ಪೊಲೀಸ್ ಠಾಣೆಗಳನ್ನು ಶಾಮಿಯಾನ ಹಾಕಿ ಮುಚ್ಚುವುದಕ್ಕೆ ಯಾವುದೇ ಕಾನೂನು ಇಲ್ಲ: ಕಾನೂನು ಸಚಿವ

ನಟ ದರ್ಶನ್ ವಿರುದ್ಧದ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿದ್ದ ಪೊಲೀಸ್ ಠಾಣೆಯನ್ನು ಶಾಮಿಯಾನ ಹಾಕಿ ಮುಚ್ಚಿರುವುದರ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
HK Patil
ಹೆಚ್ ಕೆ ಪಾಟೀಲ್ online desk
Updated on

ಬೆಂಗಳೂರು: ನಟ ದರ್ಶನ್ ವಿರುದ್ಧದ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿದ್ದ ಪೊಲೀಸ್ ಠಾಣೆಯನ್ನು ಶಾಮಿಯಾನ ಹಾಕಿ ಮುಚ್ಚಿರುವುದರ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಗೆ ಯಾವುದೇ ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತಿಲ್ಲ. ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿರುವ ಪೊಲೀಸ್ ಠಾಣೆಯನ್ನು ಟೆಂಟ್ ಅಥವಾ ಶಾಮಿಯಾನ ಹಾಕಿ ಮುಚ್ಚುವುದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶಗಳೂ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಟೆಂಟ್ ಹಾಕಿರುವ ಬಗ್ಗೆ ಮಾಧ್ಯಮದವರು ಸಚಿವ ಎಚ್.ಕೆ.ಪಾಟೀಲ್ ಅವರನ್ನು ಪ್ರಶ್ನಿಸಿದಾಗ, ಠಾಣೆಗೆ ಟೆಂಟ್ ಹಾಕಲು ಕಾನೂನು ಇಲ್ಲ ಎಂದು ಪಾಟೀಲ್ ಹೇಳಿದರು. ಆದರೆ ಯಾವ ಸಂದರ್ಭದಲ್ಲಿ ಪೊಲೀಸರು ಈ ಕೃತ್ಯ ಎಸಗಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ಸಚಿವರು ಹೇಳಿದ್ದಾರೆ.

ನಟ ಪೊಲೀಸ್ ಠಾಣೆಯೊಳಗೆ ಇದ್ದುದರಿಂದ 144 ಸೆಕ್ಷನ್ ವಿಧಿಸಿದ್ದರಿಂದ ಬೆಂಗಳೂರಿನ ಪ್ರದೇಶದಲ್ಲಿ ಗದ್ದಲ ಉಂಟಾಗಿತ್ತು. ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಇರಿಸಲಾಗಿರುವುದರಿಂದ ಅವರನ್ನು ಪೊಲೀಸ್ ಠಾಣೆಯೊಳಗೆ ಇರಿಸಲು ಸಾಧ್ಯವಿಲ್ಲ ಮತ್ತು ಅದು ಪೊಲೀಸ್ ಠಾಣೆಗೆ ಟೆಂಟ್‌ ಹಾಕಲು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇಡೀ ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಆವರಿಸುವ ಅಗತ್ಯ ಏನಿತ್ತು ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ತಮಗೆ ಗೊತ್ತಿಲ್ಲ, ಗೊತ್ತಿಲ್ಲದೆ ಪ್ರತಿಕ್ರಿಯಿಸಲಾರೆ ಎಂದು ಪಾಟೀಲ್ ಹೇಳಿದ್ದಾರೆ.

HK Patil
ನಟ ದರ್ಶನ್ ಇರುವ ಪೊಲೀಸ್ ಠಾಣೆ ಸುತ್ತ ಶಾಮಿಯಾನದ ಪರದೆ, 144 ಸೆಕ್ಷನ್ ಬಳಕೆ: ವಿಪಕ್ಷಗಳ ಆಕ್ಷೇಪ

ಇನ್ನು ಸಚಿವ ಪಾಟೀಲ್ ಮಾತನಾಡಿ, ಪೊಲೀಸ್ ಠಾಣೆಯೊಳಗೆ ಯಾರೇ ಇದ್ದರೂ ಆರೋಪಿಗಳೇ ಹೊರತು ವಿಶೇಷ ಸೌಲಭ್ಯ ನೀಡಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com