ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಭೌತಶಾಸ್ತ್ರ ಪರೀಕ್ಷೆಗೆ ಗ್ರೇಸ್ ಮಾರ್ಕ್ಸ್ ನೀಡಲು ಶಿಕ್ಷಣ ಇಲಾಖೆ ಒಪ್ಪಿಗೆ!

ಮಾರ್ಚ್ 7 ರಂದು ನಡೆದ ದ್ವಿತೀಯ ಪಿಯು ಭೌತಶಾಸ್ತ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಭಾನುವಾರ ಸುತ್ತೋಲೆ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರ್ಚ್ 7 ರಂದು ನಡೆದ ದ್ವಿತೀಯ ಪಿಯು ಭೌತಶಾಸ್ತ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಭಾನುವಾರ ಸುತ್ತೋಲೆ ಹೊರಡಿಸಿದೆ.

ಮಾರ್ಚ್​​ 7ರಂದು ಭೌತಶಾಸ್ತ್ರ (ಫಿಸಿಕ್ಸ್​​) ನಡೆದಿತ್ತು. ಆದರೆ ಭೌತಶಾಸ್ತ್ರ ವಿಷಯದ ಪರೀಕ್ಷೆಯು ಕಷ್ಟ ಕಷ್ಟವಾಗಿತ್ತು. ಅದರಲ್ಲೂ ಮಲ್ಟಿಪಲ್​ ಛಾಯ್ಟ್ ಕ್ವಶ್ಚನ್ಸ್​​ ಕಷ್ಟವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದರು.

ತಕ್ಷಣವೇ ಪೆಟಿಷನ್​​ ಸಲ್ಲಿಕೆಗೆ ಮುಂದಾಗಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆನ್​ಲೈನ್​ ಪೆಟಿಶನ್ ಸಲ್ಲಿಸಿದ್ದರು.

7/03/2024 ರಂದು ನಡೆದ ಭೌತಶಾಸ್ತ್ರ ಪರೀಕ್ಷೆಯಲ್ಲಿ, MCQ ಗಳು ತುಂಬಾ ಕಷ್ಟಕರ ಮತ್ತು ಟ್ರಿಕಿ ಆಗಿದ್ದವು. ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದಿರುವ ನಾವು ಇಂತಹ ಕಷ್ಟದ ಪರಿಸ್ಥಿತಿ ಎದುರಿಸಲು ಬಯಸುವುದಿಲ್ಲ. ಪ್ರತಿಯೊಂದು ಅಂಕವೂ ನಮ್ಮ ಭವಿಷ್ಯವನ್ನು ನಿರ್ಧರಿಸುವಂತಹದ್ದಾಗಿರುವುದರಿಂದ ನಾವು ಒಂದೇ ಒಂದು ಅಂಕವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಈ ಅಸ್ಪಷ್ಟತೆಗೆ ಪರಿಹಾರಾರ್ಥವಾಗಿ 7 MCQ ಗಳಿಗೆ ಗ್ರೇಸ್ ಅಂಕಗಳನ್ನು ನೀಡಬೇಕೆಂದು ನಾವು ಪಿಯು ಮಂಡಳಿಯನ್ನು ಒತ್ತಾಯಿಸಿದ್ದರು.

ವಾರ್ಷಿಕ ಬೋರ್ಡ್ ಪರೀಕ್ಷೆಗಳು 3 ಬಾರಿ ಇರುತ್ತವೆ ಎಂದು ಹೇಳಿ ಪಿಯುಸಿ ಮಂಡಳಿ ಗಾಳಿಯಲ್ಲಿ ಅರಮನೆ ನಿರ್ಮಿಸಲು ಪ್ರಯತ್ನಿಸುವುದು ಬೇಡ. ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳನ್ನು ಹಾಗೆ ಯಾಮಾರಿಸಲೂ ಬೇಡಿ. ಮುಂದಿನ ಹಂತಗಳಲ್ಲಿ 2 ಅಥವಾ 3ನೆಯ ಪರೀಕ್ಷೆಗೆ ಹಾಜರಾಗಬಹುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾನಾಂತರವಾಗಿ ಅದೇ ಸಮಯದಲ್ಲಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ಇನ್ನೊಂದು ಪರೀಕ್ಷೆ ಬರೆಯುವುದು ತ್ರಾಸದಾಯಕವಾಗುವುದಿಲ್ಲವೇ?

ಸಂಗ್ರಹ ಚಿತ್ರ
5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ತೀರ್ಪು: ಒತ್ತಡದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು

ಇನ್ನು ಯಾವುದೇ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಅಸಂಬದ್ಧವಾಗಿ ಮತ್ತು ಅಸ್ಪಷ್ಟವಾಗಿ ಇರಬಾರದು ಎಂದು ಸ್ವತಃ ಪಿಯುಸಿ ಮಂಡಳಿ ಬದ್ಧತೆ ತೋರುತ್ತದೆ. ಆದರೆ ವಿಷಯ ತಜ್ಞರು ಹೇಳುವಂತೆ ಈಗಿನ ಭೌತಶಾಸ್ತ್ರ ಪರೀಕ್ಷೆಯಲ್ಲಿ MCQ ವಿಭಾಗದಲ್ಲಿ ಏಳೆಂಟು ಪ್ರಶ್ನೆಗಳ ಉತ್ತರಗಳು ಅಸ್ಪಷ್ಟವಾಗಿರುವಂತಿದೆ. ಇದಕ್ಕೆ ಹೊಣೆಯಾರು? ಅಥವಾ ಮಂಡಳಿಯು ತನ್ನದೇ ಆದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದೆಯೇ? ಹೌದಾದಲ್ಲಿ ಇದು ತುಂಬಾ ದುಃಖಕರವಷ್ಟೇ ಅಲ್ಲ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗುವುದಿಲ್ಲವೇ? ಎಂದು ಹೇಳಿದ್ದರು. ಈ ಪೆಟಿಶನ್ಗೆ ಸಾಕಷ್ಟು ಮಂದಿ ಸಮ್ಮತಿ ಸೂಚಿಸಿದ್ದರು.

ಈ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಇಂದು ಒಂದು ಬಾರಿಯ ನಿರ್ಣಯವಷ್ಟೇ. ಭವಿಷ್ಯದಲ್ಲಿ ಮತ್ತೆ ಇಂತಹ ನಿರ್ಣಯಗಳ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದೆ.

ಪ್ರಶ್ನೆಪತ್ರಿಕೆಯ ಭಾಗ A ಯಲ್ಲಿ ಬ್ಲೂಪ್ರಿಂಟ್ ಅಲ್ಲದ MCQ ಗಳನ್ನು ಪ್ರಯತ್ನಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನವೇ ನಡೆದ ವಿದ್ಯಾರ್ಥಿಗಳಿಗೆ ಯಾವುದೇ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com