ಭ್ರಷ್ಟಾಚಾರ ನಿಗ್ರಹಿಸಲು ಎಲ್ಲಾ ಸಂಸದರಿಗೆ ಚಿಪ್ ಅಳವಡಿಸಿ ಎಂದು ವ್ಯಕ್ತಿ ಮನವಿ; ಪಿಐಎಲ್ ವಜಾಗೊಳಿಸಿದ 'ಸುಪ್ರೀಂ'

ಪಾರದರ್ಶಕತೆಗಾಗಿ ಎಲ್ಲಾ ಚುನಾಯಿತ ಸಂಸದರು ಮತ್ತು ಶಾಸಕರ ಚಟುವಟಿಕೆಗಳನ್ನು ಡಿಜಿಟಲ್ ಮಾನಿಟರ್ ಮಾಡಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪಾರದರ್ಶಕತೆಗಾಗಿ ಎಲ್ಲಾ ಚುನಾಯಿತ ಸಂಸದರು ಮತ್ತು ಶಾಸಕರ ಚಟುವಟಿಕೆಗಳನ್ನು ಡಿಜಿಟಲ್ ಮಾನಿಟರ್ ಮಾಡಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

'ನಾವು ದೇಶದ ಎಲ್ಲಾ ಸಂಸದರು ಮತ್ತು ಶಾಸಕರ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಖಾಸಗಿತನದ ಹಕ್ಕು ಎಂಬುದೂ ಇದೆ. ಅವರು ಏನು ಮಾಡುತ್ತಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ನಾವು ಅವರ ಕೈಲುಗಳಿಗೆ ಚಿಪ್‌ಗಳನ್ನು (ಎಲೆಕ್ಟ್ರಾನಿಕ್) ಅಳವಡಿಸಲು ಸಾಧ್ಯವಿಲ್ಲ' ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ಎಲ್ಲ ಶಾಸಕರ ಚಟುವಟಿಕೆಗಳ ಮೇಲೆ 24x7 ಸಿಸಿಟಿವಿ ಮಾನಿಟರಿಂಗ್‌ಗಾಗಿ ಅರ್ಜಿದಾರರ ಮನವಿಗೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಚುನಾಯಿತ ಪ್ರತಿನಿಧಿಗಳು ತಮ್ಮದೇ ಆದ ವೈಯಕ್ತಿಕ ಜೀವನವನ್ನು ಹೊಂದಿದ್ದಾರೆ ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಕೇಂದ್ರದಲ್ಲಿರುವ ಸಚಿವರು, ಸಂಸದರು ಮೌನವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ ಅಸಮಾಧಾನ

ಆರಂಭದಲ್ಲಿ, ಖುದ್ದು ಹಾಜರಾದ ಅರ್ಜಿದಾರರು ವಾದ ಮಂಡಿಸಲು 15 ನಿಮಿಷಗಳ ಕಾಲಾವಕಾಶ ಕೋರಿದಾಗ, ಅವರಿಗೆ ಅಷ್ಟು ಕಾಲಾವಕಾಶ ನೀಡಿದ್ದೇ ಆದಲ್ಲಿ ವೆಚ್ಚವಾಗಿ 5 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತು.

'ಅದಕ್ಕಾಗಿ 5 ಲಕ್ಷ ರೂ. ವೆಚ್ಚವಾಗಲಿದೆ ಮತ್ತು ನಾವು ಅರ್ಜಿಯನ್ನು ವಜಾಗೊಳಿಸಿದರೆ, ಅದನ್ನು ಅರ್ಜಿದಾರರ ಭೂಕಂದಾಯದ ಬಾಕಿಯಾಗಿ ಪರಿಗಣಿಸಲಾಗುತ್ತದೆ. ನಾವು ವೆಚ್ಚವನ್ನು ವಿಧಿಸಬಹುದು ಏಕೆಂದರೆ, ಇದು ಸಾರ್ವಜನಿಕರ ಸಮಯ ಮತ್ತು ರಾಷ್ಟ್ರವು ಈ ಸಮಯದ ವೆಚ್ಚವನ್ನು ಭರಿಸುತ್ತದೆ' ಎಂದು ನ್ಯಾಯಾಲಯ ಹೇಳಿತು.

ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ಸಂಸದರು ಮತ್ತು ಶಾಸಕರು ಸಂಬಳ ಪಡೆಯುವ ಪ್ರತಿನಿಧಿಗಳಾಗಿದ್ದು, ಈ ಪ್ರತಿನಿಧಿಗಳು ಕಾನೂನುಗಳನ್ನು ರೂಪಿಸುವ, ಯೋಜನೆಗಳನ್ನು ರೂಪಿಸುವ ಮತ್ತು ನೀತಿಗಳನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯಲ್ಲಿ ಜನರ ಅಭಿಪ್ರಾಯಗಳನ್ನು ಪ್ರತಿನಿಧಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಆದಾಗ್ಯೂ, ಚುನಾಯಿತರಾದ ನಂತರ, ಅವರು ಸಾಮಾನ್ಯವಾಗಿ ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ಆಡಳಿತಗಾರರಂತೆ ವರ್ತಿಸಲು ಪ್ರಾರಂಭಿಸುತ್ತಾರೆ ಎಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ಅರ್ಜಿದಾರರು ವಾದಿಸಿದರು.

ಪಿಐಎಲ್‌ನಲ್ಲಿ ಕೋರಿದ ಪರಿಹಾರದಿಂದ ಪ್ರಭಾವಿತರಾಗದ ಸುಪ್ರೀಂ ಕೋರ್ಟ್ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಆದರೆ, ಅರ್ಜಿದಾರರ ಮೇಲೆ ಯಾವುದೇ ವೆಚ್ಚವನ್ನು ವಿಧಿಸದಿರಲು ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ
ನಿರ್ದಿಷ್ಟ ಯೋಜನೆಗಳನ್ನು ಜಾರಿಗೊಳಿಸಲು ನ್ಯಾಯಾಲಯಗಳು ರಾಜ್ಯಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ರಾಮೇಶ್ವರಂ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಬಗ್ಗೆ ನಮಗೆ ಕರೆ ಬಂದಿತ್ತು. ತಕ್ಷಣವೇ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿದೆ. ಇದು ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಪ್ರಾಥಮಿಕ ಶಂಕೆಗಳು. ಆದರೆ, ಇದು ಸಣ್ಣ ಸ್ಫೋಟವಾಗಿದ್ದು, ನಾವು ಸ್ಥಳಾಂತರಗೊಂಡಿದ್ದೇವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮಧ್ಯಾಹ್ನ 1.30 ರಿಂದ 2 ರ ನಡುವೆ ಸಂಭವಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com