುಂದೆ ಮನವಿ ಸಲ್ಲಿಸಿದ್ದಾರೆ.

ಆನೆ ಕೊಡುವ ಕ್ರಮವನ್ನು ಹಲವು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ದಸರಾ ಆನೆ ಖ್ಯಾತಿಯ ಅರ್ಜುನ ಸಾವಿನ ನಂತರ ಶಿಬಿರಗಳಲ್ಲಿ ಅನನುಭವಿ ಕುಮ್ಕಿ ಆನೆಗಳನ್ನು (ಮನುಷ್ಯರೊಂದಿಗೆ ಸಂಘರ್ಷದಲ್ಲಿರುವ ಕಾಡು ಆನೆಗಳನ್ನು ಹಿಡಿಯಲು ಬಳಸಲಾಗುವ) ದೊಡ್ಡ ಅಪಾಯವಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅಲ್ಲದೆ ಬೇರೆ ರಾಜ್ಯಗಳಿಗೆ ಆನೆಗಳನ್ನು ಕೊಡುವುದು ಕೆಟ್ಟ ವಿಚಾರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
ರಾಜ್ಯದ ಗಡಿ ಪ್ರದೇಶಗಳಲ್ಲಿ ಮೇ 23 ರಿಂದ ಆನೆ ಗಣತಿ ಆರಂಭ!

ಆದರೆ, ಇದುವರೆಗೆ ಯಾವುದನ್ನೂ ನಿರ್ಧರಿಸಿಲ್ಲ ಎಂದು ಅರಣ್ಯ, ವನ್ಯಜೀವಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಬಿ ಮಲ್ಖಾಡೆ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಉಳಿದುಕೊಳ್ಳಬಹುದಾದ, ಬಳಕೆಯಲ್ಲಿಲ್ಲದ ಆನೆಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ವಿವಿಧ ಶಿಬಿರಗಳಲ್ಲಿರುವ ಸಿಬ್ಬಂದಿಗೆ ತಿಳಿಸಲಾಗಿದೆ. ಪ್ರತಿ ಶಿಬಿರದಲ್ಲಿ ಸುಮಾರು 2-3 ಇರುತ್ತದೆ. ಅದನ್ನು ಉಳಿಸಿಕೊಳ್ಳಬಹುದು. ರಾಜ್ಯದ ವಿವಿಧ ಶಿಬಿರಗಳಲ್ಲಿ 100 ಆನೆಗಳನ್ನು ಇರಿಸಲಾಗಿದೆ. ಎಲ್ಲಾ ಶಿಬಿರದ ಆನೆಗಳು ಕುಮ್ಕಿ ಆನೆಗಳಲ್ಲ ಮತ್ತು ದಸರಾಕ್ಕೆ ಬಳಸಲಾಗುವುದಿಲ್ಲ. ಆಂಧ್ರ ಪ್ರದೇಶ ಅರಣ್ಯ ಇಲಾಖೆ ಆನೆಗಳನ್ನು ಗಸ್ತು ತಿರುಗಲು ಕೋರಿದೆಯೇ ಹೊರತು ಕುಮ್ಕಿ ಕಾರ್ಯಾಚರಣೆಗೆ ಅಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com