ಯಾದಗಿರಿ: ಭಜರಂಗ ದಳದ ಕಾರ್ಯಕರ್ತರಿಂದ ಹಲ್ಲೆ ಆರೋಪ; ಯುವಕನ ವಿರುದ್ಧ ಪ್ರತಿದೂರು ದಾಖಲಿಸಿದ ಅಪ್ರಾಪ್ತೆ!

ಭಜರಂಗ ದಳದ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೊಬ್ಬ ದೂರು ನೀಡಿದ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾದಗಿರಿ: ಭಜರಂಗ ದಳದ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೊಬ್ಬ ದೂರು ನೀಡಿದ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಿಸಿದ್ದಾರೆ.

ಇದರ ನಡುವೆ ದೂರು ನೀಡಿದ್ದ ಯುವಕನ ವಿರುದ್ಧವೇ ಅಪ್ರಾಪ್ತೆಯೊಬ್ಬಳು ಅಪಹರಣ, ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಬೆದರಿಕೆ ಹಾಕಿದ್ದಾನೆಂದು ಪ್ರತಿದೂರು ದಾಖಲಿಸಿದ್ದಾಳೆ.

ಯಾದಗಿರಿಯ ಡಾನ್ ಬಾಸ್ಕೋ ಕಾಲೇಜಿನಲ್ಲಿ ಬಿಎಸ್ಸಿ ಪ್ರಥಮ ಸೆಮಿಸ್ಟರ್ ಓದುತ್ತಿರುವ ವಾಹಿದ್ ಉರ್ ರೆಹೆಮಾನ್ ಬಾದಲ್ ಮಾರ್ಚ್ 18 ರಂದು ಕಾಲೇಜಿನಿಂದ ಹಾಲ್ ಟಿಕೆಟ್ ತೆಗೆದುಕೊಂಡು ಮನೆಗೆ ಮರಳುತ್ತಿದ್ದಾಗ ಮಲ್ಲು ಅಲಿಯಾಸ್ ಡಾಲಿ ಮತ್ತು ತಾಯಪ್ಪ ನೇತೃತ್ವದ ಎಂಟು ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ಯಾದಗಿರಿ ಟೌನ್ ಪೊಲೀಸ್ ಠಾಣೆಯಲ್ಲಿ ಮಾ.19 ರಂದು ದೂರು ದಾಖಲಾಗಿದೆ.

ನಂತರ ತಂಡವು ಆತನನ್ನು ಜವಾಹರ ಪದವಿ ಕಾಲೇಜಿನ ಹಿಂದೆ ಕರೆದೊಯ್ದು ನಿಂದಿಸಿ, ಹುಡುಗಿಯನ್ನು ಈವ್ ಟೀಸಿಂಗ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಬೆಲ್ಟ್, ಪ್ಲಾಸ್ಟಿಕ್ ಪೈಪ್, ದೊಣ್ಣೆಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಅವರು ನನ್ನನ್ನು ಕೊಲ್ಲಲು ಬಯಸಿದ್ದರು, ಆದರೆ ನಾನು ತಪ್ಪಿಸಿಕೊಂಡು ಮನೆಗೆ ಬಂದು ನಂತರ ಆಸ್ಪತ್ರೆಗೆ ಹೋಗಿದ್ದಾಗಿ ಹೇಳಿದ್ದಾರೆ. ಮಲ್ಲು, ತಾಯಪ್ಪ, ಅಂಬರಸಿ, ಆದರ್ಶಗೌಡ, ಪವನಕುಮಾರ್, ಜಂಬು ಸೋಲಂಕಿ, ಬಾಪು ಸೋಲಂಕಿ ಮತ್ತು ರೂಪೇಶ್ ಕೋಳಿವಾಡ ಅವರು ಹಲ್ಲೆ ಮಾಡಿದ ಆರೋಪಿಗಳೆಂದು ದೂರಿನಲ್ಲಿ ವಾಹಿದ್ ಉಲ್ಲೇಖಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆಡ್‌ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ, ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!

ಅಪ್ರಾಪ್ತೆ ನೀಡಿದ ದೂರಿನಲ್ಲೇನಿದೆ?

ಮಾರ್ಚ್ 20 ರಂದು ಅಪ್ರಾಪ್ತ ಬಾಲಕಿಯೊಬ್ಬಳು ವಾಹಿದ್ ತನ್ನನ್ನು ಹಲವು ದಿನಗಳಿಂದ ಚುಡಾಯಿಸುತ್ತಿದ್ದ, ಕೆಲವು ದಿನಗಳ ಹಿಂದೆ ಬಲವಂತವಾಗಿ ಹತ್ತಿಕುಣಿ ಅಣೆಕಟ್ಟಿನ ಬಳಿ ತನ್ನನ್ನು ಕರೆದೊಯ್ದು ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಾಳೆ, ಆತನ ಸ್ನೇಹಿತನೊಬ್ಬ ಘಟನೆಯನ್ನು ವಿಡಿಯೋ ಗ್ರಾಫ್ ಮಾಡಿದ್ದಾನೆ. ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದಾನೆ, ಅವನ ಸಮುದಾಯದಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಯಾವುದೇ ನಿರ್ಬಂಧವಿಲ್ಲ. ಮದುವೆಯ ನಂತರ ಅವಳು ಉತ್ತಮ ಜೀವನವನ್ನು ನಡೆಸಬಹುದು ಎಂದು ಹೇಳಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಕೆಲವು ದಿನಗಳ ಹಿಂದೆ, ವಾಹಿದ್ ತನ್ನ ಮಾತು ಕೇಳದಿದ್ದರೇ ವೀಡಿಯೊ ಕ್ಲಿಪ್ಪಿಂಗ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುವುದಾಗಿ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದನು, ನಾನು ಅವನ ಮಾತನ್ನು ಕೇಳದಿದ್ದರೇ ಆತ ನನ್ನನ್ನು ಮತ್ತು ನನ್ನ ತಾಯಿಯನ್ನು ಕೊಲ್ಲುವುದಾಗಿ ಹೇಳಿದ್ದ, ಇದರಿಂದ ನಾನು ಸಂಬಂಧಿ ಜಂಬು ಸೋಲಂಕಿ ಅವರಿಗೆ ವಿಷಯ ತಿಳಿಸಿರುವುದಾಗಿ ಬಾಲಕಿ ಹೇಳಿದ್ದಾಳೆ.

ಜಂಬು ಸೋಲಂಕಿ, ಆಕೆಯ ತಾಯಿ, ತಂದೆ ಮತ್ತು ಇತರ ಕೆಲವು ಸಂಬಂಧಿಕರು ವಾಹಿದ್ ಅವರ ಮನೆಗೆ ಹೋಗಿ ಅವರ ಸಂಬಂಧಿಕರಾದ ಲಾಯಕ್ ಹುಸೇನ್ ಬಾದಲ್, ಇರ್ಫಾನ್ ಬಾದಲ್, ತನ್ವೀರ್ ಬಾದಲ್, ಮುಜೀಬ್ ಬಾದಲ್, ಮತೀನ್ ಗೋರಿ, ಗೋರಿ, ತಜ್ಮುಲ್, ಇಜಾಜ್ ಬಾದಲ್, ಇಮ್ರಾನ್ ಬಾದಲ್, ಮೌಲಾಲಿ ಅವರಿಗೆ ತಿಳಿಸಿದ್ದಾರೆ. ಬಾದಲ್, ಶಹಬಾಜ್ ಬಾದಲ್, ಆಸಿಫ್ ಮತ್ತು ಖುರಾಮ್ ಬಾದಲ್ ವಾಹಿದ್ ಬಾಲಕಿಗೆ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದೆವು.

ಸಾಂದರ್ಭಿಕ ಚಿತ್ರ
ಯಾದಗಿರಿ: ಮಾಜಿ ಶಾಸಕ ನಾಗನಗೌಡ ಕಂದಕೂರ ಹೃದಯಾಘಾತದಿಂದ ನಿಧನ

ವಾಹಿದ್‌ನ ಸಂಬಂಧಿಕರು ಇಂತಹ ಸಂಗತಿಗಳು ಸಾಮಾನ್ಯ ಮತ್ತು ಯಾರೂ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ತನ್ನ ಸಂಬಂಧಿಕರಿಗೆ ಹೇಳಿದರು, ಜೊತೆಗೆ ನನ್ನ ಸಂಬಂಧಿಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ವಾಹಿದ್ ಮತ್ತು ಆತನ ಸ್ನೇಹಿತರು ಮತ್ತು ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com