ಮಲೆನಾಡು ಭಾಗದಲ್ಲಿ ತಾಪಮಾನ ಏರಿಕೆ: ಕಾಫಿ, ಅಡಿಕೆ, ಕಾಳುಮೆಣಸು ಇಳುವರಿ ಮೇಲೆ ತೀವ್ರ ಹೊಡೆತ

ಮಲೆನಾಡು ಭಾಗದಲ್ಲಿ ಬಿಸಿಗಾಳಿ ಜತೆಗೆ ತೀವ್ರ ತಾಪಮಾನದ ಏರಿಕೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ತಾಪಮಾನದ ಮಟ್ಟವು 36 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವುದರಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಮತ್ತು ಕಾಳುಮೆಣಸಿಗೆ ತೀವ್ರ ಹಾನಿಯಾಗಿದೆ. ತೇವಾಂಶದ ಕೊರತೆಯಿಂದಾಗಿ ಮೊಳಕೆಯೊಡೆಯಲು ಪ್ರಾರಂಭಿಸಿದ ಎಳೆ ಅಡಿಕೆಗಳು ಬೀಳಲು ಪ್ರಾರಂಭಿಸಿವೆ.
ಚಿಕ್ಕಮಗಳೂರಿನ ಕಳಸ ತಾಲ್ಲೂಕಿನ ಕಾಫಿ ಎಸ್ಟೇಟ್‌ನಲ್ಲಿ ಬಾಧಿತ ಕಾಫಿ ಎಲೆಗಳು ಮತ್ತು ಬಲಿಯದ ಕಾಫಿ ಬೀಜಗಳು.
ಚಿಕ್ಕಮಗಳೂರಿನ ಕಳಸ ತಾಲ್ಲೂಕಿನ ಕಾಫಿ ಎಸ್ಟೇಟ್‌ನಲ್ಲಿ ಬಾಧಿತ ಕಾಫಿ ಎಲೆಗಳು ಮತ್ತು ಬಲಿಯದ ಕಾಫಿ ಬೀಜಗಳು.

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಬಿಸಿಗಾಳಿ ಜತೆಗೆ ತೀವ್ರ ತಾಪಮಾನದ ಏರಿಕೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ತಾಪಮಾನದ ಮಟ್ಟವು 36 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವುದರಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಮತ್ತು ಕಾಳುಮೆಣಸಿಗೆ ತೀವ್ರ ಹಾನಿಯಾಗಿದೆ. ತೇವಾಂಶದ ಕೊರತೆಯಿಂದಾಗಿ ಮೊಳಕೆಯೊಡೆಯಲು ಪ್ರಾರಂಭಿಸಿದ ಎಳೆ ಅಡಿಕೆಗಳು ಬೀಳಲು ಪ್ರಾರಂಭಿಸಿವೆ.

ಕಳಸ ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ಒಂದು ಅಥವಾ ಎರಡು ಬಾರಿ ಪೂರ್ವ ಮುಂಗಾರು ಮಳೆಗೆ ಸಾಕ್ಷಿಯಾಗಿದ್ದರೂ, ಬಿಸಿಗಾಳಿಯು ತೇವಾಂಶವನ್ನು ಶೂನ್ಯಗೊಳಿಸಿದೆ. ಹೀಗಾಗಿ ಬೆಳೆಗಳ ಮೇಲೆ ಪರಿಣಾಮ ಬೀರಿದೆ.

ಸುಡುವ ಬಿಸಿಲು ಮೊಳಕೆಯೊಡೆದ ಕಾಫಿ ಬೀಜಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಬಿಸಿಲಿನ ಝಳಕ್ಕೆ ಕಾಫಿ ಬೀಜಗಳು ಕಪ್ಪಾಗುತ್ತವೆ ಮತ್ತು ಬಲಿಯುವ ಮುನ್ನವೇ ಉದುರುತ್ತವೆ. ಹೀಗಾಗಿ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಾಫಿ ಬೀಜಗಳನ್ನು ಆರಿಸಿದ ನಂತರ ತೋಟಗಾರರು ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ಎಸ್ಟೇಟ್‌ನಲ್ಲಿರುವ ಮರಗಳನ್ನು ಕತ್ತರಿಸುತ್ತಾರೆ. ಆದ್ದರಿಂದ, ಕಾಫಿ ಗಿಡಗಳು ಶಾಖ ಮತ್ತು ಬಿಸಿ ತಾಪಮಾನಕ್ಕೆ ಒಡ್ಡಿಕೊಳ್ಳುತ್ತವೆ ಮತ್ತು ಕಾಫಿ ಬೀನ್ಸ್ ಕುಗ್ಗಲು ಮತ್ತು ಕುಸಿಯಲು ಪ್ರಾರಂಭಿಸುತ್ತವೆ.

ಚಿಕ್ಕಮಗಳೂರಿನ ಕಳಸ ತಾಲ್ಲೂಕಿನ ಕಾಫಿ ಎಸ್ಟೇಟ್‌ನಲ್ಲಿ ಬಾಧಿತ ಕಾಫಿ ಎಲೆಗಳು ಮತ್ತು ಬಲಿಯದ ಕಾಫಿ ಬೀಜಗಳು.
ಚಾಮರಾಜನಗರ: ಮಳೆಗೆ 25 ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶ!

ಕರ್ನಾಟಕ ಬೆಳೆಗಾರರ ​​ಒಕ್ಕೂಟದ ಮಾಜಿ ಅಧ್ಯಕ್ಷ ಬಿಎಸ್ ಜಯರಾಮ್ ಮಾತನಾಡಿ, ಕಾಫಿ ಬೆಳೆಗಳ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಲಿದೆ. ಇದೇ ರೀತಿಯ ಹವಾಮಾನ ಮುಂದುವರಿದರೆ, ಮುಂದಿನ ವರ್ಷವೂ ಉತ್ತಮ ಬೆಲೆಯನ್ನು ನಾವು ನಿರೀಕ್ಷಿಸಲಾಗುವುದಿಲ್ಲ ಎಂದರು.

ಅರೇಬಿಕಾ ಕಾಫಿಗೆ ಹೋಲಿಸಿದರೆ ರೊಬಸ್ಟಾ ಕಾಫಿಯ ಬೆಲೆ ತುಸು ಏರಿಕೆಯಾಗಿದೆ. ಆದರೆ ರೊಬಸ್ಟಾ ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಅರೇಬಿಕಾ ಬೆಲೆ ಸ್ಥಿರವಾಗಿಲ್ಲ ಎನ್ನುತ್ತಾರೆ ಕಾಫಿ ಬೆಳೆಗಾರ ಬೆರನಗೋಡು ಮಹೇಶ್.

ಮತ್ತೊಬ್ಬ ಕಾಫಿ ತೋಟಗಾರ ಭೋಜೇಗೌಡ ಮಾತನಾಡಿ, ಕಾಫಿ ತೋಟಗಳಲ್ಲಿ ಸೂರ್ಯನ ಕಿರಣಗಳು ಬಿದ್ದು ಹಾನಿಯಾಗುವುದರಿಂದ ಮರ ಕಡಿಯುವುದನ್ನು ಮುಂದೂಡುವುದು ಒಳಿತು. ಮಳೆ ಅಭಾವ, ಬಿಸಿಲಿನ ತಾಪದಿಂದ ಕಾಳುಮೆಣಸಿನ ಬಳ್ಳಿಗಳ ಬೆಳವಣಿಗೆ ಕುಂಠಿತವಾಗಿದ್ದು, ಎಲೆಗಳು ಉದುರಲಾರಂಭಿಸಿವೆ. ಬಳ್ಳಿಗಳ ಆರೋಗ್ಯದ ಬಗ್ಗೆ ಬೆಳೆಗಾರರು ಆತಂಕದಲ್ಲಿದ್ದಾರೆ ಮತ್ತು ಮುಂಬರುವ ವರ್ಷದಲ್ಲಿ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ತೋಟದ ಕಾರ್ಮಿಕರು ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವಾಗ ದಣಿದಿದ್ದಾರೆ ಮತ್ತು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಉತ್ತಮ ಮಳೆಯೊಂದೇ ಇದಕ್ಕೆ ಪರಿಹಾರ ಎಂದು ಹಲವು ತೋಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com