ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ಆಟೋ ಚಾಲಕ ಸಾವು

ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರಿಗೆ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯ ಗೇಟ್ ಬಳಿ ಬುಧವಾರ ರಾತ್ರಿ ಡಿಕ್ಕಿ ಹೊಡೆದಿದ್ದ ಆಟೊ ಚಾಲಕ, ಗುರುವಾರ ಬೆಳಗಿನ ಜಾವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತುಕಾಲಿ ಸಂತೋಷ್
ತುಕಾಲಿ ಸಂತೋಷ್
Updated on

ಕುಣಿಗಲ್: ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರಿಗೆ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯ ಗೇಟ್ ಬಳಿ ಬುಧವಾರ ರಾತ್ರಿ ಡಿಕ್ಕಿ ಹೊಡೆದಿದ್ದ ಆಟೊ ಚಾಲಕ, ಗುರುವಾರ ಬೆಳಗಿನ ಜಾವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೋಡಿಹಳ್ಳಿಪಾಳ್ಯದ ಜಗದೀಶ್ (44) ಮೃತರು. ತುಕಾಲಿ ಸಂತೋಷ್, ಪತ್ನಿ ಮಾನಸ ತುಮಕೂರಿನಿಂದ ಹೊಳೆನರಸೀಪುರದತ್ತ ತಮ್ಮ ನೂತನ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರು ಖರೀದಿಸಿದ್ದು ಸಾಕಷ್ಟು ಸುದ್ದಿ ಆಗಿತ್ತು. ಕನಸು ನನಸಾಯಿತು ಎಂದು ಹೇಳಿಕೊಂಡಿದ್ದರು. ಮಾರ್ಚ್ 13ರ ಸಂಜೆ ಈ ಕಾರು ಅಪಘಾತಕ್ಕೆ ಒಳಗಾಗಿತ್ತು. ಆಟೋ ಹಾಗೂ ತುಕಾಲಿ ಸಂತೋಷ್ ಕಾರಿನ ಮಧ್ಯೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಆಟೋ ಚಾಲಕ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ತುಕಾಲಿ ಸಂತೋಷ್
ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಖರೀದಿಸಿದ್ದ ಹೊಸ ಕಾರು ಅಪಘಾತ!

ತುಕಾಲಿ ಸಂತೋಷ್ ಅವರು ಹೊಳೆನರಸೀಪುರದವರು. ತುಕಾಲಿ ಸಂತೋಷ್​ ಅವರು ತಮ್ಮ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದರು.

ಅದೇ ವೇಳೆ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಸಂತೋಷ್​ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com