ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಶಾಲೆಗಳಿಗೆ ಕನ್ನಡ ಗೊತ್ತಿಲ್ಲದ ಶಿಕ್ಷಕರ ನೇಮಕ: ವಿದ್ಯಾರ್ಥಿಗಳ ಪರದಾಟ

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಾಡಾ) ಮುಖ್ಯಸ್ಥರು ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿದಾಗ ಗಡಿಭಾಗದ ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಶಿಕ್ಷಕರಿಗೆ ಕನ್ನಡವೇ ಗೊತ್ತಿಲ್ಲದಿರುವುದು ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ, ಮಹಾರಾಷ್ಟ್ರ ಗಡಿಭಾಗದಲ್ಲಿರುವ ಹಲವಾರು ಕನ್ನಡ ಶಾಲೆಗಳು ದಯನೀಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಾಡಾ) ಮುಖ್ಯಸ್ಥರು ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿದಾಗ ಗಡಿಭಾಗದ ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಶಿಕ್ಷಕರಿಗೆ ಕನ್ನಡವೇ ಗೊತ್ತಿಲ್ಲದಿರುವುದು ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಬಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ್, ಕಾರ್ಯದರ್ಶಿ ಪ್ರಕಾಶ್ ಮಟ್ಟಿಹಳ್ಳಿ, ಜಾತ್ (ಮಹಾರಾಷ್ಟ್ರ) ಶಾಸಕ ವಿಕ್ರಮಸಿಂಗ್ ಸಾವಂತ್ ಅವರನ್ನೊಳಗೊಂಡ ನಿಯೋಗ ಬೋರಗಿ, ಕರಜಗಿ, ಭೇವರ್ಗಿ, ಬಾಳಗಾಂವ, ಅಂಕಲಗಿ, ಸಂಖ, ರಾವಲಗುಂದವಾಡಿ ಮತ್ತು ಮೆಂಡಿಗೇರಿಯ (ಎಲ್ಲವೂ ಜಾತ್‌ನಲ್ಲಿವೆ) ಕನ್ನಡ ಶಾಲೆಗಳಿಗೆ ಮುಖಂಡರು ಭೇಟಿ ನೀಡಿದ್ದರು.

ಮಹಾರಾಷ್ಟ್ರ ಸರಕಾರ ಈಗ ಕನ್ನಡ ಬಾರದ ಮರಾಠಿ ಶಿಕ್ಷಕರನ್ನು ಕನ್ನಡ ಶಾಲೆಗಳಿಗೆ ನೇಮಿಸಿ ಆದೇಶ ಹೊರಡಿಸಿರುವುು ನಿಯೋಗದ ಗಮನಕ್ಕೆ ಬಂದಿದೆ. ನಿಯೋಗದಲ್ಲಿದ್ದ ಹಲವಾರು ಮಂದಿ ಶಿಕ್ಷಕರೊಂದಿಗೆ ಕನ್ನಡದಲ್ಲಿ ಮಾತನಾಡಿದಾಗ ಶಾಲಾ ಶಿಕ್ಷಕರಿಗೆ ಕನ್ನಡ ಭಾಷೆ ಗೊತ್ತಿರಲಿಲ್ಲ.

ಸಾಂದರ್ಭಿಕ ಚಿತ್ರ
ಸಂಸತ್ ನಲ್ಲಿ ಕನ್ನಡ ಕಲರವ: ರಾಜ್ಯದ 27 ಸಂಸದರು ಕನ್ನಡದಲ್ಲಿ, ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ!

ಶಿಕ್ಷಕರೊಬ್ಬರು ಈ ಶಾಲೆಗೆ ನೇಮಕಗೊಂಡ ನಂತರ ಸ್ಥಳೀಯ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ತಮಗೆ ಕನ್ನಡ ಗೊತ್ತಿಲ್ಲ ಎಂಬ ಬಗ್ಗೆ ಬರೆದಿದ್ದ ಪತ್ರವನ್ನು ತೋರಿಸಿದರು. ನಂತರ ಸಭೆ ನಡೆಸಲಾಯಿತು. ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಸರ್ಕಾರದ ನಿಯಮಗಳನ್ನು ಮಹಾರಾಷ್ಟ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಗೆ ಉಲ್ಲಂಘಿಸಿದರು ಎಂಬ ಬಗ್ಗೆ ಬಾಡಾ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡರು

ಇನ್ನೂ ಮುಂದೆ ಎಲ್ಲಾ ವಿಷಯಗಳನ್ನು ಕನ್ನಡದಲ್ಲೇಶಾಲೆಗಳ ವಿದ್ಯಾರ್ಥಿಗಳಿಗೆ ಬೋಧಿಸಲು ಕ್ರಮ ಕೈಗೊಳ್ಳಬೇಕು ಎಂದು ಜಾಥ ಶಾಸಕರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕನ್ನಡ ಬಾರದ ಶಿಕ್ಷಕರ ನೇಮಕದ ವಿಷಯದ ಬಗ್ಗೆ ಕೆಲವು ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದರು ಎಂದ ತಿಳಿಸಿದರು. ಗಡಿ ಭಾಗದ ಶಾಲೆಗಳಿಗೆ ನಿವೃ್ತ ಶಿಕ್ಷಕರನ್ನು ನೇಮಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com