ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲ್ವಿಚಾರಣೆ ಮಾಡಲಿದ್ದಾರೆ ಚುನಾವಣಾಧಿಕಾರಿಗಳು: ಮನೋಜ್‌ ಕುಮಾರ್ ಮೀನಾ

ನಗರದಲ್ಲಿ ವಸೂಲಿ ದಂಧೆಗೆ ಇಳಿದಿದ್ದ ಖಾಸಗಿ ನೀರಿನ ಟ್ಯಾಂಕರ್‌ಗಳ ಪೂರೈಕೆ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿರುವುದಲ್ಲದೆ, ಮಾದರಿ ನೀತಿ ಸಂಹಿತೆ (ಎಂಸಿಸಿ) ಘೋಷಣೆಯಾದ ನಂತರ ಖಾಸಗಿ ನೀರಿನ ಟ್ಯಾಂಕರ್‌ಗಳ ಚಲನವಲನವನ್ನು ಚುನಾವಣಾಧಿಕಾರಿಗಳು ಸಹ ಮೇಲ್ವಿಚಾರಣೆ ಮಾಡಲಿದ್ದಾರೆ.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ಬೆಂಗಳೂರು: ನಗರದಲ್ಲಿ ವಸೂಲಿ ದಂಧೆಗೆ ಇಳಿದಿದ್ದ ಖಾಸಗಿ ನೀರಿನ ಟ್ಯಾಂಕರ್‌ಗಳ ಪೂರೈಕೆ ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿರುವುದಲ್ಲದೆ, ಮಾದರಿ ನೀತಿ ಸಂಹಿತೆ (ಎಂಸಿಸಿ) ಘೋಷಣೆಯಾದ ನಂತರ ಖಾಸಗಿ ನೀರಿನ ಟ್ಯಾಂಕರ್‌ಗಳ ಚಲನವಲನವನ್ನು ಚುನಾವಣಾಧಿಕಾರಿಗಳು ಸಹ ಮೇಲ್ವಿಚಾರಣೆ ಮಾಡಲಿದ್ದಾರೆ.

ಖಾಸಗಿ ನೀರಿನ ಟ್ಯಾಂಕರ್‌ಗಳಲ್ಲಿ ಯಾವುದೇ ಅವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಚುನಾವಣಾ ಸಿಬ್ಬಂದಿಗೆ 1950 ಡಯಲ್ ಮಾಡುವ ಅಥವಾ ವಿಜಿಲ್ ಆ್ಯಪ್‌ ಮೂಲಕ ತಿಳಿಸಬಹುದು. ಜಿಲ್ಲಾಧಿಕಾರಿ, ಐಟಿ, ಅಬಕಾರಿ ಅಥವಾ ಇತರ ಯಾವುದೇ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಮಸ್ಯೆಯನ್ನು ತಿಳಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ನೀರಿನ ಟ್ಯಾಂಕರ್ ಸರಬರಾಜಿಗೆ ಯಾವುದೇ ನಿಯಂತ್ರಣ ಇಲ್ಲದಿದ್ದರೂ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಸೇರಿದ ಖಾಸಗಿ ಟ್ಯಾಂಕರ್‌ಗಳು ಚುನಾವಣೆಯನ್ನು ನೆಪ ಮಾಡಿಕೊಂಡು ನೀರು ಪೂರೈಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಸಿಸಿ ಅಡಿಯಲ್ಲಿ ಬರ ಪರಿಹಾರವನ್ನು ಸೇರಿಸದಿದ್ದರೂ, ರಾಜಕೀಯ ಪಕ್ಷವು ನೀಡುವ ಸೌಲಭ್ಯಗಳನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com