ಹೀಟ್ ವೇವ್: ಹಜ್ ಯಾತ್ರೆಯಲ್ಲಿ 68 ಭಾರತೀಯರು ಮೃತ: ಬೆಂಗಳೂರು ಮೂಲದ ಇಬ್ಬರು ಸಾವು

ಸೌದಿ ಅರೇಬಿಯಾದಲ್ಲಿ ಈ ವರ್ಷದ ಹಜ್ ಯಾತ್ರೆಯ ವೇಳೆ ಸಾವನ್ನಪ್ಪಿದ ನೂರಾರು ಜನರಲ್ಲಿ ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಈ ವರ್ಷದ ಹಜ್ ಯಾತ್ರೆಯ ವೇಳೆ ಸಾವನ್ನಪ್ಪಿದ ನೂರಾರು ಜನರಲ್ಲಿ ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮೃತರನ್ನು ಕ್ರಮವಾಗಿ ಆರ್‌ಟಿ ನಗರ ಮತ್ತು ಫ್ರೇಜರ್ ಟೌನ್ ನಿವಾಸಿಗಳಾದ ಕೌಸರ್ ರುಖ್ಸಾನಾ (69) ಮತ್ತು ಅಬ್ದುಲ್ ಅನ್ಸಾರಿ (54) ಎಂದು ಗುರುತಿಸಲಾಗಿದೆ. ತೀವ್ರ ಶಾಖದ ಅಲೆಯಿಂದಾಗಿ, ಬೆಂಗಳೂರಿನ ಇಬ್ಬರು ಇತರೆ ಯಾತ್ರಿಗಳಂತೆ ನಿರ್ಜಲೀಕರಣ ಮತ್ತು ಸೂರ್ಯನ ಶಾಖದಿಂದ ಸಾವನ್ನಪ್ಪಿದ್ದಾರೆ.

ಮೆಕ್ಕಾದ ಹೊರವಲಯದಲ್ಲಿರುವ ಮಿನಾ ಕಣಿವೆಯಲ್ಲಿ ಯಾತ್ರಾರ್ಥಿಗಳು ರಾಮಿ ಅಲ್-ಜಮಾರತ್ (ದೆವ್ವದ ಮೇಲೆ ಕಲ್ಲೆಸೆಯುವ) ಆಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಸರ್ಫರಾಜ್ ಖಾನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಮೆಕ್ಕಾ ಯಾತ್ರೆ ವೇಳೆ ದುರಂತ: ತೀವ್ರ ಶಾಖಕ್ಕೆ 92 ಭಾರತೀಯ ಹಜ್ ಯಾತ್ರಿಕರು ಸಾವು!

ಸೌದಿ ಅರೇಬಿಯಾ ಸರ್ಕಾರದೊಂದಿಗಿನ ಸಂಪ್ರದಾಯಗಳು ಮತ್ತು ಒಪ್ಪಂದಗಳನ್ನು ಉಲ್ಲೇಖಿಸಿದ ಅವರು, ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪುವ ಯಾತ್ರಾರ್ಥಿಗಳ ಮೃತದೇಹಗಳನ್ನು ಅವರ ಸ್ವಂತ ಸ್ಥಳಕ್ಕೆ ಹಿಂತಿರುಗಿಸಲಾಗುವುದಿಲ್ಲ ಎಂದು ಹೇಳಿದರು.

ಆದ್ದರಿಂದ, ರುಖ್ಸಾನಾ ಮತ್ತು ಅನ್ಸಾರಿ ಇಬ್ಬರ ಶವಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಯೇ ಸಮಾಧಿ ಮಾಡಿದ್ದಾರೆ ಮತ್ತು ಮರಣ ಪ್ರಮಾಣಪತ್ರಗಳನ್ನು ಸಹ ಅವರ ಸಂಬಂಧಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಖಾನ್ ಹೇಳಿದರು.

ಅವರ ಪ್ರಕಾರ, ಸಂತ್ರಸ್ತರಿಬ್ಬರೂ ಇತರ ಯಾತ್ರಾರ್ಥಿಗಳೊಂದಿಗೆ ಜೂನ್ 22 ರಂದು ಇಲ್ಲಿಗೆ ಮರಳಲು ನಿರ್ಧರಿಸಲಾಗಿತ್ತು. ಈ ವರ್ಷ, ರಾಜ್ಯ ಸರ್ಕಾರವು ಸುಮಾರು 13,500 ಅರ್ಜಿಗಳನ್ನು ಸ್ವೀಕರಿಸಿದೆ, ಅದರಲ್ಲಿ 10,300 ಕ್ಕೂ ಹೆಚ್ಚು ಜನರು ಹಜ್ ಯಾತ್ರೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com