ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಲ್ವರು ಪ್ರಯಾಣಿಕರಿಂದ 1 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ

ಕಸ್ಟಮ್ಸ್‌ ಅಧಿಕಾರಿಗಳು ಸೋಮವಾರ ವಿವಿಧ ವಿಮಾನಗಳಲ್ಲಿ ಆಗಮಿಸಿದ ನಾಲ್ವರು ಪ್ರಯಾಣಿಕರಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ 1.5 ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಜಪ್ತಿ ಮಾಡಿದ ಚಿನ್ನ
ಜಪ್ತಿ ಮಾಡಿದ ಚಿನ್ನ

ಬೆಂಗಳೂರು: ಬೆಂಗಳೂರು ಏರ್‌ಪೋರ್ಟ್ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್ ಸೋಮವಾರ ವಿವಿಧ ವಿಮಾನಗಳಲ್ಲಿ ಆಗಮಿಸಿದ ನಾಲ್ವರು ಪ್ರಯಾಣಿಕರಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ 1.5 ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.

ಓರ್ವ ಮಹಿಳೆ ಸೇರಿದಂತೆ ಎಲ್ಲಾ ನಾಲ್ವರು ಪ್ರಯಾಣಿಕರು ಗಲ್ಫ್ ದೇಶಗಳಿಂದ ಮತ್ತು ಮಲೇಷ್ಯಾದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಐಟಿ ಮತ್ತು ಹಾರ್ಡ್‌ವೇರ್ ಉಪಕರಣಗಳನ್ನು ಮಾರಾಟ ಮಾಡುವ ಬೆಂಗಳೂರಿನ 30 ವರ್ಷದ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೌಲಾಲಂಪುರದಿಂದ ಏರ್ ಏಷ್ಯಾ ವಿಮಾನದಲ್ಲಿ(ಎಕೆ-053) ಆಗಮಿಸಿದ್ದು, ಅವರು 197.43 ಗ್ರಾಂ ತೂಕದ ಚಿನ್ನವನ್ನು ಕಚ್ಚಾ ಚಿನ್ನದ ಕಡಾ ಮತ್ತು ಓ-ಲಿಂಕ್ ಚೈನ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದರು. ಇದರ ಒಟ್ಟು ಮಾರುಕಟ್ಟೆ ಮೌಲ್ಯ 12,55,655 ರೂ. ದೇಶದೊಳಗೆ ಕಚ್ಚಾ ಚಿನ್ನವನ್ನು ಯಾವುದೇ ರೂಪದಲ್ಲಿ ತರುವುದನ್ನು ನಿಷೇಧಿಸಲಾಗಿದೆ.

ಜಪ್ತಿ ಮಾಡಿದ ಚಿನ್ನ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.5 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ

"ಈ ಘಟನೆಯು ನಮಗೆ ಸಾಕಷ್ಟು ಆತಂಕಕಾರಿಯಾಗಿದೆ. ಏಕೆಂದರೆ ಉತ್ತಮ ಸಂಬಳ ಪಡೆಯುವ ವೃತ್ತಿಪರರು ಸಹ ಈಗ ಇಂತಹ ಅಪರಾಧವನ್ನು ಮಾಡುವ ಆಮಿಷಕ್ಕೆ ಒಳಗಾಗುತ್ತಿದ್ದಾರೆ" ಎಂದು ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಕುವೈತ್‌ನಿಂದ ಏರ್ ಅರೇಬಿಯಾ ವಿಮಾನದಲ್ಲಿ(ಜೆ 9-431) ಆಗಮಿಸಿದ ಮಹಿಳೆ, ತಮ್ಮ ಬಟ್ಟೆಯೊಳಗೆ ಬಚ್ಚಿಟ್ಟುಕೊಂಡು ಒಟ್ಟು 196.73 ಗ್ರಾಂ ಕಚ್ಚಾ ಚಿನ್ನದ ಕಟ್ ಚೈನ್‌ಗಳು, ಬಳೆಗಳು ಮತ್ತು ಪೆಂಡೆಂಟ್‌ಗಳನ್ನು ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದರು. ಇದರ ಮೌಲ್ಯ 12,51,203 ರೂ. ಎಂದು ಅವರು ತಿಳಿಸಿದ್ದಾರೆ.

ಮದೀನಾ ಮತ್ತು ಬಹ್ರೇನ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ವಿದೇಶಿ ಮೂಲದ ಚಿನ್ನವನ್ನು, ಚೈನ್‌ಗಳು ಮತ್ತು ಸಣ್ಣ ಚಿನ್ನದ ಬಾರ್‌ಗಳ ರೂಪದಲ್ಲಿ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರು. ಅವರ ಅನುಮಾನಾಸ್ಪದ ವರ್ತನೆಯ ನಂತರ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಪಾಸಣೆಗೆ ಒಳಪಡಿಸಿದಾಗ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಪ್ರಯಾಣಿಕರಿಂದ 74,64,986 ರೂ. ಮೌಲ್ಯದ ಒಟ್ಟು 1.167 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com