ಚುನಾವಣಾ ಬಾಂಡ್ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ, ಮೋದಿ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಹೆಚ್‌.ಕೆ. ಪಾಟೀಲ್ ಆಗ್ರಹ

ಚುನಾವಣಾ ಬಾಂಡ್ ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು, ಮೋದಿ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಕೆ. ಪಾಟೀಲ್ ಅವರು ಆಗ್ರಹಿಸಿದ್ದಾರೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್
Updated on

ಗದಗ: ಚುನಾವಣಾ ಬಾಂಡ್ ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು, ಮೋದಿ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಕೆ. ಪಾಟೀಲ್ ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಷ್ಟೇ ತೊಡಗಿಸಿಕೊಂಡಿಲ್ಲ. ಚುನಾವಣಾ ಬಾಂಡ್‌ ವಿಚಾರದಲ್ಲಿ ಹಲವರನ್ನು ಶೋಷಣೆ ಮಾಡಿ ಅವರಿಂದ ಹಣ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಇದು ಅತ್ಯಂತ ದೊಡ್ಡ ಹಗರಣವಾಗಿದೆ. ಭ್ರಷ್ಟಾಚಾರದ ಮುಂದಿನ ಹಂತವೇ ಹಿಂಸಾತ್ಮಕ ಶೋಷಣೆ. ದೇಣಿಗೆ ಪಡೆಯಲು ಇಂತಹ ಮಾರ್ಗ ಅನುಸರಿಸಿರುವ ರಾಜಕೀಯ ಪಕ್ಷ ಜಗತ್ತಿನಲ್ಲಿ ಎಲ್ಲೂ ಇಲ್ಲ. ಚುನಾವಣಾ ಬಾಂಡ್‌ ವಿಷಯದಲ್ಲಿ ಪ್ರಧಾನಿ ಮೋದಿ ಅವರ ಸುತ್ತ ಆರೋಪದ ಮೋಡಗಳು ಕವಿದಿವೆ. ಅದಕ್ಕೆ ಚುನಾವಣಾ ಬಾಂಡ್‌ ಮತ್ತು ರಾಜಕೀಯ ಪಕ್ಷಗಳಿಗೆ ಬಂದಿರುವ ಹಣದ ಬಗ್ಗೆ ಚುನಾವಣೆಗೂ ಮುನ್ನ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಚ್.ಕೆ ಪಾಟೀಲ್
ಚುನಾವಣಾ ಬಾಂಡ್ ಸ್ಕೀಮ್ ಜಗತ್ತಿನ ಅತಿ ದೊಡ್ಡ ಹಗರಣ: ನಟ ಪ್ರಕಾಶ್ ರಾಜ್

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರೋಚಕ ಸುದ್ದಿಗಳು ಒಂದೊಂದೇ ಹೊರಬರುತ್ತಿವೆ. ಕೆಲವು ಸುಪ್ರೀಂಕೋರ್ಟ್ ಮೂಲಕ ಬೆಳಕಿಗೆ ಬರುತ್ತಿದ್ದರೆ; ಮತ್ತೆ ಕೆಲವು ಬಿಜೆಪಿ ಜತೆಯಲ್ಲಿದ್ದವರ ಮೂಲಕವೇ ಬರುತ್ತಿವೆ. ಮತ್ತೊಂದಿಷ್ಟು ಸಂಘ-ಸಂಸ್ಥೆ, ಮಾಧ್ಯಮಗಳ ಮೂಲಕ ಜನತೆಗೆ ತಿಳಿಯುತ್ತಿದ್ದು, ಬಿಜೆಪಿ ಆಡಳಿತ ನಿಜವಾದ ಬಣ್ಣ ಜನರ ಮುಂದೆ ಕಳಚುತ್ತಿದೆ ಎಂದು ಹೇಳಿದರು.

ಚುನಾವಣಾ ಬಾಂಡ್‌ಗಳ ಮೂಲಕ ಅಧಿಕೃತ ವಾಗಿಯೇ ಇಷ್ಟು ಹಣ ಪಡೆದಿದ್ದು ಒಂದೆಡೆಯಾದರೆ, ಖಾಸಗಿಯಾಗಿ ಎಷ್ಟು ಪಡೆದಿರಬಹುದು? ಇದರಲ್ಲಿ ಕಪ್ಪುಹಣ ಎಷ್ಟಿರಬಹುದು? ಎಂದು ಜನರು ಯೋಚಿಸುತ್ತಿದ್ದಾರೆ. ಯಾರೆಲ್ಲ ದೊಡ್ಡ ಕುಳಗಳು ಚುನಾವಣಾ ಬಾಂಡ್‌ ಖರೀದಿಸಿದ್ದಾರೆ? ಖರೀದಿಗೂ ಮುನ್ನ ಅವರ ಮೇಲೆ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಐಟಿ ಪ್ರಕರಣಗಳು ಎಷ್ಟಿದ್ದವು? ಈ ಅಂಶಗಳನ್ನು ಮೊದಲು ಗುರುತಿಸಬೇಕು. ಚುನಾವಣಾ ಬಾಂಡ್‌ ಖರೀದಿಸಿದ ಬಳಿಕ ಅವರ ವಿರುದ್ಧ ಇದ್ದ ಪ್ರಕರಣಗಳ ತನಿಖೆ ಸ್ಥಗಿತಗೊಂಡಿದ್ದರೆ ಅಥವಾ ಪೂರ್ಣಗೊಂಡಿದ್ದರೆ ಅದರ ಮಾಹಿತಿಯನ್ನು ಜನರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com