ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯಕ್ಕೆ 2 ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು

ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ
ಕಲಬುರಗಿ-ಬೆಂಗಳೂರು (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ವಂದೇ ಭಾರತ್ ರೈಲು
ಕಲಬುರಗಿ-ಬೆಂಗಳೂರು (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ವಂದೇ ಭಾರತ್ ರೈಲು

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗ ಒಳಗೊಂಡಂತೆ ಕರ್ನಾಟಕವು ಎರಡು ಹೊಸ ವಂದೇ ಭಾರತ್ ರೈಲುಗಳನ್ನು ಪಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಎರಡು ಹೊಸ ರೈಲುಗಳು - ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ (ರೈಲು ಸಂಖ್ಯೆ: 22231/22232) ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಎಸ್‌ಎಂವಿಟಿ ಬೆಂಗಳೂರು ಮತ್ತು ಕೃಷ್ಣರಾಜಪುರದ ಮೂಲಕ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಹೆಚ್ಚುವರಿ ವಂದೇ ಭಾರತ್ ರೈಲು - ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಎರಡು ಸೇರ್ಪಡೆಗಳೊಂದಿಗೆ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 22231) ವಂದೇ ಭಾರತ್ ಎಕ್ಸ್‌ಪ್ರೆಸ್ ಕಲಬುರಗಿಯಿಂದ ಬೆಳಗ್ಗೆ 5:15 ಕ್ಕೆ ಹೊರಟು ಶುಕ್ರವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮಧ್ಯಾಹ್ನ 2 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ರೈಲಿಗೆ ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ ಮತ್ತು ಯಲಹಂಕದಲ್ಲಿ ನಿಲುಗಡೆ ಇರುತ್ತದೆ.

ಆದರೆ, ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ (ರೈಲು ಸಂಖ್ಯೆ 22232) ವಂದೇ ಭಾರತ್ ಎಕ್ಸ್‌ಪ್ರೆಸ್ ಎಸ್‌ಎಂವಿಟಿ ಬೆಂಗಳೂರಿನಿಂದ ಮಧ್ಯಾಹ್ನ 2:40 ಕ್ಕೆ ಹೊರಟು ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 11:30 ಕ್ಕೆ ಕಲಬುರಗಿ ತಲುಪಲಿದೆ.

ಇದಲ್ಲದೆ, ಮೈಸೂರು-ಎಂಜಿಆರ್ ಚೆನ್ನೈ (ರೈಲು ಸಂಖ್ಯೆ 20663) ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಳಿಗ್ಗೆ 6:00 ಗಂಟೆಗೆ ಹೊರಟು ಮಧ್ಯಾಹ್ನ 12:20 ಕ್ಕೆ ಎಂಜಿಆರ್ ಚೆನ್ನೈಗೆ ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ತಲುಪುತ್ತದೆ. ರೈಲು ಮಾರ್ಗದಲ್ಲಿ ಮಂಡ್ಯ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಮತ್ತು ಕಟಪಾಡಿಯಲ್ಲಿ ನಿಲುಗಡೆಯಾಗಲಿದೆ.

ಕಲಬುರಗಿ-ಬೆಂಗಳೂರು (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ವಂದೇ ಭಾರತ್ ರೈಲು
ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್ ನಿರ್ವಹಣೆಗೆ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದಲ್ಲಿ ಹೊಸ ಡಿಪೋ ನಿರ್ಮಾಣ

ಹಬ್ಬದ ಕೊಡುಗೆ

ಎಂಜಿಆರ್ ಚೆನ್ನೈ-ಮೈಸೂರು (ರೈಲು ಸಂಖ್ಯೆ. 20664) ವಂದೇ ಭಾರತ್ ಎಕ್ಸ್‌ಪ್ರೆಸ್ ಎಂಜಿಆರ್ ಚೆನ್ನೈನಿಂದ ಸಂಜೆ 5:00 ಗಂಟೆಗೆ ಹೊರಡುತ್ತದೆ ಮತ್ತು ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 11:20 ಕ್ಕೆ ಮೈಸೂರು ತಲುಪುತ್ತದೆ.

ಮೈಸೂರಿನಲ್ಲಿ ನಿರ್ವಹಣಾ ಸೌಲಭ್ಯದ ಕಾರ್ಯಾರಂಭದವರೆಗೆ, ರೈಲು SMVT ಬೆಂಗಳೂರು ಮತ್ತು MGR ಚೆನ್ನೈ ಸೆಂಟ್ರಲ್ ನಡುವೆ ಚಲಿಸುತ್ತದೆ. ಏಪ್ರಿಲ್ 5 ರಿಂದ, ಮೇಲೆ ತಿಳಿಸಿದ ಸಮಯದ ಪ್ರಕಾರ ರೈಲು ಮೈಸೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಚಲಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಹೊಸ ಜೋಡಿ ರೈಲುಗಳು ಲಕ್ಷಾಂತರ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಗಮನಾರ್ಹ ಸಮಯವನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com