ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಖರೀದಿಸಿದ್ದ ಹೊಸ ಕಾರು ಅಪಘಾತ!

ಕನ್ನಡ ಬಿಗ್​ ಬಾಸ್​ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ.
ತುಕಾಲಿ ಸಂತೋಷ್
ತುಕಾಲಿ ಸಂತೋಷ್

ಕನ್ನಡ ಬಿಗ್​ ಬಾಸ್​ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ.

ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿದೆ.

ತುಕಾಲಿ ಸಂತೋಷ್
ಬೆಂಗಳೂರು: ನಗರದಲ್ಲಿ ಎರಡು ತಿಂಗಳಲ್ಲಿ 174 ಅಪಘಾತ!

ಅಪಘಾತದಲ್ಲಿ ಯಾವುದೇ ಪ್ರಾಯಾಪಾಯ ಸಂಭವಿಸಿಲ್ಲ. ಆದರೆ ಆಟೋ ಚಾಲಕ ಜಗದೀಶ್ ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತುಕಾಲಿ ಸಂತೋಷ್​ ಅವರ ಕಾರು ಅಪಘಾತದ ಫೋಟೋಗಳು ಲಭ್ಯವಾಗಿವೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com