ಮೂಲಸೌಕರ್ಯ ಯೋಜನೆಗಳಿಗೆ ರಾಜಕಾರಣಿಗಳ ಹೆಸರು ವಿರೋಧಿಸಿ ಪಿಐಎಲ್; ಶಾಸಕ ಶಾಮನೂರು, ಸಚಿವ ಮಲ್ಲಿಕಾರ್ಜುನ್ ಗೆ ಹೈಕೋರ್ಟ್ ನೊಟೀಸ್

ಪಿಐಎಲ್ ವಿಚಾರಣೆ ನಡೆಸಿರುವ ಹೈಕೋರ್ಟ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿದೆ.
ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ)PTI

ಬೆಂಗಳೂರು: ದಾವಣಗೆರೆಯಲ್ಲಿ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿರುವ ಹೈಕೋರ್ಟ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್ಎಸ್ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ನೊಟೀಸ್ ಜಾರಿಗೊಳಿಸಿದೆ.

ಹಲವು ಕಟ್ಟಡಗಳು, ರಸ್ತೆ, ಪಾರ್ಕ್, ಕೆರೆ ಇನ್ನಿತರ ಸಾರ್ವಜನಿಕ ಹಣದಲ್ಲಿ ನಿರ್ಮಾಣ/ ಅಭಿವೃದ್ಧಿಗೊಂಡ ಮೂಲಸೌಕರ್ಯ ಯೋಜನೆಗಳಿಗೆ ಜೀವಂತ ಇರುವ ರಾಜಕಾರಣಿಗಳ ಹೆಸರು ನಾಮಕರಣಮಾಡುವುದನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ದಾವಣಗೆರೆಯ ವಕೀಲ ಎಸಿ ರಾಘವೇಂದ್ರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.

ಕೋರ್ಟ್ (ಸಾಂಕೇತಿಕ ಚಿತ್ರ)
ಜಾತಿ ಗಣತಿ ವರದಿ: ವಿಸ್ತೃತ ವಾದ ಆಲಿಸದೇ ಯಾವುದೇ ಆದೇಶ ಹೊರಡಿಸಲಾಗದು; ಸರ್ಕಾರಕ್ಕೆ ಹೈಕೋರ್ಟ್

‘ಸನ್ಮಾನ್ಯ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನ’ ಹೆಸರನ್ನು ತಾಲ್ಲೂಕಿನ ಆಟದ ಮೈದಾನದಿಂದ ತೆಗೆದು ಹಾಕುವಂತೆ 2012ರ ಜೂನ್‌ನಲ್ಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶ ಹೊರಡಿಸಿ, ‘ಆಟದ ಮೈದಾನಕ್ಕೆ ಯಾರ ಹೆಸರನ್ನೂ ಇಡಬಾರದು’ ಎಂದು ಡಿಸಿ ಹಾಗೂ ಇತರರಿಗೆ ಕೋರ್ಟ್ ಸೂಚಿಸಿತ್ತು.

ಕೋರ್ಟ್ (ಸಾಂಕೇತಿಕ ಚಿತ್ರ)
ಲೋಕಸಭೆ ಚುನಾವಣೆ: ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ; ಮಲ್ಲಿಕಾರ್ಜುನ ಖರ್ಗೆಗೆ ಶಾಮನೂರು ಪತ್ರ

ಜೀವಂತ ವ್ಯಕ್ತಿ ಮತ್ತು ಸಾರ್ವಜನಿಕ ವ್ಯಕ್ತಿಯ ಹೆಸರಿನಲ್ಲಿ ಯೋಜನೆಗಳಿಗೆ ನಾಮಕರಣ ಮಾಡಬಾರದು ಅವರು ಅದರಿಂದ ಲಾಭವನ್ನು ಪಡೆಯುತ್ತಾರೆ. ಯಾವುದೇ ರಾಜಕಾರಣಿ ತನ್ನ ಹೆಸರನ್ನು ಅಜರಾಮರಗೊಳಿಸಬೇಕೆಂದು ಬಯಸಿದರೆ, ಯಾವುದೇ ಸಾರ್ವಜನಿಕ ಹಣವನ್ನು ಬಳಸದಿದ್ದಲ್ಲಿ ಆತ ತನ್ನ ಆಸ್ತಿಯಲ್ಲಿ ಅದನ್ನು ಮಾಡಲು ಸ್ವತಂತ್ರನಾಗಿರುತ್ತಾನೆ ಎಂದು ಹೈ ಕೋರ್ಟ್ ಹೇಳಿತ್ತು. ಈ ಆದೇಶದ ಆಧಾರದ ಮೇಲೆ, ಹೆಸರನ್ನು ಬದಲಾಯಿಸಲಾಗಿದೆ. ಜೀವಂತವಾಗಿರುವ ರಾಜಕಾರಣಿಗಳ ಹೆಸರನ್ನು ಸಾರ್ವಜನಿಕ ಕಟ್ಟಡಗಳಿಗೆ ಹೆಸರಿಸುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸಲು ಜನರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ಆದೇಶವನ್ನು ಉಲ್ಲೇಖಿಸಿ ಅರ್ಜಿದಾರರು ಸಾರ್ವಜನಿಕ ನಿಧಿಯಿಂದ ನಿರ್ಮಿಸಲಾದ ಹಲವಾರು ಕಟ್ಟಡಗಳು, ಕೆರೆಗಳು, ಬಸ್ ನಿಲ್ದಾಣಗಳು, ರಸ್ತೆಗಳು, ಉದ್ಯಾನವನಗಳು ಇತ್ಯಾದಿಗಳನ್ನು ಶಿವಶಂಕರಪ್ಪ ಮತ್ತು ಅವರ ಪುತ್ರ ಮಲ್ಲಿಕಾರ್ಜುನ್ ಹೆಸರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಕೋರ್ಟ್ (ಸಾಂಕೇತಿಕ ಚಿತ್ರ)
ಭ್ರಷ್ಟಾಚಾರ ನಿಗ್ರಹಿಸಲು ಎಲ್ಲಾ ಸಂಸದರಿಗೆ ಚಿಪ್ ಅಳವಡಿಸಿ ಎಂದು ವ್ಯಕ್ತಿ ಮನವಿ; ಪಿಐಎಲ್ ವಜಾಗೊಳಿಸಿದ 'ಸುಪ್ರೀಂ'

ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ, ಕುಂದುವಾಡ ಕೆರೆಗೆ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ ಸಾಗರ, ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಎಸ್ ಎಸ್ ಮಲ್ಲಿಕಾರ್ಜುನ ಸಭಾಂಗಣ, ಪಾಲಿಕೆ ಸಭಾಂಗಣ, ಉದ್ಯಾನವನಕ್ಕೆ ಡಾ.ಶಾಮನೂರು ಹೆಸರಿಡಲಾಗಿದೆ. ಶಿವಶಂಕರಪ್ಪ ಮತ್ತು ಅವರ ಪುತ್ರ ಮಲ್ಲಿಕಾರ್ಜುನ್ ಅವರ ಫೋಟೋವನ್ನು ದಾವಣಗೆರೆಯ ಪ್ರವೇಶ ದ್ವಾರದ ಬೋರ್ಡ್‌ನಲ್ಲಿ ಹಾಕಲಾಗಿದೆ.

ಇವುಗಳನ್ನು ಸಾರ್ವಜನಿಕ ನಿಧಿಯಿಂದ ನಿರ್ಮಿಸಲಾಗಿದೆ ಮತ್ತು ತಂದೆ ಮತ್ತು ಮಗ ತಮ್ಮ ಜೇಬಿನಿಂದ ಏನನ್ನೂ ಖರ್ಚು ಮಾಡಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅವರು ಪ್ರಭಾವಿ ಹುದ್ದೆಗಳನ್ನು ಹೊಂದಿದ್ದರು ಮತ್ತು ಸಾರ್ವಜನಿಕ ಅನುದಾನಿತ ಯೋಜನೆಗಳಿಗೆ ತಮ್ಮ ಹೆಸರನ್ನು ಸೇರಿಸಲು ಅಧಿಕಾರಿಗಳಿಗೆ ಒತ್ತಡ ಹೇರಿದ್ದರು. ಇದರಿಂದ ಸಾರ್ವಜನಿಕರಲ್ಲಿ ತಂದೆ-ಮಗನ ಕೃಪೆಯಿಂದ ಈ ಸೌಲಭ್ಯಗಳು ಲಭಿಸಿವೆ ಎಂಬ ಭಾವನೆ ಮೂಡಿದೆ. ಆದರೆ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com