
ಬೆಂಗಳೂರು: ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸರದಿಯಲ್ಲಿ ನಿಂತು ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷವು ಸಂಚು ರೂಪಿಸಿದೆ. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಮೇಲೆ ಪೋಕ್ಸೊ ಕೇಸ್ ಹಾಕುವ ಮೂಲಕ ಅವರ ವಿರುದ್ಧವೂ ಪಕ್ಷ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.
ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡಿದ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು. 'ಶಿವು ಜೀ, ನಾನೀಗ ಕೇಂದ್ರ ಮಂತ್ರಿ. ನಾನು ನಿಮ್ಮ ಮಟ್ಟಕ್ಕೆ ಇಳಿಯುವುದಿಲ್ಲ. ನಾನು ಕೇಂದ್ರ ಸಚಿವರಾದ ನಂತರ ಕೆಲವರಿಗೆ ನಿದ್ದೆ ಬರುತ್ತಿಲ್ಲ, ಕೆಲವರಿಗೆ ಹಸಿವು ಕಡಿಮೆಯಾಗಿದೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ಲೇವಡಿ ಮಾಡಿದರು.
ಸಾದಹಳ್ಳಿ ಗೇಟ್ ಟೋಲ್ ಪ್ಲಾಜಾಕ್ಕೆ ಆಗಮಿಸಿದ ಅವರನ್ನು ಪಕ್ಷದ ಕಾರ್ಯಕರ್ತರು ಸೇಬು, ಹೂವಿನ ಹಾರ ಹಾಕಿ ಸ್ವಾಗತಿಸಿದರು. ನಂತರ ಪಕ್ಷದ ಕಚೇರಿಗೆ ತೆರಳಿದ ಅವರಿಗೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಸ್ವಾಗತಿಸಿದರು.
ನಟ ದರ್ಶನ್ ಬಂಧನ ಪ್ರಕರಣ ಹಾಗೂ ಠಾಮೆಯ ಹೊರಗೆ ಶಾಮಿಯಾನ ಹಾಕಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಪ್ರಕರಣವನ್ನು ನಾನು ಹಿಂದೆಂದೂ ನೋಡಿಲ್ಲ. ಈ ಸರ್ಕಾರಕ್ಕೆ ಗೌರವವಿದ್ದರೆ ತಿದ್ದಿಕೊಳ್ಳಲಿ' ಎಂದರು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖಂಡರು ಸ್ವಾಗತಿಸಿದರು. ಸಾದಹಳ್ಳಿ ಗೇಟ್ ಟೋಲ್ ಪ್ಲಾಜಾ ಬಳಿ 5,000-6,000 ಜೆಡಿಎಸ್ ಬೆಂಬಲಿಗರು ಮತ್ತು ಕಾರ್ಯಕರ್ತರ ಗುಂಪು ಜಮಾಯಿಸಿ, ಘೋಷಣೆಗಳನ್ನು ಕೂಗಿ ಅವರನ್ನು ಅಭಿನಂದಿಸಿದರು. ನಂತರ ಜೆಡಿಎಸ್ ಕಚೇರಿಗೆ ತೆರಳಿದರು. ಅಲ್ಲಿ ಬೃಹತ್ ವೇದಿಕೆ ಹಾಕಲಾಗಿದ್ದು, ಅಲ್ಲಿ 2000-3000 ಜನ ಸೇರಿದ್ದರು. ಅಲ್ಲಿಂದ ಕುಮಾರಸ್ವಾಮಿ ಅವರು ತಮ್ಮ ಪೋಷಕರಾದ ಎಚ್‌ಡಿ ದೇವೇಗೌಡ ಹಾಗೂ ಚೆನ್ನಮ್ಮ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ತೆರಳಿದರು. ನಂತರ ತಮ್ಮ ಮನೆಗೆ ತೆರಳಿದ ಅವರನ್ನು ಪತ್ನಿ ಅನಿತಾ ಮಂಗಳಾರತಿಯೊಂದಿಗೆ ಸ್ವಾಗತಿಸಿದರು. ಊಟದ ನಂತರ ಅವರು ಕೆಲವು ಸಂದರ್ಶಕರನ್ನು ಭೇಟಿಯಾದರು ಮತ್ತು ಶುಕ್ರವಾರ ಸಂಜೆ ತಿರುಪತಿಗೆ ತೆರಳಿದರು.
ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಅವರು ಶನಿವಾರ ಮಧ್ಯಾಹ್ನ ಸ್ಪೀಕರ್ ಯುಟಿ ಖಾದರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
Advertisement