ಬಿಟ್‌ಕಾಯಿನ್ ಹಗರಣ: ಡೇಟಾವನ್ನು ಇನ್ಸ್‌ಪೆಕ್ಟರ್ ತಿದ್ದಿರುವುದು FSL, C-DAC ವರದಿಗಳಲ್ಲಿ ಬಹಿರಂಗ

ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ)ನ ತಾಂತ್ರಿಕ ಬೆಂಬಲ ಕೇಂದ್ರದ ಉಸ್ತುವಾರಿ ವಹಿಸಿದ್ದ ಬಾಬು, ಮ್ಯಾಕ್‌ಬುಕ್, ಲ್ಯಾಪ್‌ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಹೆಚ್ಚುವರಿ ಫೈಲ್‌ಗಳನ್ನು ರಚಿಸುವ ಮೂಲಕ ಡೇಟಾವನ್ನು ತಿರುಚಿದ ಮತ್ತು ಪ್ರಮುಖ ಸಾಕ್ಷ್ಯಗಳನ್ನು ನಾಶ ಮಾಡಿರುವುದು ಪತ್ತೆಯಾಗಿದೆ.
Representational
RepresentationalTNIE
Updated on

ಬೆಂಗಳೂರು: ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಬಂದಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಮತ್ತು ಸಿ-ಡಾಕ್ (ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್) ವರದಿಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಡಿಎಂ ಎಲೆಕ್ಟ್ರಾನಿಕ್ ಡೇಟಾವನ್ನು ತಿರುಚಿದ್ದಾರೆ ಎಂದು ಬಹಿರಂಗಪಡಿಸಿದೆ.

ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ)ನ ತಾಂತ್ರಿಕ ಬೆಂಬಲ ಕೇಂದ್ರದ ಉಸ್ತುವಾರಿ ವಹಿಸಿದ್ದ ಬಾಬು, ಮ್ಯಾಕ್‌ಬುಕ್, ಲ್ಯಾಪ್‌ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಹೆಚ್ಚುವರಿ ಫೈಲ್‌ಗಳನ್ನು ರಚಿಸುವ ಮೂಲಕ ಡೇಟಾವನ್ನು ತಿರುಚಿದ ಮತ್ತು ಪ್ರಮುಖ ಸಾಕ್ಷ್ಯಗಳನ್ನು ನಾಶ ಮಾಡಿರುವುದು ಪತ್ತೆಯಾಗಿದೆ.

ಎಫ್‌ಎಸ್‌ಎಲ್ ವರದಿಯನ್ನು ಆಧರಿಸಿ ಕಾಟನ್‌ಪೇಟೆ ಪೊಲೀಸರೊಂದಿಗೆ ಸಿಐಡಿ ದಾಖಲಿಸಿರುವ ಅಪರಾಧ ಪ್ರಕರಣದಲ್ಲಿ ಪ್ರಶಾಂತ್ ಬಾಬು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿರುದ್ಧ ಸಿಐಡಿ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಯಶವಂತ್ ಕುಮಾರ್ ಅವರ ಮುಂದೆ ಸಲ್ಲಿಸಿದ ಆಕ್ಷೇಪಣೆಗಳ ಹೇಳಿಕೆಯಲ್ಲಿ ಸಿಐಡಿ ಇದನ್ನು ಬಹಿರಂಗಪಡಿಸಿದೆ. 2020ರಲ್ಲಿ ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧದಲ್ಲಿ ವಶಪಡಿಸಿಕೊಂಡ ಲ್ಯಾಪ್‌ಟಾಪ್‌ಗಳು, ಮ್ಯಾಕ್‌ಬುಕ್‌ಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತಿರುಚಲಾಗಿದೆ ಎಂದು ಸಿಐಡಿ ಬಹಿರಂಗಪಡಿಸಿದೆ.

Representational
ಬಿಟ್ ಕಾಯಿನ್ ಹಗರಣ: ‘ತಮ್ಮ ವ್ಯಾಲೆಟ್‌ಗಳಿಗೆ ಕ್ರಿಪ್ಟೋ ಕರೆನ್ಸಿ ವರ್ಗಾಯಿಸಿಕೊಳ್ಳಲು ಶ್ರೀಕಿಗೆ ಡ್ರಗ್ಸ್ ನೀಡಿದ ಪೊಲೀಸರು’

ಡಿಜಿಟಲ್ ಸಾಧನಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ನಿರ್ವಹಿಸುವಲ್ಲಿ ಬಾಬು ಪರಿಣತಿ ಹೊಂದಿದ್ದರು ಎಂದು ಸಿಐಡಿ ಹೇಳಿದೆ. ತನಿಖಾಧಿಕಾರಿ ಶ್ರೀಧರ್ ಪೂಜಾರ್ ಅವರು ನ್ಯಾಯಾಲಯದ ಅನುಮತಿಯೊಂದಿಗೆ ಮ್ಯಾಕ್‌ಬುಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆದುಕೊಂಡ ನಂತರ, ಅವುಗಳನ್ನು ನವೆಂಬರ್ 21, 2020ರಂದು ಬೆಂಬಲ ಕೇಂದ್ರಕ್ಕೆ ರವಾನಿಸಿದ್ದರು.

ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಬಾಬು, ಖಾಸಗಿ ವ್ಯಕ್ತಿಯ ಸಹಾಯದಿಂದ, ಎಫ್‌ಎಸ್‌ಎಲ್‌ನಿಂದ ಬ್ಲ್ಯಾಕ್ ಲೈಟ್ ಉಪಕರಣವನ್ನು ಪಡೆದುಕೊಂಡರು. ಅನಧಿಕೃತವಾಗಿ ಮಿರರ್ ಇಮೇಜಿಂಗ್ ನಡೆಸುತ್ತಿದ್ದರು. ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಸೇರಿದಂತೆ ಹಲವು ಕಡತಗಳನ್ನು ನಕಲು ಮಾಡಿ ಬಾಹ್ಯ ಕಂಪ್ಯೂಟರ್‌ಗಳಿಗೆ ವರ್ಗಾಯಿಸುವಂತೆ ಪೂಜಾರ್ ಖಾಸಗಿ ವ್ಯಕ್ತಿಯ ಮೇಲೆ ಅನಗತ್ಯ ಒತ್ತಡ ಹೇರಿದ್ದರು ಎಂದು ಸಿಐಡಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com