ಅಡಿಕೆ ತೋಟ ಪ್ರದೇಶ ಹೆಚ್ಚಳ ಕೂಡ ಹಣ್ಣು-ತರಕಾರಿ ಬೆಲೆ ಏರಿಕೆಗೆ ಕಾರಣ: ಅಧಿಕಾರಿಗಳು

ಈ ವರ್ಷ ಕಡುಬಿಸಿಲು ಮುಗಿದು ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ತೋಟಗಾರಿಕಾ ಬೆಳೆಗಳ ಬೆಲೆಗಳು ಹೆಚ್ಚಾಗಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ತಿಂಗಳ ಗೃಹ ಬಜೆಟ್ ನ ಮೇಲೆ ಪರಿಣಾಮ ಬೀರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ವರ್ಷ ಕಡುಬಿಸಿಲು ಮುಗಿದು ಮುಂಗಾರು ಮಳೆ ಕಾಲಿಡುತ್ತಿದ್ದಂತೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ತೋಟಗಾರಿಕಾ ಬೆಳೆಗಳ ಬೆಲೆಗಳು ಹೆಚ್ಚಾಗಿವೆ. ಇದು ಬಡ ಮತ್ತು ಮಧ್ಯಮ ವರ್ಗದವರ ತಿಂಗಳ ಗೃಹ ಬಜೆಟ್ ನ ಮೇಲೆ ಪರಿಣಾಮ ಬೀರುತ್ತಿದೆ. ರೈತರ ಬೆಳೆಗಳ ಬೆಲೆ ಹೆಚ್ಚಾದಾಗ ಪ್ರಾಥಮಿಕವಾಗಿ ಪೂರೈಕೆ ಮತ್ತು ಬೇಡಿಕೆಯ ಚರ್ಚೆ ಕೇಳಿಬರುತ್ತದೆ. ಆದರೆ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ಬೆಳೆಗಳ ಸಾಗುವಳಿ ಪ್ರದೇಶದಲ್ಲಿನ ಇಳಿಕೆಯಾಗಿದೆ.

ಈ ಸಮಸ್ಯೆಯನ್ನು ಗಮನಿಸಿ, ಇತ್ತೀಚೆಗೆ ರಾಜ್ಯ ಸರ್ಕಾರವು ಇದಕ್ಕೆ ಸಂಭವನೀಯ ಪರಿಹಾರಗಳನ್ನು ಹುಡುಕಲು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಅಧಿಕಾರಿಗಳು ಹೇಳುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಅಡಿಕೆ ತೋಟದ ಪ್ರದೇಶವು ಹೆಚ್ಚಾಗುತ್ತಿದ್ದು, ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶವು ಕಡಿಮೆಯಾಗಿದೆ.

ತೋಟಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ, 2022-23 ನೇ ಸಾಲಿನಲ್ಲಿ ಅಡಿಕೆ ತೋಟದ ಪ್ರದೇಶವು ರಾಜ್ಯದಲ್ಲಿ 1.52 ಲಕ್ಷ ಹೆಕ್ಟೇರ್ ಆಗಿದ್ದು, 6,89,072 ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. 2021-22ನೇ ಸಾಲಿನಲ್ಲಿ 1.53 ಲಕ್ಷ ಹೆಕ್ಟೇರ್‌ನಲ್ಲಿ 6,14,216 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. 2020-21ರಲ್ಲಿ ಅಡಿಕೆ ಬೆಳೆಯುವ ಪ್ರದೇಶವು 1.44 ಲಕ್ಷ ಹೆಕ್ಟೇರ್‌ಗಳಾಗಿದ್ದು, 5,62,889 ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ.

ಈ ವರ್ಷ ಒಟ್ಟಾರೆ ತೋಟಗಾರಿಕಾ ಬೆಳೆ 27.14 ಲಕ್ಷ ಹೆಕ್ಟೇರ್ ಆಗಿದ್ದರೆ, ಕಳೆದ ವರ್ಷ ಇದು ಸುಮಾರು 26 ಲಕ್ಷ ಹೆಕ್ಟೇರ್ ಆಗಿತ್ತು. ಹಣ್ಣು ಮತ್ತು ತರಕಾರಿಗಳ ಸಾಗುವಳಿ ಪ್ರದೇಶವು ಕ್ರಮವಾಗಿ 4 ಲಕ್ಷ ಹೆಕ್ಟೇರ್ ಮತ್ತು 6 ಲಕ್ಷ ಹೆಕ್ಟೇರ್ ಆಗಿದೆ. ಅಡಿಕೆ ತೋಟ ಬೆಳೆಯುವ ಪ್ರದೇಶವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ
ಮಲೆನಾಡು ಭಾಗದಲ್ಲಿ ತಾಪಮಾನ ಏರಿಕೆ: ಕಾಫಿ, ಅಡಿಕೆ, ಕಾಳುಮೆಣಸು ಇಳುವರಿ ಮೇಲೆ ತೀವ್ರ ಹೊಡೆತ

ಸುಮಾರು ಶೇಕಡಾ 90ರಿಂದ 95ರಷ್ಟು ಇಳುವರಿಯನ್ನು ಗುಟ್ಕಾ ಮತ್ತು ತಂಬಾಕು ಉದ್ಯಮದಲ್ಲಿ ಬಳಸಲಾಗುತ್ತದೆ, ಇದು ರಾಜ್ಯದ ಹೆಚ್ಚಿನ ಆದಾಯ ಉತ್ಪಾದನೆಗಳಲ್ಲಿ ಒಂದಾಗಿದೆ. ಕರ್ನಾಟಕದ ಇಳುವರಿಯನ್ನು ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಅಡಿಕೆ ಉತ್ಪಾದನೆಯ ಪ್ರದೇಶವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹವಾಮಾನ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕಾ ಬೆಳೆಗಳಿಗೆ ಹೋಲಿಸಿದರೆ ಇದು ಲಾಭದಾಯಕ ಬೆಳೆ ಎಂದು ರೈತರು ಅರಿತುಕೊಂಡಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಒಂದು ಎಕರೆಯಲ್ಲಿ 550 ಅಡಿಕೆ ಮರಗಳು ಎರಡು ಕಿಲೋಗ್ರಾಂಗಳಷ್ಟು ಅಡಿಕೆ ಹಣ್ಣುಗಳನ್ನು ನೀಡುತ್ತದೆ, ಇದು ಹೆಚ್ಚಿನ ಮಾರುಕಟ್ಟೆ ಬೇಡಿಕೆಯನ್ನು ಹೊಂದಿದೆ. ಬಿತ್ತನೆಯ ಆರನೇ ವರ್ಷದಿಂದ ಇಳುವರಿ ಪ್ರಾರಂಭವಾಗಿ 20ರಿಂದ 25 ವರ್ಷಗಳವರೆಗೆ ಇರುತ್ತದೆ.

ಹಲವು ಸ್ಥಳಗಳಲ್ಲಿ ಈಗ ರೈತರು ಏಕಬೆಳೆ ಪದ್ಧತಿಯಲ್ಲಿ ತೊಡಗಿದ್ದಾರೆ. ಕಳೆದ 3-4 ವರ್ಷಗಳಿಂದ ಅಡಿಕೆ ಬೆಳೆ ಬೆಳೆಯುವ ಪ್ರವೃತ್ತಿ ಕಂಡುಬಂದಿದೆ, ಅದರ ಪರಿಣಾಮ ತರಕಾರಿ ಬೆಳೆಯುವ ಪ್ರದೇಶಗಳು ಕಡಿಮೆಯಾಗಿದ್ದು, ಇದರಿಂದ ಹಣ್ಣುಗಳು ಮತ್ತು ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಶಿಲೀಂದ್ರ ರೋಗಗಳು ಹೆಚ್ಚಾಗುತ್ತಿರುವಾಗ ಕೃಷಿಯಲ್ಲಿ ಏಕಬೆಳೆ ಪದ್ಧತಿ ಕಳವಳಕಾರಿ ಅಂಶವಾಗಿದೆ. ಪಾರಂಪರಿಕ ಬೆಳೆ ಹೆಚ್ಚು ಬೆಳೆಯುವ ಪ್ರದೇಶವಾದ ಮಲೆನಾಡು ಭಾಗದಲ್ಲಿ ಇದು ಸಮಸ್ಯೆಯಾಗಿದೆ.

ಮಲೆನಾಡು, ಕರಾವಳಿ ಭಾಗ ಮಾತ್ರವಲ್ಲದೆ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಹಾವೇರಿ ಮತ್ತು ಬೆಂಗಳೂರಿನ ಹೊರವಲಯದ ಇತರ ಒಣ ಪ್ರದೇಶಗಳಲ್ಲೂ ಅಡಿಕೆ ಕೃಷಿ ಹೆಚ್ಚಾಗಿದೆ. ಇತ್ತೀಚೆಗೆ ಭತ್ತ ಬೆಳೆಯುವ ರೈತರು ಅಡಿಕೆಯತ್ತ ವಾಲುತ್ತಿರುವುದು ಕೂಡ ಕಂಡು ಬಂದಿದೆ. ನಾವು ಈ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com