ಕೈ ಕೊಟ್ಟ ಬೆಳೆ; ಸಂಕಷ್ಟದಲ್ಲಿ ರೈತರು: ಮೇವು ಕೊರತೆಯಿಂದ ಅಗ್ಗದ ಬೆಲೆಗೆ ಜಾನುವಾರು ಮಾರಾಟ

ರೈತರಿಗೆ ಸಹಾಯ ಮಾಡಲು ಮೇವು ಬ್ಯಾಂಕ್ ಪ್ರಾರಂಭ ಎಂದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗದಗ: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಕಳೆದ ಒಂದು ವರ್ಷದಿಂದ ಬರಗಾಲಕ್ಕೆ ತುತ್ತಾಗಿದ್ದರೆ, 2022ರಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಬೆಳೆ ಹಾನಿಗೀಡಾದ ರೈತರು ಈಗ ಕೃಷಿಗೆ ಬಿತ್ತನೆಬೀಜ ಖರೀದಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಲಸೆ ಹೋಗುತ್ತಿದ್ದಾರೆ.

ಮೇವಿನ ಕೊರತೆಯಿಂದಾಗಿ ಕೆಲವು ರೈತರು ಈಗ ತಮ್ಮ ಜಾನುವಾರುಗಳನ್ನು 50 ರಿಂದ 60,000 ರೂಪಾಯಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಉತ್ತಮ ಸಮಯದಲ್ಲಾದರೆ, ಪ್ರತಿ ಹಸುವಿನ ಬೆಲೆ 1 ಲಕ್ಷ ರೂಪಾಯಿ ಇರುತ್ತದೆ. ಆದರೆ ಈಗ ಸಿಕ್ಕ ಬೆಲೆಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ರೈತರಿಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ದನಕರುಗಳು ಮೇವಿನ ಕೊರತೆಯಿಂದ ಬಳಲುತ್ತಿವೆ.

ಕಳೆದ ಎರಡು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಗದಗ ಜಿಲ್ಲೆಯ ರೈತರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. 2022 ರಲ್ಲಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು, ಅದರಿಂದ ರೈತರು ಬೆಳೆದ ಇಳುವರಿಗಳು ಹಾಳಾಗಿದ್ದವು. ನಂತರ ಕಳೆದ ವರ್ಷ ಈ ಪ್ರದೇಶವನ್ನು ಬರ ಆವರಿಸಿತು, ಇದರಿಂದ ರೈತರು ತಮ್ಮ ರಬಿ ಮತ್ತು ಖಾರಿಫ್ ಬೆಳೆಗಳನ್ನು ಕಳೆದುಕೊಳ್ಳುವಂತೆ ಆಯಿತು.

ಈಗ ಕೈಯಲ್ಲಿ ಹಣವಿಲ್ಲದೆ ರೈತರು ತಮ್ಮ ಅಮೂಲ್ಯ ಜಾನುವಾರುಗಳನ್ನು ಬಲವಂತವಾಗಿ ಮಾರಾಟ ಮಾಡುತ್ತಿದ್ದಾರೆ. ಇದರೊಂದಿಗೆ ಮೇವಿನ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಒಂದು ಟ್ರ್ಯಾಕ್ಟರ್ ಮೇವಿನ ಬೆಲೆ 3,000 ರೂ.ಗಳಷ್ಟಿತ್ತು, ಅದು ಈಗ 10,000 ರೂ.ಗಳನ್ನು ದಾಟಿದೆ, ಇದು ರೈತರ ಆತಂಕದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಸಾಂದರ್ಭಿಕ ಚಿತ್ರ
Rain forecast: ಎಲ್ ನಿನೋ ಪರಿಣಾಮ, ದಕ್ಷಿಣ ಭಾರತದ ಮಳೆ ವ್ಯವಸ್ಥೆಯೇ ಬದಲು; ಹವಾಮಾನ ತಜ್ಞರ ಆತಂಕ

ರೋಣದ ರೈತ ಸಂಗಮೇಶ ನಾಯಕ, ‘ಎಲ್ಲೆಡೆ ಬರಗಾಲ ಆವರಿಸಿದ್ದು, ಸತತವಾಗಿ ಬೆಳೆ ಕಳೆದುಕೊಂಡಿದ್ದೇವೆ. ಈಗ ಹಲವಾರು ರೈತರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕೃಷಿಗೆ ಜಾನುವಾರುಗಳು ಅತ್ಯಗತ್ಯವಾಗಿದ್ದು, ಬರ ಪರಿಸ್ಥಿತಿಯಿಂದ ಮೇವಿನ ಬೆಲೆ ಏರಿಕೆಯಿಂದಾಗಿ ರೈತರು ಈಗ ಅವುಗಳನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಘೋರ ಪರಿಸ್ಥಿತಿಯನ್ನು ಹೋಗಲಾಡಿಸಲು ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಲು ನಾವು ಜಿಲ್ಲಾಡಳಿತವನ್ನು ಕೋರುತ್ತೇವೆ ಎನ್ನುತ್ತಾರೆ.

ಜಿಲ್ಲೆಯ ರೈತರಿಗೆ ಸಹಾಯ ಮಾಡಲು ಮೇವು ಬ್ಯಾಂಕ್ ನ್ನು ಪ್ರಾರಂಭಿಸುತ್ತಿದ್ದೇವೆ. ಮೊದಲ ಹಂತದಲ್ಲಿ ಐದು ಗ್ರಾಮ ಪಂಚಾಯತ್ ಗಳಲ್ಲಿ ಮೇವು ಬ್ಯಾಂಕ್ ತೆರೆಯಲಿದ್ದು, ಪ್ರತಿಯೊಂದರಲ್ಲಿಯೂ 4-5 ಟ್ರಕ್ ಲೋಡ್ ಮೇವು ಇರಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com