ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಮಿಂಚಿದ್ದ ನಟ ಈಗ ಆಟೋ ಚಾಲಕ: ಬೆಳ್ಳಿತೆರೆಯ ಕಹಿ ವಾಸ್ತವ ಬಿಚ್ಚಿಟ್ಟ ನಟನ ಕಥೆ!

ಬೆಳ್ಳಿತೆರೆಯ ಮಿನುಗು, ಅಭಿಮಾನಿಗಳ ಕರತಾಡನ ಮತ್ತು ಕೋಟಿ ಕೋಟಿ ಸಂಪಾದನೆಯ ಹಿಂದೆ ಕೆಲವೊಮ್ಮೆ ಕಹಿ ವಾಸ್ತವ ಅಡಗಿರುತ್ತದೆ. ಒಂದು ಕಾಲದಲ್ಲಿ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಖ್ಯಾತ ನಟನೊಬ್ಬ, ಇಂದು ಹೊಟ್ಟೆಪಾಡಿಗಾಗಿ ಆಟೋ ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ.
From Blockbuster Star to Auto Driver: The Tragic Real-Life Story of Tamil Actor Marimuthu
ಸುಬ್ರಮಣ್ಯಪುರಂ ಖ್ಯಾತಿಯ ನಟ ಮಾರಿಮುತ್ತುOnline Desk
Updated on: 

ಸಿನಿಮಾದಲ್ಲಿ ಯಶಸ್ಸು ಸಿಕ್ಕರೆ ಬದುಕು ಬದಲಾಗುತ್ತದೆ ಎಂದು ಎಲ್ಲರೂ ನಂಬುತ್ತಾರೆ. ಆದರೆ ಬೆಳ್ಳಿತೆರೆಯಲ್ಲಿ ಮಿಂಚಿದ ಪ್ರತಿಯೊಬ್ಬರ ಬದುಕು ಸುಖವಾಗಿರುವುದಿಲ್ಲ ಎಂಬುದಕ್ಕೆ ತಮಿಳು ಚಿತ್ರರಂಗದ ನಟ ಮಾರಿಮುತ್ತು ಅವರ ಕಥೆಯೇ ಸಾಕ್ಷಿ.! ಒಂದು ಕಾಲದಲ್ಲಿ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ಅವರು ಈಗ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದಾರೆ. ಹೌದು, ಅವರು ಆಟೋ ಓಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದವರಿಗೆ ಅಚ್ಚರಿ ಮತ್ತು ಬೇಸರ ಎರಡೂ ಆಗಿದೆ. ಸಿನಿಮಾ ಜಗತ್ತಿನ ಹೊಳಪಿನ ಹಿಂದೆ ಇರುವ ಕಹಿ ವಾಸ್ತವವನ್ನು ಈ ಕಥೆ ತೆರೆದಿಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

ಸುಬ್ರಮಣ್ಯಪುರಂನಲ್ಲಿ ಸಿಕ್ಕ ದೊಡ್ಡ ಬ್ರೇಕ್

2008ರಲ್ಲಿ ಎಂ ಶಶಿಕುಮಾರ್ ನಿರ್ದೇಶನದಲ್ಲಿ ತೆರೆಕಂಡ ಸುಬ್ರಮಣ್ಯಪುರಂ ತಮಿಳು ಚಿತ್ರರಂಗದ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತ್ತು. ವಾಸ್ತವಿಕ ಕಥೆ, ಅಭಿನಯ ಮತ್ತು ಸಂಗೀತದಿಂದ ಗಮನ ಸೆಳೆದಿದ್ದ ಈ ಚಿತ್ರದಲ್ಲಿ ಜೈ, ಶಶಿಕುಮಾರ್, ಸಮುದ್ರಕನಿ, ಸ್ವಾತಿ ಮತ್ತು ಗಂಜಾ ಕರುಪ್ಪು ನಟಿಸಿದ್ದರು. ಈ ಚಿತ್ರ ತೆಲುಗಿನಲ್ಲಿ ಅನಂತಪುರಂ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಮಾರಿಮುತ್ತು ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಸಿನಿಮಾ ದೊಡ್ಡ ಯಶಸ್ಸು ಕಂಡರೂ ಅವರಿಗೆ ನಿರೀಕ್ಷಿಸಿದಷ್ಟು ಅವಕಾಶಗಳು ಸಿಗಲಿಲ್ಲ.

From Blockbuster Star to Auto Driver: The Tragic Real-Life Story of Tamil Actor Marimuthu
ಇಷ್ಟು ದಿನ ಎಲ್ಲಿದ್ದಿ? ದಶಕಗಳ ನಂತರ ನಟಿ ದೀಪಾ ಸನ್ನಿಧಿ ಪ್ರತ್ಯಕ್ಷ! ಫ್ಯಾನ್ಸ್ ಗೆ ಹೇಳಿದ್ದೇನು?

ಬಾಲ್ಯದಲ್ಲೇ ಎದುರಾದ ಕಷ್ಟದ ಬದುಕು

ಮಧುರೈನಲ್ಲಿ ಹುಟ್ಟಿದ ಮಾರಿಮುತ್ತು ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಕೇವಲ ಮೂರನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಗಿತ್ತು. ಬದುಕಿಗಾಗಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಆರಂಭಿಸಿದ್ದ ಅವರು ಲೈಟ್, ಮೈಕ್ ರಿಪೇರಿ ಮತ್ತು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ನಂತರ ಸಿನಿಮಾ ಕನಸು ಹೊತ್ತು ಚೆನ್ನೈಗೆ ಹೋಗಿದ್ದರು. ಕೆಲಸ ಮಾಡುತ್ತಿದ್ದಾಗ ಚಿತ್ರತಂಡವೊಂದು ಅವರ ಫೋಟೋ ತೆಗೆದಿತ್ತು. ಕೆಲವು ದಿನಗಳ ನಂತರ ಸುಬ್ರಮಣ್ಯಪುರಂ ಆಡಿಷನ್ ಗೆ ಕರೆ ಬಂದಿತ್ತು. ಅದೇ ಅವರಿಗೆ ಸಿಕ್ಕ ಮೊದಲ ದೊಡ್ಡ ಅವಕಾಶವಾಗಿತ್ತು.

ಅವಕಾಶ ಕಡಿಮೆಯಾದಾಗ ಆಟೋದತ್ತ ಹೆಜ್ಜೆ

ಸುಬ್ರಮಣ್ಯಪುರಂ ನಂತರ ಹಾಸ್ಯ ಮತ್ತು ಪೋಷಕ ಪಾತ್ರಗಳು ಸಿಗುತ್ತವೆ ಎಂದು ಮಾರಿಮುತ್ತು ನಿರೀಕ್ಷಿಸಿದ್ದರು. ಆದರೆ ಅವಕಾಶಗಳು ಕಡಿಮೆಯಾದವು. ಸಿನಿಮಾಕ್ಕಾಗಿ ಕಾಯುತ್ತಾ ಕುಳಿತುಕೊಳ್ಳದೆ ಅವರು ಮತ್ತೆ ರೇಡಿಯೋ ರಿಪೇರಿ ಕೆಲಸಕ್ಕೆ ಮರಳಿದರು. ಆರ್ಥಿಕ ಸಂಕಷ್ಟ ಹೆಚ್ಚಾದಾಗ ಆಟೋ ಓಡಿಸಲು ಆರಂಭಿಸಿದರು. ಅದರಂತೆ, ಇತ್ತೀಚೆಗೆ ಅವರು ಆಟೋ ಓಡಿಸುತ್ತಿರುವ ಮತ್ತು ಆಟೋ ರಿಪೇರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕಷ್ಟದಲ್ಲೂ ಸ್ವಾಭಿಮಾನದಿಂದ ದುಡಿಯುತ್ತಿರುವ ಅವರಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಯಾವ ಕೆಲಸವೂ ಕೀಳಲ್ಲ ಎಂಬುದನ್ನು ಅವರ ಬದುಕು ತೋರಿಸುತ್ತಿದೆ.

From Blockbuster Star to Auto Driver: The Tragic Real-Life Story of Tamil Actor Marimuthu
ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಕರೆಸಿ ವೈದ್ಯರ ಮೇಲೆ ಹಲ್ಲೆ ಮತ್ತು ಸುಲಿಗೆ! ಖ್ಯಾತ ನಟ-ನಟಿ ಸೇರಿದಂತೆ ಮೂವರ ಬಂಧನ

ಮತ್ತೆ ಸಿನಿಮಾ ಕನಸು ಕಾಣುತ್ತಿರುವ ಮಾರಿಮುತ್ತು

ಮಾರಿಮುತ್ತು ಅವರು ಕಾರ್ತಿಕಾ ಅವರನ್ನು ಮದುವೆಯಾಗಿದ್ದಾರೆ. ಕಷ್ಟಗಳ ನಡುವೆಯೂ ಅವರು ಸಿನಿಮಾ ಆಸೆಯನ್ನು ಬಿಟ್ಟಿಲ್ಲ. ಸುಬ್ರಮಣ್ಯಪುರಂ 2 ಬಂದರೆ ತಮಗೆ ಮತ್ತೊಂದು ಉತ್ತಮ ಪಾತ್ರ ಸಿಗಬಹುದು ಎಂದು ಅವರು ಆಸೆ ಇಟ್ಟುಕೊಂಡಿದ್ದಾರೆ.

ಒಟ್ಟಾರೆಯಾಗಿ, ಸಿನಿಮಾದ ಯಶಸ್ಸು ಶಾಶ್ವತ ಬದುಕನ್ನು ಕೊಡುವುದಿಲ್ಲ ಎಂಬುದಕ್ಕೆ ಮಾರಿಮುತ್ತು ಅವರ ಬದುಕೇ ಉದಾಹರಣೆ. ಆದರೂ ದುಡಿಮೆಯಿಂದಲೇ ಬದುಕು ಕಟ್ಟುತ್ತಿರುವ ಅವರ ಹೋರಾಟ ಅನೇಕರಿಗೆ ಸ್ಫೂರ್ತಿಯಾಗಿದೆ. ಅವರಿಗೆ ಮತ್ತೆ ಉತ್ತಮ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಚಿತ್ರರಂಗದಲ್ಲಿ ಪೋಷಕ ಕಲಾವಿದರ ಸ್ಥಿತಿಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X