ಅನ್ಯ ಬಳಕೆಗೆ ಕುಡಿಯುವ ನೀರು: ನಿವಾಸಿಗಳಿಗೆ BWSSB 1.1 ಲಕ್ಷ ರೂಪಾಯಿ ದಂಡ!

ಕುಡಿಯುವ ನೀರನ್ನು ಅನ್ಯ ಬಳಕೆಗೆ ಬಳಸಿದ್ದಕ್ಕಾಗಿ ಅಪಾರ್ಟ್ ಮೆಂಟ್ ಸಂಕೀರ್ಣಗಳಿಗೆ ಹಾಗೂ ನಿವಾಸಿಗಳಿಗೆ ಬಿಡಬ್ಲ್ಯುಎಸ್ಎಸ್ ಬಿ 1,10,000 ರೂಪಾಯಿ ದಂಡ ವಿಧಿಸಿದೆ.
ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು (ಸಾಂಕೇತಿಕ ಚಿತ್ರ)
ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು (ಸಾಂಕೇತಿಕ ಚಿತ್ರ)

ಬೆಂಗಳೂರು: ಕುಡಿಯುವ ನೀರನ್ನು ಅನ್ಯ ಬಳಕೆಗೆ ಬಳಸಿದ್ದಕ್ಕಾಗಿ ಅಪಾರ್ಟ್ ಮೆಂಟ್ ಸಂಕೀರ್ಣಗಳಿಗೆ ಹಾಗೂ ನಿವಾಸಿಗಳಿಗೆ ಬಿಡಬ್ಲ್ಯುಎಸ್ಎಸ್ ಬಿ 1,10,000 ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸಬೇಕಿರುವವರು ಕುಡಿಯುವ ನೀರನ್ನು ವಾಹನ ಸ್ವಚ್ಛಗೊಳಿಸುವುದು ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಿಡಬ್ಲ್ಯುಎಸ್ಎಸ್ ಬಿ ಇಂಜಿನಿಯರ್ ಗಳ ಮಾಹಿತಿಯ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿನ ಅಲರ್ಟ್ ಹಾಗೂ ಮಾಹಿತಿ ಪಡೆದು ತಪಾಸಣೆ ನಡೆಸಿದಾಗ ಬೆಂಗಳೂರಿನ ಹಲವೆಡೆ ನಿವಾಸಿಗಳು ನೀರನ್ನು ವ್ಯರ್ಥ ಮಾಡುತ್ತಿರುವುದು ಕಂಡುಬಂದಿದೆ.

ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಕುಡಿಯುವ ನೀರಿಗೆ ಹೊರತುಪಡಿಸಿ ಅನ್ಯ ಉದ್ದೇಶಗಳಿಗಾಗಿ ನೀರನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಬೆಂಗಳೂರಿನ ಆಗ್ನೇಯ, ನೈಋತ್ಯ, ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಈ ಆದೇಶವನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ.

ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು (ಸಾಂಕೇತಿಕ ಚಿತ್ರ)
ಬೆಂಗಳೂರಿಗೆ 500 ಎಂಎಲ್ ಡಿ ನೀರಿನ ಕೊರತೆ: ಸಿಎಂ ಸಿದ್ದರಾಮಯ್ಯ

‘‘ಕಳೆದ ಶುಕ್ರವಾರ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಭಾನುವಾರದವರೆಗೆ ಮೂರು ದಿನಗಳಲ್ಲಿ 22 ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ. ರಶೀದಿ ನೀಡಿ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗಿದೆ. ಆಗ್ನೇಯ ವಿಭಾಗದಲ್ಲಿ 65 ಸಾವಿರ ದಂಡ ವಿಧಿಸಲಾಗಿದ್ದು, ಅದೇ ರೀತಿ ಉತ್ತರದಲ್ಲೂ ವಿಭಾಗದಲ್ಲಿ ರೂ.15,000, ಪೂರ್ವ, 15,000 ಮತ್ತು ನೈಋತ್ಯದಲ್ಲಿ ರೂ.15,000 ದಂಡವನ್ನು ವಿಧಿಸಲಾಗಿದೆ ಮತ್ತು ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಕುಡಿಯುವ ನೀರನ್ನು ವ್ಯರ್ಥ ಮಾಡದಂತೆ ಕೇಳಲಾಯಿತು,'' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ತಲೆದೋರಿದ ನೀರಿನ ಸಮಸ್ಯೆ: ಸ್ವಿಮ್ಮಿಂಗ್ ಪೂಲ್ ಗಳಿಗೆ ಕಾವೇರಿ ನೀರು ಬಳಸಿದರೆ ರೂ.5000 ದಂಡ

ವಾಹನಗಳನ್ನು ಸ್ವಚ್ಛಗೊಳಿಸಲು, ತೋಟಗಾರಿಕೆ, ಕಟ್ಟಡ ನಿರ್ಮಾಣ, ಚಾಲನೆಯಲ್ಲಿರುವ ಕಾರಂಜಿಗಳು ಮತ್ತು ಮನರಂಜನಾ ಉದ್ದೇಶಗಳಿಗಾಗಿ ನಗರದಲ್ಲಿ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು BWSSB ಆದೇಶಿಸಿದೆ. ಚಲನಚಿತ್ರ ಮಂದಿರಗಳು ಮತ್ತು ಮಾಲ್‌ಗಳಲ್ಲಿ ಕುಡಿಯುವ ನೀರು ಮತ್ತು ರಸ್ತೆ ನಿರ್ಮಾಣಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ ಮತ್ತು ಅಂತಹ ಉದ್ದೇಶಗಳಿಗೆ ಮರುಬಳಕೆಯ ನೀರನ್ನು ಮಾತ್ರ ಬಳಸಬೇಕೆಂದು ಮಂಡಳಿಯು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com