ಮನೆ ಖರೀದಿದಾರರ ಸಮಸ್ಯೆಗಳು: 15 ದಿನಗಳೊಳಗೆ ವರದಿ ಕೇಳಿದ ಕಂದಾಯ ಇಲಾಖೆ

ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ತಾವು ಹಲವು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಲಿಖಿತ ದೂರಿನ ಮೇರೆಗೆ ಕಂದಾಯ ಇಲಾಖೆಯು ಹದಿನೈದು ದಿನದೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ನೋಂದಣಿ ಮಹಾನಿರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಿಗೆ ಪತ್ರ ಬರೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ತಾವು ಹಲವು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಲಿಖಿತ ದೂರಿನ ಮೇರೆಗೆ ಕಂದಾಯ ಇಲಾಖೆಯು ಹದಿನೈದು ದಿನದೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ನೋಂದಣಿ ಮಹಾನಿರೀಕ್ಷಕರು ಮತ್ತು ಮುದ್ರಾಂಕ ಶುಲ್ಕ ಇಲಾಖೆ ಆಯುಕ್ತರಿಗೆ ಪತ್ರ ಸೂಚನೆ ನೀಡಿದೆ.

ಕರ್ನಾಟಕ ಮನೆ ಖರೀದಿದಾರರ ವೇದಿಕೆ (KHBF) ಸಲ್ಲಿಸಿದ ದೂರನ್ನು ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದ್ದು, ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಎಜಿ ಮೀನಾ ಅವರು ಸಹಿ ಮಾಡಿದ ಪತ್ರವನ್ನು ಬಿ ಆರ್ ಮಮತಾ ಅವರು ಲಗತ್ತಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕಂದಾಯ ಇಲಾಖೆ ಎಲ್ಲಾ ಕಚೇರಿಗಳು ಶೀಘ್ರದಲ್ಲೇ ಡಿಜಿಟಲೀಕರಣಗೊಳ್ಳಲಿವೆ: ಸಚಿವ ಕೃಷ್ಣ ಭೈರೇಗೌಡ

ಮಾರ್ಚ್ 3 ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಹೇಶ್ ಅವರಿಗೆ ಕರ್ನಾಟಕ ಮನೆ ಖರೀದಿದಾರರ ವೇದಿಕೆ ಸಲ್ಲಿಸಿದ ದೂರಿನಲ್ಲಿ, ಸೆಪ್ಟೆಂಬರ್ 13 ರಂದು ಅದರ ಸದಸ್ಯರು ಮಹಾನಿರೀಕ್ಷಕರೊಂದಿಗೆ ನಡೆಸಿದ ಸಂವಾದ ಮತ್ತು ಮನೆ ಖರೀದಿದಾರರ ಪರವಾಗಿ ಮಾಡಿದ ಹಲವಾರು ಮನವಿಗಳನ್ನು ಇಲ್ಲಿ ನೋಡಬಹುದಾಗಿದೆ.

"ಕರ್ತವ್ಯ ಲೋಪ ಮತ್ತು ಮನೆ ಖರೀದಿದಾರರ ದೂರುಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿರುವುದು" ಎಂಬ ಪದಗಳನ್ನು ಪತ್ರದಲ್ಲಿ ನಮೂದಿಸಲಾಗಿದ್ದು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಸಲ್ಲಿಸಿದ ಮನವಿಗಳನ್ನು ವಿವರಿಸುತ್ತಾ, KHBF ಸಂಚಾಲಕ ಧನಂಜಯ ಪದ್ಮನಾಬಾಚಾರ್ TNIE ಜೊತೆ ಮಾತನಾಡಿ, “ನೋಂದಣಿ ಕಾಯ್ದೆಗೆ ಅನುಗುಣವಾಗಿ ಉಲ್ಲಂಘನೆಗಳಿದ್ದರೆ ಫ್ಲಾಟ್‌ಗಳ ನೋಂದಣಿಯನ್ನು ನಿಲ್ಲಿಸಬೇಕೆಂದು ನಾವು ಪದೇ ಪದೇ ಮನವಿ ಮಾಡಿದ್ದೇವೆ. ಮಾರ್ಚ್ 20, 2023 ರಂದು ಹೈಕೋರ್ಟ್ ಆದೇಶವು ಮಾರಾಟ ಪತ್ರಗಳನ್ನು ಅವಿಭಜಿತ ಷೇರುಗಳೊಂದಿಗೆ ಮಾತ್ರ ಕಾರ್ಯಗತಗೊಳಿಸಬಹುದು ಎಂದು ಹೇಳುತ್ತದೆ.

ಮನೆ ಖರೀದಿದಾರರ ಭೂಮಿಯ ಹಕ್ಕುಗಳನ್ನು ಕಸಿದುಕೊಳ್ಳಲು ಕಾರಣವಾಗಿರುವ ಅಕ್ರಮಗಳ ವಿರುದ್ಧ ಐಜಿಆರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿರುವ ಜಮೀನು ಹೊಂದಿರುವ ಫ್ಲಾಟ್ ಮಾಲೀಕರ ಒಪ್ಪಿಗೆಯಿಲ್ಲದೆ ಬ್ಯಾಂಕ್‌ಗಳಿಗೆ ಅಡಮಾನವಿಟ್ಟುಕೊಂಡು ಹಲವಾರು ಭೂ ಹಗರಣಗಳು ನಡೆಯುತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. "ಅಂತಹ ಅಡಮಾನವಿಟ್ಟ ಆಸ್ತಿಗಳ ದಾಖಲೆಯನ್ನು ಸಹ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲಾಗಿಲ್ಲ" ಎಂದು ಅವರು ಹೇಳಿದ್ದಾರೆ.

ಖಾತಾ ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಫ್ಲಾಟ್‌ಗಳ ನೋಂದಣಿ ಸಮಯದಲ್ಲಿ ಕಡ್ಡಾಯ ದಾಖಲೆಗಳಾಗಿವೆ, ಆದರೆ ಕೆಲವು ಪ್ರಕರಣಗಳಲ್ಲಿ ಖಾಟಾ ಅಥವಾ ಆಕ್ಯುಪೆನ್ಸಿ ಪ್ರಮಾಣಪತ್ರಗಳಿಲ್ಲದೆ ಸೇಲ್ ಡೀಡ್‌ಗಳನ್ನು ನೋಂದಾಯಿಸಲಾಗುತ್ತದೆ ಎಂದು ಅವರು ಹೇಳಿದರು. ಅಕ್ರಮಗಳಿಂದ ಪಾರಾದ ಕೆಲವು ಬಿಲ್ಡರ್‌ಗಳ ಹೆಸರನ್ನೂ ಅವರು ಪಟ್ಟಿ ಮಾಡಿದರು.

ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಮಮತಾ ಅವರು ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com