
ಬೆಂಗಳೂರು: 2023-24 ನೇ ಸಾಲಿಗೆ ನಿಯೋಜಿಸಲಾದ ಅಖಿಲ ಭಾರತ ಪವನ ಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಗುಜರಾತ್ ನಂತರ ರಾಜ್ಯ ಎರಡನೇ ಸ್ಥಾನದಲ್ಲಿದ್ದರೆ, ತಮಿಳುನಾಡು ಮೂರನೇ ಸ್ಥಾನದಲ್ಲಿದೆ.
ಜೂನ್ 15 ರಂದು ದೆಹಲಿಯಲ್ಲಿ 'ಪವನ್-ಉರ್ಜಾ: ಪವರ್ನಿಂಗ್ ದಿ ಫ್ಯೂಚರ್ ಆಫ್ ಇಂಡಿಯಾ' ಎಂಬ ವಿಷಯದಲ್ಲಿ ಜಾಗತಿಕ ಪವನ(ಗಾಳಿ) ದಿನಾಚರಣೆಯ ಅಂಗವಾಗಿ ಕರ್ನಾಟಕವನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಗೌರವಿಸಿತು. ರಾಷ್ಟ್ರದಾದ್ಯಂತ ಪವನ ಶಕ್ತಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುತ್ತದೆ.
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ಗಾಳಿಯಿಂದ ವಿದ್ಯುತ್ ಉತ್ಪಾದನೆ ಸಾಮರ್ಥ್ಯವು ಕರ್ನಾಟಕದಲ್ಲಿ 724.66ಮೆಗಾವ್ಯಾಟ್ ಆಗಿದೆ. ಗುಜರಾತ್‌ನ ನಿಯೋಜಿತ ಸಾಮರ್ಥ್ಯ 1743.8 ಮೆಗಾವ್ಯಾಟ್ ಆಗಿದ್ದರೆ, ತಮಿಳುನಾಡಿನದು 586.37 ಮೆಗಾವ್ಯಾಟ್ ಆಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ವ್ಯವಸ್ಥಾಪಕ ನಿರ್ದೇಶಕ ಕೆಪಿ ರುದ್ರಪ್ಪಯ್ಯ ಅವರು ವಿದ್ಯುತ್ ನವೀನ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಮತ್ತು ಎಂಎನ್‌ಆರ್‌ಇ ಕಾರ್ಯದರ್ಶಿ ಭೂಪಿಂದರ್ ಎಸ್ ಭಲ್ಲಾ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಪವನ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಮಹತ್ವದ ಪ್ರಗತಿಯು ನವೀಕರಿಸಬಹುದಾದ ಇಂಧನಕ್ಕೆ ಅದರ ಸಮರ್ಪಣೆ, ಸುಸ್ಥಿರ ಮತ್ತು ಸಮೃದ್ಧ ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಈ ಸಾಧನೆಯು ಸುಸ್ಥಿರ ಶಕ್ತಿಯ ಕಡೆಗೆ ಬದ್ಧತೆ ಮತ್ತು ಪವನ ಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
Advertisement