
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ? ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕ ರಾಜು ಕಾಗೆ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ
ಬೆಳಗಾವಿಯ ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಪ್ರಧಾನಿ ಆಗೋದೇ ಇಲ್ಲವಾ? ಮೊದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನೋಡುತ್ತಾರಾ? ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರುವುದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ ಅವರು 3,000 ಕೋಟಿ ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ ಇಂಥವರನ್ನು ತಗೊಂಡು ಏನು ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ನಾನೂ ವಿದ್ಯಾವಂತ ಇದ್ದೀನಿ, ನನಗೂ ಬುದ್ಧಿ ಇದೆ, ನಾನೇನು ಕುರಿ ಅಲ್ಲ. ನಾನು ಸಹ ಈ ದೇಶವನ್ನ ಸಮರ್ಥವಾಗಿ ಮುನ್ನಡೆಸುತ್ತೇನೆ ಎನ್ನುವ ಆತ್ಮವಿಶ್ವಾಸ ಇದೆ ಎಂದು ಹೇಳಿದ್ದಾರೆ
Advertisement