
ರಾಮನಗರ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ವಿರುದ್ಧ ಕಾಂಗ್ರೆಸ್ ಡಿಕೆ ಸುರೇಶ್ ಗೆಲ್ಲುತ್ತಾರೆ ಎಂದು 50 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಟ್ಟಿಂಗ್ ಕಟ್ಟಿ 50 ಲಕ್ಷ ರೂಪಾಯಿ ಕಟ್ಟಿ ಸೋತು ಸಾಲದ ಸುಳಿಗೆ ಸಿಲುಕಿದ್ದ ರಾಮನಗರ ಜಿಲ್ಲೆಯ ಕೆಂಚನಕುಪ್ಪೆ ನಿವಾಸಿ 44 ವರ್ಷದ ಶಿವರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಿಡದಿ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆದಿದ್ದು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎನ್ ಮಂಜುನಾಥ್ ಅವರು ಬರೋಬ್ಬರಿ 1.9 ಲಕ್ಷ ಮತಗಳ ಅಂತರದಿಂದ ಡಿಕೆ ಸುರೇಶ್ ರನ್ನು ಸೋಲಿಸಿದ್ದರು.
Advertisement