ರಾಮೇಶ್ವರಂ ಕೆಫೆ ಸ್ಫೋಟ: ಮಗನ ಜೀವ ಉಳಿಸಿದ ತಾಯಿಯ ಮೊಬೈಲ್ ಕರೆ, ಪ್ರತ್ಯಕ್ಷದರ್ಶಿ ಹೇಳಿದ ರೋಚಕ ಕಥೆ!

ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟ ಸಂದರ್ಭದಲ್ಲಿ ಓರ್ವ ತಾಯಿ ಮಾಡಿದ ಒಂದು ದೂರವಾಣಿ ಕರೆ ಆತನ ಪ್ರಾಣ ಉಳಿಸಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವೇಳೆ ತಾಯಿ ಕರೆಯಿಂದ ಪಾರಾದ ವ್ಯಕ್ತಿ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವೇಳೆ ತಾಯಿ ಕರೆಯಿಂದ ಪಾರಾದ ವ್ಯಕ್ತಿ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟ ಸಂದರ್ಭದಲ್ಲಿ ಓರ್ವ ತಾಯಿ ಮಾಡಿದ ಒಂದು ದೂರವಾಣಿ ಕರೆ ಆತನ ಪ್ರಾಣ ಉಳಿಸಿದೆ.

ಹೌದು... ಶುಕ್ರವಾರ ಮಧ್ಯಾಹ್ನ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆ ಹೋಗಿದ್ದ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಅವರ ತಾಯಿಯ ಮಾಡಿದ್ದ ವಾಡಿಕೆಯ ಫೋನ್ ಕರೆ ಆತನ ಜೀವ ಉಳಿಸಿದೆ. ಬಿಹಾರದ ಪಾಟ್ನಾ ಮೂಲದ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ ಕುಮಾರ್ ಅಲಂಕೃತ್ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆಂದು ಬಂದು ದೋಸೆ ತೆಗೆದುಕೊಂಡು ಇನ್ನೇನು ತಿನ್ನನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಆತನ ಮೊಬೈಲ್ ಗೆ ತಾಯಿ ಕರೆ ಮಾಡಿದ್ದಾರೆ. ಹೀಗಾಗಿ ಆಲಂಕೃತ್ ಅಮ್ಮನೊಂದಿಗೆ ಮಾತನಾಡಲು ಶಾಂತವಾದ ಸ್ಥಳ ಹುಡುಕಿ ಅಲ್ಲಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪ್ರದೇಶಕ್ಕೆ ದೋಸೆ ತೆಗೆದುಕೊಂಡು ಹೋಗಿದ್ದಾರೆ.

ಅಲಂಕೃತ್ ದೋಸೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಇತ್ತ ಅವರು ಕುಳಿತ ಊಟ ಮಾಡಬೇಕೆಂದುಕೊಂಡಿದ್ದ ಜಾಗದಲ್ಲೇ ಸ್ಫೋಟ ಸಂಭವಿಸಿದೆ. ಇವಿಷ್ಟೂ ಘಟನೆಯನ್ನು ಅಲಂಕೃತ್ ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಿಕೊಂಡಿದ್ದು, ತಮಗಾದ ಕರಾಳ ಅನುಭವವನ್ನು ಮತ್ತು ತನ್ನ ಜೀವ ಉಳಿಸಿದ ತಾಯಿ ಕರೆಯನ್ನು ನೆನಪಿಸಿಕೊಂಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವೇಳೆ ತಾಯಿ ಕರೆಯಿಂದ ಪಾರಾದ ವ್ಯಕ್ತಿ
ರಾಮೇಶ್ವರಂ ಕೆಫೆ: ಸ್ಫೋಟಕ್ಕೆ ಮುನ್ನ ಬೀಪ್.. ಬೀಪ್.. ಶಬ್ದ ಕೇಳಿಸಿತು; ಪ್ರತ್ಯಕ್ಷದರ್ಶಿ ಹೇಳಿಕೆ

ನಿನ್ನೆ ನಡೆದ ಘಟನೆ ಮತ್ತು ತಾನು ಹೇಗೆ ಪಾರಾದೆ ಎನ್ನುವುದನ್ನು ಅಲಂಕೃತ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರು ಕೂಡಾ ತಮ್ಮ ಟ್ವೀಟ್ ನಲ್ಲಿ ಅಮ್ಮನೇ ದೇವರು ಎಂದು ಬರೆದುಕೊಂಡಿದ್ದಾರೆ. ನಿಜ ಆ ಒಂದು ಕರೆ ಬರದೇ ಹೋಗಿದ್ದರೆ ಇಂದು ಹೇಗೆ ಬದುಕುಳಿದೆ ಎಂದು ಸುದ್ದಿಯಾಗಿರುವ ಅಲಂಕೃತ್, ಬೇರೆಯೇ ರೀತಿಯಲ್ಲಿ ಸುದ್ದಿಯಾಗಿರುತ್ತಿದ್ದರು.

ಇಷ್ಟಕ್ಕೂ ಟ್ವೀಟ್ ನಲ್ಲೇನಿದೆ..? ಘಟನಾ ಸ್ಥಳದಲ್ಲೇನಾಗಿತ್ತು?

ಅಲಂಕೃತ್ ಟ್ವಿಟರ್ ನವ್ವಿ ಬರೆದುಕೊಂಡಂತೆ, "ನಾನು ಪಿಕ್ ಅಪ್ ಕೌಂಟರ್‌ನಿಂದ ನನ್ನ ದೋಸೆಯನ್ನು ಹಿಡಿದು ಕೆಫೆಯೊಳಗಿನ ನನ್ನ ಸಾಮಾನ್ಯ ಸ್ಥಳದಲ್ಲಿ ಕುಳಿತುಕೊಳ್ಳಲು ಹೊರಟಿದ್ದೆ. ನಾನು ಕೆಫೆಗೆ ಭೇಟಿ ನೀಡಿದಾಗಲೆಲ್ಲಾ ನಾನು ಇದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದೆ (ನಂತರ ಅಲ್ಲಿ ಸ್ಫೋಟ ಸಂಭವಿಸಿದೆ) ಅದು ನನ್ನ ನೆಚ್ಚಿನ ಜಾಗವಾಗಿತ್ತು. ಈ ಬಾರಿಯೂ ಸಹ ನಾನು ಅಲ್ಲಿ ಕುಳಿತುಕೊಳ್ಳಲು ಯೋಜಿಸುತ್ತಿದ್ದೆ. ಆದರೆ ನಂತರ ನನಗೆ ನನ್ನ ತಾಯಿಯಿಂದ ಫೋನ್ ಕರೆ ಬಂದಿತು, ಆದ್ದರಿಂದ ನಾನು ಕೆಫೆಯ ಹೊರಗೆ ಕೆಲವು ಮೀಟರ್ ದೂರದ ಶಾಂತ ಪ್ರದೇಶಕ್ಕೆ ಹೋಗಲು ನಿರ್ಧರಿಸಿದೆ, ಹಾಗಾಗಿ ನಾನು ಅವಳೊಂದಿಗೆ ಮಾತನಾಡಬಹುದು ಎಂದು ಸುಮಾರು 10 ಮೀಟರ್ ದೂರ ಹೋದೆ ಎಂದು ಅವರು ಹೇಳಿದರು.

ಇದು ವಾಡಿಕೆಯ ಫೋನ್ ಕರೆ ಎಂದು ವಿವರಿಸಿದ ಅವರು, "ಅವಳು (ನನ್ನ ತಾಯಿ) ನಾನು ಎಲ್ಲಿದ್ದೇನೆ ಮತ್ತು ಹೇಗಿದ್ದೇನೆ.. ಏನು ಮಾಡುತ್ತಿದ್ದೇನೆ ಮತ್ತು ವಸ್ತುಗಳ ಬಗ್ಗೆ ಕೇಳುತ್ತಿದ್ದಳು ... ಈ ವೇಳೆ ಇದ್ದಕ್ಕಿದ್ದಂತೆ, ನಾನು ಈ ದೊಡ್ಡ ಶಬ್ದವನ್ನು ಕೇಳಿದೆ, ನಾನು ಹೊರಗೆ ಇದ್ದೆ, ಅದು ದೊಡ್ಡ ಸ್ಫೋಟವಾಗಿತ್ತು. ಎಲ್ಲರೂ ಭಯಭೀತರಾಗಿ ಹೊರಗೆ ಓಡಿಹೋದರು. ಎಲ್ಲೆಂದರಲ್ಲಿ ಹೊಗೆ ಆವರಿಸಿತು ಮತ್ತು ಸ್ಥಳದಿಂದ ದುರ್ವಾಸನೆ ಬರಲಾರಂಭಿಸಿತು. ಕೆಲವರಿಗೆ ಸುಟ್ಟ ಗಾಯಗಳಾಗಿದ್ದರೆ, ಕೆಲವರ ಕಿವಿ ಮತ್ತು ತಲೆಯಿಂದ ರಕ್ತಸ್ರಾವವಾಗುತ್ತಿತ್ತು ಎಂದು ಅಲಂಕೃತ್ ಹೇಳಿದರು.

"ಇದು ಇದ್ದಕ್ಕಿದ್ದಂತೆ ಸಂಭವಿಸಿತು. ಆ ದೊಡ್ಡ ಸ್ಫೋಟ ಮತ್ತು ಏನಾಗುತ್ತಿದೆ ಎಂದು ತಿಳಿಯದೆ ಜನರು ಓಡಿಹೋದರು. ಇದು ಭಯಾನಕ ಮತ್ತು ಆಘಾತಕಾರಿಯಾಗಿತ್ತು. ಆದರೆ ಅದೃಷ್ಟವಶಾತ್, ನನ್ನ ತಾಯಿಯಿಂದ ಬಂದ ಆ ಫೋನ್ ಕರೆ ನನ್ನ ಜೀವ ಉಳಿಸಿತು. ಅಮ್ಮನ ಕರೆ ಬರದೇ ಹೋಗಿದಿದ್ದರೆ, ಎಂದಿನಂತೆ ನಾನು ನನ್ನ ನೆಚ್ಚಿನ ಸ್ಥಳದಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಒಂದು ವೇಳೆ ನಾನು ಅಲ್ಲಿಯೇ ಇದ್ದಿದ್ದರೆ... ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com